15ktg1

 

 

ಮಕ್ಕಳ ಹುಣ್ಣಿಮೆಯ ದಿನ ನಡೆಯುವ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ಬಾನಹಳ್ಳಿಯ ಹುಣ್ಣಕ್ಕಿ ಉತ್ಸವ ಗುರುವಾರದಂದು ವಿಜೃಂಭಣೆಯಿಂದ ನಡೆಯಿತು.  ಹುಣ್ಣಕ್ಕಿ ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತಾಧಿಗಳು ಪಾಲ್ಗೊಂಡರು.

ರಾತ್ರಿ 7 ರಿಂದ 9 ರ ವರೆಗೆ ಹುಣ್ಣಿಮೆ ಬೆಳದಿಂಗಳಲ್ಲಿ ಉತ್ಸವವನ್ನು ಆಚರಿಸಲಾಗುತ್ತದೆ. ಬಾನಳ್ಳಿ ಗ್ರಾಮದಲ್ಲಿರುವ ಬೃಹತ್ ಗಾತ್ರದ ಉಣ್ಣಕ್ಕಿ ಹುತ್ತವು  ಉತ್ಸವದ ಮಹಾಮಂಗಳಾರತಿ ವೇಳೆಯಲ್ಲಿ ಅಲುಗಾಡುತ್ತದೆ ಎಂಬ ಪ್ರತೀತಿಯಿದ್ದು, ಈ ವರ್ಷವೂ ಸಹ ಮಂಗಳಾರತಿ ವೇಳೆ ಹುತ್ತ ಅಲುಗಾಡಿದ ಕ್ಷಣಗಳನ್ನು ಭಕ್ತರು ಕಣ್ತುಂಬಿಕೊಂಡರು.

ಹುತ್ತಕ್ಕೆ ಸುಣ್ಣವನ್ನು ಬಳಿದು ಚೆಂಡು ಹೂವು, ಮಲ್ಲಿಗೆ, ಹಸಿರು ಚಪ್ಪರ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಮಹಾಮಂಗಳಾರತಿಯ ಸಮಯದಲ್ಲಿ ಹುತ್ತ ಅಲುಗಾಡುವ ವಿಸ್ಮಯವನ್ನು ಕಣ್ತುಂಬಿಕೊಂಡ ಭಕ್ತಾದಿಗಳು, ನಂತರ ಎರಡು ಕರುಗಳ ಕೊರಳಿಗೆ ಹೂವಿನ ಹಾರವನ್ನು ಹಾಕಿ ಅದಕ್ಕೆ ಮಡೆ ಅನ್ನವನ್ನು ಕೊಟ್ಟು ಹುತ್ತದ ಸುತ್ತ ಪ್ರದಕ್ಷಿಣೆ ಹಾಕುವ ಸಂದರ್ಭದಲ್ಲಿ ಸೇರಿರುವ ಭಕ್ತಾದಿಗಳು ಕರುಗಳ ಮೇಲೆ ಮಂಡಕ್ಕಿಯನ್ನು ಎರಚಿ ತಮ್ಮ ಹರಕೆಯನ್ನು ತೀರಿಸಿದರು.

ಉತ್ಸವದ ಅಂಗವಾಗಿ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ವಿವಿಧ ಪೂಜಾ ವಿಧಿವಿಧಾನಗಳು ವಿಜೃಂಭಣೆಯಿಂದ ನೆರವೇರಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ