ಭಾರತ ಮಾತೆ ಮತ್ತು ಕನ್ನಡಾಂಬೆಯ ಮಕ್ಕಳಾದ ನಾವು ಕನ್ನಡ ತಾಯಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಕೃಷ್ಣೇಗೌಡ ಬಿ ಹೊಸಳ್ಳಿ ತಿಳಿಸಿದರು.
ಅವರು ಮೂಡಿಗೆರೆ ತಾಲ್ಲೂಕಿನ ಭಾರತಿಬೈಲಿನಲ್ಲಿ ಸೇವಾ ಭಾರತಿ ಸಮಾಜ ಸೇವಾ ಸಮಿತಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ. ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತಾಂಬೆಯ ಮಡಿಲಿನ ಕನ್ನಡ ತಾಯಿಯ ಮಕ್ಕಳಾದ ನಾವೆಲ್ಲರೂ ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಯನ್ನು ಉಳಿಸುವ ಮೂಲಕ. ಕನ್ನಡವನ್ನು ಬರೀ ಆಡಳಿತ ಭಾಷೆಯಾಗಿ ಅಲ್ಲದೆ ಅನ್ನದ ಭಾಷೆಯಾಗಿಯು ಬಳಸೋಣ. ಕನ್ನಡ ನಾಡನ್ನು ಕಟ್ಟಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು. ಇಂದು ಕನ್ನಡ ಭಾಷೆಯು ಗ್ರಾಮೀಣ ಭಾಗಗಳಿಗೆ ಮಾತ್ರ ಸೀಮಿತವಾಗುತ್ತಿದ್ದು. ಕನ್ನಡವನ್ನು ಬಲ್ಲವರು ಕೂಡ ಅನ್ಯ ಭಾಷೆ ಮಾತನಾಡುವ ದೊಡ್ಡಸ್ಥಿಕೆ ಮೆರೆಯುತ್ತಿದ್ದು ಇದು ಸಲ್ಲದು. ಕನ್ನಡ ಕೀಳರಿಮೆ ಭಾಷೆಯಲ್ಲ. ಇದನ್ನು ನಮ್ಮ ಮಕ್ಕಳಿಗೆ ಸ್ವಾಭಿಮಾನದ ಭಾಷೆಯಾಗಿ ಕಲಿಸೋಣ. ಈ ಮೂಲಕ ರನ್ನ. ಪೊನ್ನ. ಕುಮಾರವ್ಯಾಸ. ರಾಘವಾಂಕರು ಸೇರಿದಂತೆ ಆಧುನಿಕ ಯುಗದ ಕುವೆಂಪು. ಬೇಂದ್ರೆ. ಕಾರಂತರ. ನಡೆ-ನುಡಿಗಳನ್ನು ಉಳಿಸಿ ಇತಿಹಾಸದ ಸ್ಥಾನಮಾನ ಇರುವ ಭಾಷೆ ಕನ್ನಡ ತಾಯಿಯ ಸಮನಾಗಿದ್ದು. ಇದನ್ನು ಕಟ್ಟಿ ಬೆಳೆಸುವ ಮೂಲಕ ನಮನ ಸಲ್ಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ಬಿ.ಹೊಸಳ್ಳಿ ಗ್ರಾ.ಪಂ. ಅಧ್ಯಕ್ಷ ಆಶ್ರೀತ್. ಸದಸ್ಯೆ ನಾಟ್ಯ ರಂಜಿತ್, ಮಾಜಿ ಅಧ್ಯಕ್ಷ ರವಿಗೌಡ. ರಂಜಿತ್ ಕನ್ನಗೆರೆ. ಶಶಿಧರ್ ಹೊಸಳ್ಳಿ. ನಯನತಳವಾರ. ರಂಜಿತ್ ಕನ್ನಗೆರೆ. ಪುಟ್ಟಣ್ಣ. ನವೀನ್. ಆದರ್ಶ್. ಶಶಿ. ಮತ್ತಿತರರು ಇದ್ದರು.



