ಅನೈತಿಕ ಸಂಬಂಧಕ್ಕೆ 25ರ ಗೃಹಿಣಿ ಕೊಲೆಯಾಗಿದೆ.
25ರ ಗೃಹಿಣಿಯನ್ನ ಬರ್ಬರವಾಗಿ ಹತ್ಯೆಗೈದ ವಾಟ್ಸಾಪ್ ಸ್ನೇಹಿತ. ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ಘಟನೆ
ಕಿಚ್ಚಬ್ಬಿ ಗ್ರಾಮದ ತೃಪ್ತಿ 25 ಮೃತ ದುರ್ದೈವಿ. ವಾಟ್ಸಾಪ್ ಸ್ನೇಹಿತ ಚಿರಂಜೀವಿ ಕೊಲೆ ಆರೋಪಿ
*ಚಾಕುವಿನಲ್ಲಿ ಚುಚ್ಚಿ ಸಾಯಲಿಲ್ಲ ಎಂದು ಕೆರೆಗೆ ಎಸೆದ ಸ್ನೇಹಿತ ಚಿರಂಜೀವಿ*
ವಾಟ್ಸಾಪ್ ನಲ್ಲಿ ತೃಪ್ತಿಗೆ ಸ್ನೇಹಿತನಾಗಿದ್ದ ಕೊಲೆ ಆರೋಪಿ ಚಿರಂಜೀವಿ
ತಿಂಗಳ ಹಿಂದೆ ಚಿರಂಜೀವಿ ಜೊತೆ ಮನೆಬಿಟ್ಟು ಹೋಗಿದ್ದ ಮೃತ ತೃಪ್ತಿ.
ಬಾಳೆಹೊನ್ನೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ದಾಖಲಾಗಿತ್ತು.
ವಾಪಸ್ ಬಂದ ಬಳಿಕ ಮನೆಯವರ ರಾಜಿ ಬಳಿಕ ಆತನ ಜೊತೆ ಮಾತು-ಸ್ನೇಹ ಬಿಟ್ಟಿದ್ದ ತೃಪ್ತಿ
ಇಂದು ಏಕಾಏಕಿ ತೃಪ್ತಿ ಮನೆಗೆ ಬಂದ ಚಿರಂಜೀವಿ ಮಕ್ಕಳ ಎದುರೇ ತೃಪ್ತಿಯನ್ನು ಚುಚ್ಚಿ ಕೊಲೆಗೆ ಯತ್ನ
ಚಾಕುವಿನಿಂದ ಚುಚ್ಚಿ ಸಾಯಲಿಲ್ಲ ಎಂದು ಮನೆ ಹಿಂದಿನ ಕೆರೆಗೆ ಎಸೆದ ಚಿರಂಜೀವಿ
ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ನಡೆದಿರೋ ದುಷ್ಕೃತ್ಯ
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.




