sava 1

 

 

ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನಲ್ಲಿ ವಿವಾದಿತ ಜಾಗಕ್ಕೆ ಸಂಬಂಧಿಸಿದ ವಿಚಾರ ಇವತ್ತು ದಲಿತರು ಮತ್ತು ಒಕ್ಕಲಿಗರ ನಡುವೆ ತೀವ್ರ ವಾಗ್ವಾದ ಕಾರಣವಾಗಿದೆ.

ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜಾಗವೊಂದನ್ನು ಒಕ್ಕಲಿಗರು ನಮ್ಮದೆಂದು ದಲಿತರು ನಮ್ಮದೆಂದು ಹಕ್ಕೋತ್ತಾಯ ಮಾಡುತ್ತಿದ್ದು, ಇಂದು ವಿವಾದ  ಜಟಾಪಟಿಗೆ ಕಾರಣವಾಗಿದೆ.

ವಿವಾದಿತ ಜಾಗದಲ್ಲಿ ಇವತ್ತು ದಲಿತ ವ್ಯಕ್ತಿಯ ಶವವೊಂದನ್ನು ಹೂಳಲು ಹೋದಾಗ ಸ್ಥಳದಲ್ಲಿ ಹೈಡ್ರಾಮ ನಡೆದಿದೆ. ಈ ಜಾಗ ಗ್ರಾಮ ಪಂಚಾಯಿತಿಯಿಂದ ಒಕ್ಕಲಿಗರ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ ಎಂದು ಒಕ್ಕಲಿಗ ಮುಖಂಡರು ವಾದಿಸುತ್ತಿದ್ದರೆ. ದಲಿತ ಸಮುದಾಯದವರು ಇದು ದಲಿತರ ಸ್ಮಶಾನಕ್ಕೆ ಮೀಸಲಾಗಿರುವ ಜಾಗ ಎಂದು ವಾದಿಸುತ್ತಿದ್ದಾರೆ. ಈ ಜಾಗ ದಶಕಗಳಿಂದ ವಿವಾದದ ಕೇಂದ್ರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿಯೂ ಇದೆ ಎನ್ನಲಾಗಿದೆ.

ಇಂದು ವಿವಾದಿತ ಜಾಗ ನಮ್ಮದೆಂದು ಶವ ಊಳಲು ಹೋದ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.  ವಿವಾದಿತ ಜಾಗ ನ್ಯಾಯಾಲಯದಲ್ಲಿ ಇದೆ ಎಂದು ಒಕ್ಕಲಿಗರ ವಾದ ಮಾಡಿ ಇಲ್ಲಿ ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪೊಲೀಸರೆದುರು ವಾದಿಸಿದರು.  ಒಕ್ಕಲಿಗ ಮಹಿಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೂರ್ಣಿಮಾ  ಎಂಬುವವರು ಶವ ಸಂಸ್ಕಾರಕ್ಕೆ ತೋಡಿದ್ದ ಗುಂಡಿಗೆ ಇಳಿದು ಇಲ್ಲಿ ಶವವನ್ನು ಹೂಳಬಾರದು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ದಲಿತ ಮಹಿಳೆಯರು ಮತ್ತು ಪೊಲೀಸರು ಗುಂಡಿಯಿಂದ ಒತ್ತಾಯಪೂರ್ವಕವಾಗಿ ಹೊರಗೆಳೆದು ಹಾಕಿದ್ದಾರೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.  ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಚಿಕ್ಕಮಗಳೂರು ತಹಸೀಲ್ದಾರ್ ರವರು ಸ್ಥಳಕ್ಕೆ ಆಗಮಿಸಿ ಉಭಯ ಕಡೆಯವರಿಗೆ ಜಾಗದ ವಿವಾದದ ಬಗ್ಗೆ ಮನವರಿಕೆ ಮಾಡುಕೊಡುವ ಪ್ರಯತ್ನ ನಡೆಸಿದರು.

ಈ ಪ್ರಕರಣವೀಗ ತೀವ್ರ ಸ್ವರೂಪ ಪಡೆಯುತ್ತಿದ್ದು, ನ್ಯಾಯಾಲಯದಲ್ಲಿ ಇರುವ ವಿವಾದಿತ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಮತ್ತು ಪಕ್ಷಪಾತದಿಂದ ನಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳ ಮೇಲೆ ಒಕ್ಕಲಿಗ ಮುಖಂಡರು ಆರೋಪ ಮಾಡುತ್ತಿದ್ದಾರೆ. ಆಲ್ದೂರು ಸಬ್ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಅಥವಾ ಬೇರೆಡೆಗೆ ವರ್ಗಾಯಿಸಬೇಕು ಎಂದು ಸೋಮವಾರ ಒಕ್ಕಲಿಗರ ಜನಾಂಗದವರು ಆಲ್ದೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ವಿವಾದಿತ ಜಾಗ ಈಗ ಎರಡು ಸಮುದಾಯದ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಈ ವಿವಾದವನ್ನು ಪರಸ್ಪರರು ಕುಳಿತು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ