IMG_20241206_200939

 

 

ನಿರಂತರ ಪ್ರಯತ್ನ, ಹಠ, ಛಲ ಜೊತೆಗೆ ಆಶಾಭಾವ ಯಶಸ್ಸನ್ನು ತಂದು ಕೊಡುತ್ತದೆ ಎಂದು ಪ್ರಾಂಶುಪಾಲೆ ಪ್ರೊ.ಜೆ.ಕೆ.ಭಾರತಿ ನುಡಿದರು.

ಎಸ್‍ಟಿಜೆ ಮಹಿಳಾ ಪದವಿ ಕಾಲೇಜಿನಲ್ಲಿ 2024-25ನೆಯ ಸಾಲಿನ ಸಾಂಸ್ಕøತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ರೇಂಜರ್ಸ್ ಮತ್ತು ವೈಆರ್‍ಸಿ ಘಟಕಗಳ ಉದ್ಘಾಟನಾ ಸಮಾಂಭದ ಅಧ್ಯಕ್ಷತೆವಹಿಸಿ ಅವರಿಂದು ಮಾತನಾಡಿದರು.

ಸಾಮಾನ್ಯರು ಸೋತ ಕೂಡಲೇ ಪ್ರಯತ್ನ ನಿಲ್ಲಿಸುತ್ತಾರೆ. ವಿಜೇತರು ಗೆಲ್ಲುವವರೆಗೂ ಸೋಲುತ್ತಲೇ ಇರುತ್ತಾರೆ. ಆಶಾಭಾವದ ನಿರಂತರಪ್ರಯತ್ನ ಯಶಸ್ಸನ್ನು ಕೊಡುತ್ತದೆ. ಬದ್ಧತೆ ಮತ್ತು ಕಠಿಣಶ್ರಮ ಜೀವನದ ನಿಜವಾದ ಪರೀಕ್ಷೆ ಎದುರಿಸಲು ಸಹಕಾರಿ. ದೃಢನಿರ್ಧಾರ, ಪೂರ್ಣ ತೊಡಗಿಸಿಕೊಳ್ಳುವಿಕೆ ಮತ್ತು ಪ್ರಯತ್ನಶೀಲತೆಯನ್ನು ಯಶಸ್ಸು ಅವಲಂಬಿಸಿದೆ ಎಂದರು.

ಸಮಾಜಮುಖಿ ಆದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಮತ್ತು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಇನ್ನೊಬ್ಬರಿಗೆ ಸಹಾಯ, ಸಹಕಾರ ನೀಡುವ ಮನೋಭಾವ ನಮ್ಮದಾಗಬೇಕು ಎಂದ ಭಾರತಿ, ಪ್ರತಿಭೆಯನ್ನು ಸರಿಯಾಗಿ ಗುರುತಿಸಿ ಪೋಷಿಸಿದರೆ ಸಮಾಜಕ್ಕೆ ಅವರಿಂದ ಹೆಚ್ಚಿನ ಸಹಾಯ ಆಗುತ್ತದೆ ಎಂದರು.

ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ತೋರುವವರಿಗೆ ಸಹಜವಾಗಿಯೆ ಪಠ್ಯದಲ್ಲೂ ಆಸಕ್ತಿ-ಸಾಧನೆ ಇರುತ್ತದೆ ಎಂಬುದು 30ವರ್ಷಗಳ ಬೋಧನೆಯ ಅನುಭವ. ಇಂದು ಎಲ್ಲ ಕ್ಷೇತ್ರಗಳಲ್ಲೂ ಅಪಾರ ಸ್ಪರ್ಧೆ ಇದೆ. ಸ್ಥಳೀಯವಾಗಿ ಸಾಧನೆ ಮಾಡಿದರಷ್ಟೇ ಸಾಲದು. ಕನಿಷ್ಠಪಕ್ಷ ವಿ.ವಿ.ಮಟ್ಟದ ಸ್ಪರ್ಧೆಯಲ್ಲಿ, ರಾಜ್ಯ-ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿದ್ದರೆ ಮಾತ್ರ ಉಪಯೋಗವಾಗುತ್ತದೆ ಎಂದ ಪ್ರೊ.ಭಾರತಿ, ಎಸ್.ಟಿ.ಜಿ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾರಂಗದಲ್ಲೂ ನಿರಂತರ ಸಾಧನೆ ತೋರುತ್ತಿದ್ದಾರೆ ಎಂದರು.

ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಚಿ.ಸ.ಪ್ರಭುಲಿಂಗಶಾಸ್ತ್ರಿ ಕಾಲೇಜಿನ ವಿವಿಧ ಘಟಕಗಳನ್ನು ಉದ್ಘಾಟಿಸಿ ಮಾತನಾಡಿ ಇಂದು ಯುವ ಜನರಿಗೆ ಆಕಾಶದಷ್ಟು ಅವಕಾಶಗಳಿವೆ. ವಿವೇಚನಾಶಕ್ತಿ ಬಳಸಿ ನಮ್ಮ ಆಸಕ್ತಿಯನ್ನು ಗುರುತಿಸಿಕೊಂಡು ಅಭಿರುಚಿಗೆ ತಕ್ಕಂತೆ ತರಬೇತಿ-ಅಭ್ಯಾಸ ಮುಂದುವರೆಸಿದರೆ ಉತ್ತಮ ಅವಕಾಶಗಳು ಸಿಗುತ್ತವೆ ಎಂದರು.

ಶಿಕ್ಷಣವೇ ಶಕ್ತಿ-ವಿಕಾಸ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಇಂದು ವಿಫುಲವಾದ ಅವಕಾಶ-ಪ್ರೋತ್ಸಾಹವಿದೆ. ಮಹಿಳಾಶಕ್ತಿ, ಮಾತೃಶಕ್ತಿ, ಭಗಿನಿಶಕ್ತಿ ಎಂದು ಸಮಾಜ ಉನ್ನತಸ್ಥಾನ ನೀಡಿದೆ. ಇದನ್ನು ಅರ್ಥಮಾಡಿಕೊಂಡು ಮುನ್ನಡೆದಾಗ ಗೌರವ ಲಭಿಸುತ್ತದೆ. ಸಮಾಜಮುಖಿಯಾದ ಚಿಂತನೆ ಅಗತ್ಯ. ಹಸು ಹಾಲು ಕರೆಯುವುದು, ಗಿಡ-ಮರಗಳು ಫಲಬಿಡುವುದು, ನದಿ ಹರಿಯುವುದು ಮತ್ತೊಬ್ಬರಿಗಾಗಿಯೆ ಹೊರತು ತನಗಾಗಿ ಅಲ್ಲ ಎಂಬುದರಲ್ಲಿ ಸೇವೆಯ ಸಂದೇಶವಿದೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ ಮುಖ್ಯಅತಿಥಿಗಳಾಗಿ ಮಾತನಾಡಿ ಆರೋಗ್ಯಪಾಲನೆಯ ಕಡೆಗೆ ವಿದ್ಯಾರ್ಥಿನಿಯರು ಹೆಚ್ಚಿನ ಆಸಕ್ತಿವಹಿಸಬೇಕು. ಯೋಗ, ಧ್ಯಾನ, ಪ್ರಾಣಾಯಾಮ ನಿತ್ಯ ಅನುಷ್ಠಾನಗೊಳಿಸಿದರೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನು ಹೊಂದಬಹುದು. ಪೌಷ್ಠಿಕ ಆಹಾರ ಸೇವನೆ, ನಿತ್ಯ ಹೆಚ್ಚು ನೀರು ಕುಡಿಯುವುದು, ವೈಯಕ್ತಿಕ ಸ್ವಚ್ಛತೆಯತ್ತ ಹೆಚ್ಚಿನ ಗಮನ ಕೊಡಬೇಕೆಂದರು.

ಎಸ್.ಟಿ.ಜೆ.ಕಾಲೇಜು ವಿದ್ಯಾರ್ಥಿನಿಯರಾದ ರಾಷ್ಟ್ರೀಯ ಮಹಿಳಾ ಕಬ್ಬಡಿ ತಂಡದ ಸದಸ್ಯೆ ಜಿ.ಕೆ.ಅನೂಷಾ ಮತ್ತು ಕುವೆಂಪು ವಿ.ವಿ.ಮಹಿಳಾ ಕಬ್ಬಡಿ ತಂಡದ ನಾಯಕಿ ಈ.ಸಿಂಧೂ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಪಿ.ಯು.ಕಾಲೇಜು ಪ್ರಾಂಶುಪಾಲರಾದ ಸಂತೋಷಕುಮಾರ್ ಮಾತನಾಡಿದರು. ಹಿರಿಯ ಉಪನ್ಯಾಸಕ ಎಂ.ಆರ್.ಚಂದ್ರಶೇಖರ್ ಪ್ರಾಸ್ತಾವಿಸಿದರು.

ವಿದ್ಯಾರ್ಥಿನಿಯರಾದ ಸಂಧ್ಯಾ ಸ್ವಾಗತಿಸಿ, ಸೃಷ್ಟಿ ನಿರೂಪಿಸಿ, ಸಂಗೀತಾ ವಂದಿಸಿದರು. ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಗೊಂಡ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ರಕ್ಷಿತಾ ಬೋಧಿಸಿದರು.

ಉಪನ್ಯಾಸಕರುಗಳಾದ ಹೇಮಂತ್, ಸುನಿಲ್, ಲಾವಣ್ಯ ಮತ್ತಿತರರು ವೇದಿಕೆಯಲ್ಲಿದ್ದರು. ಸಾಂಸ್ಕøತಿಕ ಕಾರ್ಯಕ್ರಮಗಳು ಗಮನಸೆಳೆದವು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ