jc banakal 1

 

 

ಮೂಡಿಗೆರೆ ತಾಲ್ಲೂಕಿನ ಬಣಕಲ್ ಪಟ್ಟಣದಲ್ಲಿ ಜೇಸಿಐ ಬಣಕಲ್ ವಿಸ್ಮಯ ಘಟಕದಿಂದ ನಿರ್ಮಿಸಿರುವ ನೂತನ ಜೇಸಿಐ ಭವನವನ್ನು ಬುಧವಾರ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ಲಾಯ್ಡ್ ಮಿಸ್ಕಿತ್ ಅವರು ಮಾತನಾಡಿ ಬಣಕಲ್ ಜೇಸಿಐ ಘಟಕವು ವಲಯದ ಅತ್ಯುತ್ತಮ ಘಟಕಗಳಲ್ಲಿ ಒಂದಾಗಿದ್ದು, ಘಟಕ ಪ್ರಾರಂಭವಾದಂದಿನಿಂದ ಸತತವಾಗಿ 14 ವರ್ಷಗಳ ಕಾಲ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದೆ. ತನ್ನದೇ ಆದ ಸ್ವಂತ ಕಟ್ಟಡದ ಕನಸನ್ನು ನನಸು ಮಾಡಿದ್ದು,   ಘಟಕದ ಎಲ್ಲಾ ಪೂರ್ವಾಧ್ಯಕ್ಷರು ಮತ್ತು ಸದಸ್ಯರುಗಳ ಪರಿಶ್ರಮ ಮತ್ತು ಸಾಮಾಜಿಕ ಕಳಕಳಿ ಪ್ರಶಂಸನೀಯ ಎಂದಿದ್ದಾರೆ.

ಪ್ರಾಸ್ತಾವಿಕವಾಗಿ ಮಾತನಾಡಿದ ಜೇಸಿಐ ಬಣಕಲ್ ವಿಸ್ಮಯದ ಪೂರ್ವಾಧ್ಯಕ್ಷ ಟಿ.ಎಂ. ಗಜೇಂದ್ರ ಭವನದ ನಿರ್ಮಾಣದ ವಿವಿಧ ಹಂತಗಳನ್ನು ವಿವರಿಸಿದರು. ಭವನ ನಿರ್ಮಾಣಕ್ಕೆ ನಿವೇಶನ ನೀಡಿದ ಬಣಕಲ್ ಗ್ರಾಮ ಪಂಚಾಯಿತಿ ಹಾಗೂ ಕಟ್ಟಡಕ್ಕೆ ಧನ ಸಹಾಯ ಮಾಡಿದ ದಾನಿಗಳ ಸಹಕಾರವನ್ನು ನೆನಪಿಸಿದರು.

ಭವನ ನಿರ್ಮಾಣಕ್ಕೆ ಹೆಚ್ಚಿನ ದೇಣಿಗೆ ನೀಡಿದ ಶ್ರೀಮತಿ ಸಾವಿತ್ರಮ್ಮ ಮಂಜುನಾಥಗೌಡ ಬಿ.ಹೊಸಳ್ಳಿ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ, ಮೂಡಿಗೆರೆ ತಾ.ಪಂ. ಮಾಜಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಯವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಬಣಕಲ್ ಜೇಸಿಐ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಜೇಸಿಐ ನಿಕಟಪೂರ್ವ ವಲಯಾಧ್ಯಕ್ಷೆ ಆಶಾ ಜೈನ್, ನೂತನ ವಲಯಾಧ್ಯಕ್ಷ ವಿಜಯಕುಮಾರ್, ಹಿರಿಯ ಕಾಫಿ ಬೆಳೆಗಾರ ಶ್ರೀನಿವಾಸ ಗೌಡ, ಬಣಕಲ್ ಗ್ರಾ.ಪಂ. ಅಧ್ಯಕ್ಷೆ ಜಲೀನಾ ಬಾನು,  ಜೇಸಿಐ ಬಣಕಲ್ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಶೆಟ್ಟಿ, ಪೂರ್ವಾಧ್ಯಕ್ಷರಾದ ಕೃಷ್ಣೇಗೌಡ, ದಿನೇಶ್, ಶರತ್, ಕಾರ್ಯದರ್ಶಿ ಅರವಿಂದ್, ಲೇಡಿ ಜೇಸಿ ಅಧ್ಯಕ್ಷೆ ಅಕ್ಷತಾ ಮದನ್, ಜೂನಿಯರ್ ಜೇಸಿ ಅಧ್ಯಕ್ಷ ಗೌರವ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಣಕಲ್ ಜೇಸಿಐ ವಿಸ್ಮಯ ಅಧ್ಯಕ್ಷರಾದ ಮದನ್ ಹೆಗಡೆ ದೇವರಮನೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಜೇಸಿಐ ಭವನದ ಮೇಲಂತಸ್ತು ನಿರ್ಮಾಣಕ್ಕೆ ರೂ. ಹತ್ತು ಲಕ್ಷ ದೇಣಿಗೆ ನೀಡಲು ಮುಂದೆ ಬಂದಿರುವ ಮೂಡಿಗೆರೆ ಪಿಸಿಎಆರ್ ಡಿ ಬ್ಯಾಂಕ್ ನಿರ್ದೇಶಕ, ಕಾಫಿ ಬೆಳೆಗಾರ ಕೆ.ಟಿ. ಸತೀಶ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ