kelguru_page-0001

 

 

ಅದೊಂದು ರೋಚಕ ಗೆಲುವು, ನವಂಬರ್ 1ರಿಂದ ಬೆಂಗಳೂರಿನ ಆಚಾರ್ಯ ಕಾಲೇಜು ಸ್ಟೇಡಿಯಂ ನಲ್ಲಿ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ 2024ರ ಅಂತಿಮ ಪೈಪೋಟಿಯ ಹಂತದಲ್ಲಿ ದಿನಾಂಕ 28//11/2024 ರಂದು ಮಂಗಳೂರು ಪ್ಯಾಂಥರ್ಸ್ ಮತ್ತು ಶಿವಮೊಗ್ಗ ಟೈಗರ್ಸ್ ನಡುವೆ ಹಾವು ಏಣಿಯಂಥ ಮ್ಯಾಚ್ ಶುರುವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಮಂಗಳೂರು ಪ್ಯಾಂಥರ್ಸ್ 55 ರನ್ ಗಳ ಟಾರ್ಗೆಟ್‌ನ್ನು ಅದುವರೆಗೂ ಟೂರ್ನಿಯಲ್ಲಿ ಸೋಲನ್ನೇ ಕಾಣದ ಶಿವಮೊಗ್ಗ ಟೈಗರ್ಸ್ ಗೆ ನೀಡಿತ್ತು. 9 ಓವರ್ ಗಳ ಪಂದ್ಯದಾಟದಲ್ಲಿ ಕೊನೆಯ 3 ಓವರ್ ನಲ್ಲಿ 18 ಎಸೆತಕ್ಕೆ 18 ರನ್ ಗಳ ಅವಶ್ಯವಿದ್ದ ಶಿವಮೊಗ್ಗ ಟೈಗರ್ಸ್ ನ್ನು ಮಂಗಳೂರು ಪ್ಯಾಂಥರ್ಸ್ ಕಟ್ಟಿಹಾಕಿದ ರೀತಿಯೇ ರಣರೋಚಕ, ಕಾರಣ ಹಿಂದಿನ ದಿನ ಅದೇ ಶಿವಮೊಗ್ಗ ಟೈಗರ್ಸ್ 2 ಎಸೆತಗಳಲ್ಲಿ 12 ರನ್ ಸಿಡಿಸಿ ಸೂಪರ್ 18 ಹಂತ ತಲುಪಿತ್ತು, ಅಂತಹ ತಂಡವನ್ನು ಮಣಿಸಲು ಮಂಗಳೂರು ಪ್ಯಾಂಥರ್ಸ್ ಮಾಡಿದ ಸ್ಟಾಟಜಿ, ಗೇಮ್ ಪ್ಲಾನ್ ಅದ್ಬುತ. ಅದರಿಂದ ಪೈನಲ್ ಪಂದ್ಯದಲ್ಲಿ ಬಹುತೇಕ ಟ್ರೋಪಿ ಗೆಲ್ಲುವ ತಂಡವೆಂದು ಗುರುತಿಸಿಕೊಂಡಿದ್ದ ಬೆಂಗಳೂರು ಗ್ಲಾಡಿಯೇಟರ್ಸ್ ತಂಡವನ್ನು ಬಗ್ಗುಬಡಿದು 2024ರ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಟ್ರೋಪಿಯನ್ನು ಮುಡಿಗೇರಿಸಿಕೊಂಡಿತ್ತು.

ಈ ಎಲ್ಲಾ ಗೆಲುವಿನ ಹಿಂದೆ ನಿಂತಿದ್ದು ಅಪ್ಪಟ ಮಲೆನಾಡು ಮೂಡಿಗೆರೆಯ ಹುಡುಗ ಮಂಗಳೂರು ತಂಡದ ಕೋಚ್ ಆಗಿದ್ದ ತೆರೆಮರೆಯ ನಾಯಕ, ಗೇಮ್ ಪ್ಲಾನರ್ ರಮೇಶ್ ಕೆಳಗೂರು ಎಂಬ ಅಪ್ಪಟ ಕ್ರೀಡಾಪ್ರತಿಭೆ.

ರಮೇಶ್ ಕೆಳಗೂರು ಮೂಲತಃ ಮೂಡಿಗೆರೆ ತಾಲ್ಲೂಕಿನಲ್ಲಿ ಟೀ ಎಸ್ಟೇಟ್‌ನಿಂದಲೇ ಪರಿಚಯವಾಗುವ ಸಂಪ್ಲಿ-ಕೆಳಗೂರು ಗ್ರಾಮದವರು. ತಂದೆ ದಿವಂಗತ ಅಂತು, ತಾಯಿ ಅಕ್ಕಮ್ಮರವರ ಕೂಲಿ ಕಾರ್ಮಿಕ ದಂಪತಿಗಳ ದ್ವಿತೀಯ ಪುತ್ರ. ಬಡತನ ಎಂಬುದು ಸಮಾಜದಲ್ಲಿ ಪರಿಚಯಿಸಿಕೊಳ್ಳಲಷ್ಟೇ ಶಿಕ್ಷಣ ಮತ್ತು ಪ್ರತಿಭೆಗಲ್ಲ ಎಂಬಂತೆ ತನ್ನ ಬಾಲ್ಯದ ಶಿಕ್ಷಣವನ್ನು 1ರಿಂದ 4ರವರೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆಳಗೂರಿನಲ್ಲಿ ಪಡೆದು 5ರಿಂದ 7ಜಾವಳಿ ಪ್ರಾಥಮಿಕ ಮತ್ತು 8ರಿಂದ 10ರವರೆಗೆ ಶ್ರೀ ಲಕ್ಷ್ಮಣ್ ರಾವ್ ಗುರ್ಜರ್ ಶಾಲೆಯಲ್ಲಿ ಪಡೆಯುತ್ತಾರೆ, ನಂತರ ಪಿ.ಯು.ಸಿ ಬಣಕಲ್‌ನಲ್ಲೂ, ಡಿಗ್ರಿಯನ್ನು ಎಸ್.ಡಿ.ಎಂ ಉಜಿರೆಯಲ್ಲೂ ಪಡೆದು ಸ್ನಾತಕೊತ್ತರ ಪದವಿಯನ್ನು ಮಾನವ ಸಂಪನ್ಮೂಲ ಅಭಿವೃದ್ದಿ ವಿಷಯದಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ಕೊಣಾಜೆಯಲ್ಲಿ ಪಡೆಯುತ್ತಾರೆ.

ಚಿಕ್ಕಂದಿನಿಂದಲೂ ಕ್ರೀಡೆಯನ್ನು ಬದುಕಿನ ಭಾಗವಾಗಿಸಿಕೊಂಡಿದ್ದ ರಮೇಶ್ ಕೆಳಗೂರು ಶಾಲಾ, ಕಾಲೇಜು ಸ್ಪರ್ದೆಗಳಲ್ಲಿ ಭಾಗವಹಿಸುತ್ತಾ ಕ್ರೀಡಾ ಮನೋಭಾವದ ವ್ಯಕ್ತಿತ್ವ ಬೆಳಸಿಕೊಳ್ಳುತ್ತಾ ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಳ್ಳುತ್ತಾರೆ. ಆದರೆ ಅವರೊಳಗೆ ಕ್ರೀಡೆ ಬಗೆಗಿನ ಒಲವು, ಶ್ರಮ, ಶ್ರದ್ದೆ, ಬದ್ದತೆಗೆ ವೇದಿಕೆ ಸಿಕ್ಕಿದ್ದು ಮಂಗಳೂರು ವಿಶ್ವ ವಿದ್ಯಾಲಯ. ಗುಡ್ಡಗಾಡು ಹಾಗೂ ಮ್ಯಾರಾಥಾನ್ ರೇಸಿನಲ್ಲಿ ಮಂಗಳೂರು ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಿ ಬೆಳ್ಳಿಪದಕ ಪಡೆಯುವದರೊಂದಿಗೆ ಸಂಪೂರ್ಣವಾಗಿ ತಾನೊಬ್ಬ ಕ್ರೀಡಾಳು ಎನಿಸಿಕೊಳ್ಳುತ್ತಾರೆ. ಸತತ ಮೂರು ಬಾರಿ ರಾಷ್ಟ್ರಮಟ್ಟದಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವುದರ ಮೂಲಕ ಗುರುತಿಸಿಕೊಂಡ ಹೆಗ್ಗಳಿಕೆ ಇವರದು.

ಅಷ್ಟೊಂದು ಆರ್ಥಿಕವಾಗಿ ಸಬಲರಲ್ಲದ ಇವರು ಉದ್ಯೋಗದ ನಿಮಿತ್ತ ಮಲೇಷ್ಯಾ ಸೇರಿ ಹಲವು ವರ್ಷಗಳ ಕಾಲ ಉದ್ಯೋಗದ ಅನುಭವವನ್ನು ಹೊಂದಿದ್ದಾರೆ. 2019ರಲ್ಲಿ ಜಗತ್ತನ್ನೇ ಕಾಡಿದ ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸ್ವತಃ ಊರೆಂಬ ಗೂಡು ಸೇರಿದ ರಮೇಶ್ ತಾಲ್ಲೂಕಿನಾಧ್ಯಂತ ಜನಪರ ಕೆಲಸಗಳ ಮಾಡುತ್ತಾ ತಾಯ್ನಾಡಿನಲ್ಲಿಯೇ ನೆಲೆಸುವಂತಾಯ್ತು. ವಿದೇಶದಿಂದ ಬಂದು ಕೆಲವೇ ದಿನಗಳಲ್ಲಿ ಜನರೊಂದಿಗೆ ಬೆರೆತು 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ಸ್ಪರ್ದಿಸಿ ನಾಲ್ಕನೇ ಸ್ಥಾನ ಪಡೆದ ಹೆಗ್ಗಳಿಕೆಯೂ ಇವರದು.

ಸದಾ ಸಮಾನಚಿತ್ತಾ ಮನೋಭಾವನೆಯ ಇವರು ಎಂತಹ ಸಂದರ್ಭದಲ್ಲೂ ಭಾವವೇಶಕ್ಕೊಳಗಾಗದೆ ಎಲ್ಲವನ್ನು ಸಹನೆ, ತಾಳ್ಮೆಯೊಂದಿಗೆ ಸ್ನೇಹಪರತೆಯಿಂದ ಬೆರೆಯುವ, ತನ್ನೊಂದಿಗೆ ಮಾತನಾಡುವವರಿಗೆ ಉತ್ತಮ ಕೇಳುಗ, ಮಾರ್ಗದರ್ಶಕ, ಅತ್ಯುತ್ತಮ ವಾಗ್ಮಿ, ಸ್ನೇಹಜೀವಿ ಹಾಗೂ ಅತ್ಯುನ್ನತ ಸಾಮಾಜಿಕ ಕಳಕಳಿಯಿಂದ ಹಲವಾರು ಸ್ನೇಹಿತರನ್ನು ಸಂಪಾದಿಸಿರುವವರು. ಹೋರಾಟಗಾರರು

ಸದ್ಯ ದೇಶದ ಅತ್ಯುನ್ನತ ಕ್ರೀಡಾ ಇನ್ಸಿಟ್ಯೂಟ್ ಆದ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಸ್ಪೋರ್ಸ್ಟ್ಸ್ ಇಂಡಿಯಾ ದ ತರಬೇತುದಾರರ ಪರೀಕ್ಷೆಯನ್ನು ಎ ಗ್ರೇಡ್ ನೊಂದಿಗೆ, ಹಾಗೂ ಅಥ್ಲೇಟಿಕ್ ಫೆಡರೇಷನ್ ಆಫ್ ಇಂಡಿಯಾ ಪರೀಕ್ಷೆ ಲೆವೆಲ್ 1 ಅಂತರಾಷ್ಟ್ರೀಯ ತರಬೇತಿ ಪರೀಕ್ಷೆಯನ್ನು ಬಿ ಗ್ರೇಡ್ ನೊಂದಿಗೆ 2024ರಲ್ಲಿ ಪಾಸು ಮಾಡಿರುತ್ತಾರೆ.

ತನ್ನ ಸಾಧನೆಯ ಸಾಲಿಗೆ ಇದೀಗ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ 2024ರ ಸೀಸನ್ -1 ರ ಚಾಂಪಿಯನ್ ಆದ ಮಂಗಳೂರು ಪ್ಯಾಂಥರ್ಸ್ ತಂಡದ ಮುಖ್ಯ ಕೋಚ್ ಆಗಿ ಚೊಚ್ಚಲ ಆವೃತ್ತಿಯಲ್ಲಿಯೇ ಟ್ರೋಪಿ ಗೆದ್ದು ಇತಿಹಾಸ ಸೃಷ್ಟಿಸಿ ಮಲೆನಾಡಿನ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ಇದರೊoದಿಗೆ ಇನ್ನಷ್ಟು ಸಾಧನೆ ಇವರದಾಗಲಿ ಎಂದು ನಮ್ಮೆಲ್ಲರ ಶುಭಹಾರೈಕೆಗಳು.

ಶಿವಪ್ರಸಾದ್…

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ