ನವೆಂಬರ್ 26 ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಮೂಡಿಗೆರೆ ಜೈಭೀಮ್ ಹಾಲ್ ನಲ್ಲಿ ದಲಿತ ಸಾಹಿತ್ಯ ಪರಿಷತ್ತು (ರಿ.,)ಮೂಡಿಗೆರೆ ಘಟಕದ ವತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.
ಸಭೆಯಲ್ಲಿ ಸಂವಿಧಾನ ಕುರಿತು ಜಿ.ಪಂ. ಮಾಜಿ ಸದಸ್ಯ, ಕಾಂಗ್ರೇಸ್ ಜಿಲ್ಲಾ ವಕ್ತಾರ ಎಂ.ಎಸ್. ಅನಂತ್ ಮಾತನಾಡಿ ; ನಮ್ಮ ಭಾರತ ದೇಶದ ಸಂವಿಧಾನವು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ತು ಅವರ ಸಹವರ್ತಿಗಳ ದೂರದೃಷ್ಟಿಯಿಂದ ಸಮಗ್ರವಾದ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇಂದು ನಮ್ಮ ದೇಶ ಸುವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುವುದಕ್ಕೆ ಸಂವಿಧಾನವೇ ಮೂಲ ತಳಹದಿಯಾಗಿದೆ. ಸಂವಿಧಾನವು ದೇಶದ ಎಲ್ಲಾ ಪ್ರಜೆಗಳಿಗೆ ಸಮಾನ ಅವಕಾಶವನ್ನು ನೀಡಿದೆಯಾದರೂ ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಸಮಾಜದಲ್ಲಿ ಜಾತಿವ್ಯವಸ್ಥೆ, ಆರ್ಥಿಕ ಅಸಮಾನತೆ, ಬಡವ ಶ್ರೀಮಂತರ ನಡುವಿನ ಅಂತರ ಕಡಿಮೆಯಾದಾಗ ಮಾತ್ರ ನಿಜವಾದ ಸಂವಿಧಾನದ ಆಶಯಗಳು ಈಡೇರುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಮತ್ತು ಯುವಜನರ ನಡುವೆ ಸಂವಿಧಾನ ಪೀಠಿಕೆ ಮತ್ತು ಸಂವಿಧಾನದ ಮೂಲಭೂತ ವಿಚಾರಗಳನ್ನು ಹೆಚ್ಚು ಹೆಚ್ಚು ಪ್ರಚುರಪಡಿಸಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪಿ.ಕೆ. ಮಂಜುನಾಥ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಗ್ಗಲಮಕ್ಕಿ ಗಣೇಶ್, ಸ್ಥಾನಿಕ ಸಂಪಾದಕರು, ಅವಿನ್ ಟಿವಿ, ನಿವೃತ್ತ ಶಿಕ್ಷಕ ಹಾಲಯ್ಯ, ನಿವೃತ್ತ ಉಪ ತಹಸೀಲ್ದಾರ್ ಬಿ.ಪಿ. ಮಂಜುನಾಥ್, ಉಪನ್ಯಾಸಕಿ ಎಂ.ಬಿ. ಸಾವಿತ್ರಿ ಭಾಗವಹಿಸಿ ಮಾತನಾಡಿದರು.


