ಅದ್ದೂರಿ ಮತ್ತು ಆಡಂಭರದ ಈ ಕಾಲದಲ್ಲಿ ಇಲ್ಲೊಂದು ಜೋಡಿ ಸರಳ ಮದುವೆಯಾಗಿದ್ದಾರೆ. ಜೊತೆಗೆ ಉಳಿಕೆ ಹಣವನ್ನು ವಿಶಿಷ್ಠ ಸೇವಾ ಕಾರ್ಯಕ್ಕೆ ವಿನಿಯೋಗಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಾಸನದ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ಇಂಜಿನಿಯರ್ ಶಿವಕುಮಾರ್ ಮತ್ತು ಮಂಡ್ಯದ ಸಂಗೀತಾ ಅವರು ಸರಳ ವಿವಾಹದಿಂದ 5 ಲಕ್ಷ ರೂಪಾಯಿ ಉಳಿಸಿ, 26 ಶಾಲೆಗಳಿಗೆ ಶುದ್ಧ ನೀರಿನ ಯಂತ್ರಗಳನ್ನು ದಾನ ಮಾಡಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ಇಂಜಿನಿಯರ್ ಆಗಿರುವ ವಧು ಶಿವಕುಮಾರ್ ಮತ್ತು ಮಂಡ್ಯ ನಿವಾಸಿ ಸಂಗೀತಾ ಅವರು ನವೆಂಬರ್ 11ರಂದು ಸರಳ ವಿವಾಹವಾಗಿದ್ದಾರೆ. ಆ ಮೂಲಕ ರೂ. 5 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿಸಿದ್ದಾರೆ.
ಈ ನವಜೋಡಿ ಉಳಿಸಿದ 5 ಲಕ್ಷಕ್ಕೂ ಹೆಚ್ಚಿನ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನೀಡಿದ್ದಾರೆ. ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರೈತ ಸಂಘದ ಮುಖಂಡ ಹೊ.ತಿ.ಹುಚ್ಚಪ್ಪ ಅವರ ಪ್ರೇರಣೆಯಿಂದ ಈ ಕಾರ್ಯ ಮಾಡಿದ್ದಾರೆ ಎಂದು ನವಜೋಡಿ ತಿಳಿಸಿದ್ದಾರೆ.




