ಚಿಕ್ಕಮಗಳೂರು ನಗರದ ಟೈಗರ್ಸ್ ಕ್ಲಬ್ ಆಯೋಜಿಸಿದ್ದ ಗೌಡ್ತಿಯರ ಪ್ರೀಮಿಯರ್ ಲೀಗ್ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೂಡಿಗೆರೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಮೂಡಿಗೆರೆ ವರಾಹಿ ತಂಡ ಮತ್ತು ಮೈಸೂರಿನ ಮಹಾರಾಣಿಸ್ ತಂಡದ ನಡುವೆ ಫೈನಲ್ ಪಂದ್ಯ ನಡೆಯಿತು. ಮೂರು ಓವರ್‌ಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೂಡಿಗೆರೆ ತಂಡ 34 ರನ್ ಗಳ ಗುರಿ ನೀಡಿತು.
ಗುರಿ ಬೆನ್ನಟ್ಟಿದ ಮೈಸೂರು ತಂಡ ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿತು. ಮೂವರು ಓವರ್‌ಗಳಲ್ಲಿ 30 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮೈಸೂರು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಕೊಡಗಿನ ಎಲೈಟ್ ತಂಡ ತೃತೀಯ ಸ್ಥಾನ ಮತ್ತು ಬಾಳೆಹೊನ್ನೂರಿನ ಭೈರವೀಸ್ ತಂಡ ನಾಲ್ಕನೇ ಸ್ಥಾನ ಪಡೆದವು. ಶನಿವಾರ ಮತ್ತು ಭಾನುವಾರ ನಡೆದ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು.
ಪ್ರಥಮ ಬಹುಮಾನ ರೂ. 1 ಲಕ್ಷ, ದ್ವಿತೀಯ ಬಹುಮಾನ ರೂ. 70 ಸಾವಿರ, ತೃತೀಯ ಬಹುಮಾನ ರೂ. 50 ಸಾವಿರ ಮತ್ತು ನಾಲ್ಕನೇ ಬಹುಮಾನ ರೂ. 25 ಸಾವಿರ ನೀಡಲಾಯಿತು.
ಮೂಡಿಗೆರೆ ವರಾಹಿ ತಂಡದ ಆಲ್‌ರೌಂಡರ್ ಕುಸುಮಾ ವುಮನ್ ಆಫ್ ದಿ ಸಿರೀಸ್ ನೀಡಲಾಯಿತು.

ಶ್ರೀಮತಿ ಕಲಾವತಿ ರಾಜಣ್ಣ ಮತ್ತು ಶ್ರೀಮತಿ ನಿರ್ಮಲ ಮಂಚೇಗೌಡ ಅವರ ನೇತೃತದಲ್ಲಿ ಮೂಡಿಗೆರೆ ವರಾಹಿ ತಂಡ ಚೊಚ್ಚಲ ಗೌಡ್ತಿಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.



