ಮಂಗಳವಾರ ಮೂಡಿಗೆರೆ ಬಿ.ಜೆ.ಪಿ. ಪಕ್ಷದ ಕಛೇರಿ ಪಂಚವಟಿಯಲ್ಲಿ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮದ ಉದ್ಘಾಟನೆಯನ್ನು ಸಂವಿಧಾನ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ ಮತ್ತು ಪವಿತ್ರ ಸಂವಿಧಾನ ಪುಸ್ತಕಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನೆರವೇರಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಭಿಯಾನದ ಸಂಚಾಲಕರಾದ ವಿನಯ್ ಹಳೆಕೋಟೆ ಅವರು ಸಂವಿಧಾನದ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಸಂವಿಧಾನ ದುರುಪಯೋಗದ ಬಗ್ಗೆ ಮಾಹಿತಿ ನೀಡಿದರು.
ವಿಧಾನ ಪರಿಷತ್ ಉಸ ಸಭಾಪತಿಗಳು ಎಂ ಕೆ ಪ್ರಾಣೇಶ್, ಮುಖಂಡರಾದ ದೀಪಕ್ ದೊಡ್ಡಯ್ಯ ಮತ್ತು ಮಂಡಲ ಅಧ್ಯಕ್ಷರಾದ ಗಜೇಂದ್ರ ಟಿ ಎಂ ಅವರುಗಳು ಸಂವಿಧಾನ ಮತ್ತು ಅಂಬೇಡ್ಕರ ಅವರು ಸಂವಿಧಾನದ ಮಹತ್ವದ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಜೆಎಸ್ ರಘು , ವಿಕ್ರಂ ಬಣಕಲ್, ಪಂಚಾಕ್ಷರಿ ಹಾಲೂರು, ಒಬಿಸಿ ಮೋರ್ಚಾ ಅಧ್ಯಕ್ಷ ರವಿ ಒಡೆಯರ್, ಎಸ್ ಸಿ ಮೋರ್ಚಾ ಅಧ್ಯಕ್ಷ ಸಚಿನ್ ಬಾನಳ್ಳಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಕಾಮಾಕ್ಷಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಂಡಲ ಪ್ರದಾನ ಕಾರ್ಯದರ್ಶಿಗಳಾದ ಪ್ರಶಾಂತ್ ಮತ್ತು ಲೋಕೇಶ್ ಮರ್ಕಲ್ ಅವರು ಸ್ವಾಗತಿಸಿ ನಿರೂಪಿಸಿದರು, ರತನ್ ವಂದಿಸಿದರು



