13Mudigere1A

 

 

ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಎಲ್ಲಾ ಪಕ್ಷ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರೆಲ್ಲರೂ ಸೇರಿ ಮೂಡಿಗೆರೆಯಲ್ಲಿ ಜನವರಿ 1ರಂದು ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಭೀಮ ಕೋರೆಗಾಂವ್ ವಿಜಯೋತ್ಸವ ಸಮಿತಿ ಅಧ್ಯಕ್ಷ ಸಿದ್ದೇಶ್ ಕೆಸವೊಳಲು ಹೇಳಿದರು.

ಅವರು ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಇತಿಹಾಸದಲ್ಲೇ ಹೆಸರಾದ ಕದನವೊಂದಿದ್ದರೆ ಅದು ಭೀಮ ಕೋರೆಗಾಂವ್ ಯುದ್ಧ. 1818ರಲ್ಲಿ 28 ಸಾವಿರ ಮಂದಿ ಸೈನ್ಯರ ವಿರುದ್ಧ 500 ಮಂದಿ ಮಹರ್ ಸೈನಿಕರು ನಿರಂತರ 12 ಗಂಟೆ ಹೋರಾಟ ನಡೆಸಿ ಗೆಲುವು ಸಾಧಿಸಿದ ಯುದ್ಧವಾಗಿದೆ. ಇದು ಕೇವಲ ದಲಿತ ಜನಾಂಗ ಮಾತ್ರವಲ್ಲ ಎಲ್ಲಾ ಶೋಷಿತರ ವಿಮೋಚನೆಗಾಗಿ, ಶಿಕ್ಷಣ, ಸ್ವಾಭಿಮಾನ, ಸಮಾನತೆಗಾಗಿ ಹೋರಾಟ ನಡೆಸಿದ ಯುದ್ಧದ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

ಪ.ಪಂ. ಉಪಾಧ್ಯಕ್ಷ ಹೊಸ್ಕೆರೆ ರಮೇಶ್ ಮಾತನಾಡಿ, ಭಿಮ ಕೋರೆಗಾಂವ್ ವಿಜಯೋತ್ಸವವನ್ನು ಇಡೀ ದೇಶಾಧ್ಯಂತ ಆಚರಣೆ ಮಾಡಲಾಗುತ್ತಿದೆ. ವರ್ಷ ಕಳೆದಂತೆ ಈ ಆಚರಣೆ ಅದ್ದೂರಿಯಾಗಿ ನಡೆಯಲಾರಂಭಿಸಿದೆ. ಹಾಗಾಗಿ ಮೂಡಿಗೆರೆಯಲ್ಲಿಯೂ ಕೂಡ ಈ ಬಾರಿ ಸುಮಾರು 5 ಸಾವಿರಕ್ಕೂ ಅಧಿಕ ಸಮಖ್ಯೆಯಲ್ಲಿ ಎಲ್ಲಾ ಪಕ್ಷ, ಪ್ರಗತಿಪರ ಸಂಘಟನೆ ಮುಖಂಡರು ಸೇರಿ ಭೀಮ ಕೋರೆಗಾಂವ್ ವಿಜಯೋತ್ಸವ ಆಚರಿಸಲು ಈಗಾಗಲೇ 3 ಸಭೆ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ಉತ್ತಮ ವಾಗ್ಮಿಗಳನ್ನು ಕರೆಸಿ ಉಪನ್ಯಾಸ ನೀಡಲಾಗುವುದು. ಹಾಗಾಗಿ ಎಲ್ಲಾ ಪ್ರಗತಿಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಕಾರ್ಯದರ್ಶಿ ಬಕ್ಕಿ ಕುಮಾರ್, ಮುಖಂಡರಾದ ಸುಧೀರ್ ಚಕ್ರಮಣಿ, ಎಲ್.ಬಿ.ರಮೇಶ್, ಬಿ.ಎಂ.ಶಂಕರ್, ಬಕ್ಕಿ ಮಂಜು, ರತನ್ ಊರುಬಗೆ, ನಾಗೇಶ್, ಯಡ್ದಾಳ್ ಅಭಿಜಿತ್, ಸುರೇಶ್ ಹೆಸಗಲ್, ರವಿ ಹೆಸಗಲ್, ಸುನಿಲ್ ಬೈರಾಪುರ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ