ಮೂಡಿಗೆರೆ ತಾಲ್ಲೂಕಿನ ಬಣಕಲ್ ಪ್ರೌಢಶಾಲೆಗೆ Louis Dreyfus Company India Ltd, ಬೆಂಗಳೂರು ಸುಮಾರು 22ಲಕ್ಷ ರೂ ಮೌಲ್ಯದ ಒಂಬತ್ತು ಡಿಜಿಟಲ್ ಬೋರ್ಡ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಜನವರಿ 3ರಂದು ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಇದರ ಉದ್ಘಾಟನೆಯನ್ನು ಕಂಪನಿಯ ಕಾಫಿ ಪ್ಲಾಂಟೇಷನ್ ವಿಭಾಗದ ಮುಖ್ಯಸ್ಥ ಅನುಜ್ ಅಗ್ರವಾಲ್ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ನ್ಯಾಯಾದೀಶರಾದ ಸುದೀನ್ ಕುಮಾರ್ ಮಾತನಾಡಿ : ಬಾಲ್ಯದ ಶಿಕ್ಷಣ ನಮ್ಮ ಭವಿಷ್ಯದ ಜೀವನಕ್ಕೆ ತಳಹದಿ.ಜ್ಞಾನಗಳಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು.ಆ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದರು.
ನಾನು ಇದೆ ಶಾಲೆಯ ವಿದ್ಯಾರ್ಥಿಯಾಗಿದ್ದು ಶಿಕ್ಷಕರು ನೀಡಿದ ವಿದ್ಯೆಯನ್ನು ಸರಿಯಾಗಿ ಬಳಸಿಕೊಂಡ ಕಾರಣಕ್ಕೆ ಇಂದು ನ್ಯಾಯಾಧೀಶನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದು ಇಲ್ಲಿ ನಾವು ಕಲಿಯುವ ವಿದ್ಯೆ ನಮ್ಮನ್ನು ಕೊನೆಯ ತನಕ ಕಾಯುತ್ತದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರು ಕಲಿಸುವ ವಿದ್ಯೆಯನ್ನು ಶ್ರದ್ದೆಯಿಂದ ಅಭ್ಯಸಿಸಿ ಅಭ್ಯುದಯ ಪಡೆಯಬೇಕು ಎಂದು ನ್ಯಾ,ಸುದೀನ್ ಕುಮಾರ್ ಸಲಹೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಡಾ.ತಿರುಮಲೇಶ್ ಮಾತನಾಡಿ,ಬಣಕಲ್ ಪ್ರೌಢಶಾಲೆ ತಾಲೂಕಿನ ಒಂದು ಉತ್ತಮ ಪ್ರೌಢಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದ್ದು,ಎಲ್ಲಾ ವಿಭಾಗಗಳಲ್ಲೂ ಮುಂದಿರುವುದು ಇಲ್ಲಿನ ಶಿಕ್ಷಕರ ಶ್ರಮಕ್ಕೆ ಹಿಡಿದ ಕೈಗನ್ನಡಿ ಎಂದು ಶ್ಲಾಘಿಸಿದರು.
ಬಣಕಲ್ ಗ್ರಾ.ಪಂ ಅಧ್ಯಕ್ಷರಾದ ಜರೀನಾ ಮಾತನಾಡಿ, ಶಾಲೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ಬಿ.ಎಲ್.ದಿವಾಕರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ,ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಆದಿಲ್ ನಾಯಕತ್ವದ ವಾಲಿಬಾಲ್ ತಂಡವನ್ನು ಹಾಗು ಕ್ರೀಡಾ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಕು,ಡಾ,ಆಯಿಷಾ ನಮ್ರ ಕೊಟ್ಟಿಗೆಹಾರ ಹಾಗೂ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಲಿತಿನ್ ಬಾಳೂರು ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆರವೇರಿದವು.ಗ್ರಾಮಸ್ಥರು, ಪೋಷಕರು ಕೊರೆವ ಚಳಿಯನ್ನು ಲೆಕ್ಕಿಸದೆ ಕಾರ್ಯಕ್ರಮ ಯಶಸ್ವಿಗೊಳ್ಳಲು ಸಹಕರಿಸಿದರು.
ಬಣಕಲ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಬಿ. ಕೆ.ಪೃಥ್ವಿ, ಕೆ. ಕೆ. ಸುರೇಶ್, ಮಹಮ್ಮದ್ ಝಕಾವುಲ್ಲಾ, ಬಿ.ಆರ್. ಯತೀಶ್, ಕೆ. ಪಿ. ರಮೇಶ್, ಬಿ.ಟಿ. ಶರತ್, ಬಿ.ಬಿ. ಭರತ್, ಯಶ್ವಂತ್ ಬೆಳಗೋಡ್, ಸಿ.ಪಿ.ಪ್ರಸಾದ್, ಎಚ್. ಎಲ್. ಶರತ್. ರಿವರ್ ವ್ಯೂ ಶಾಲೆಯ ಮುಖ್ಯಸ್ಥ ಇಮ್ರಾನ್, ಕಾಫಿ ಬೆಳೆಗಾರ ಶ್ರೀನಿವಾಸ್ ಗೌಡ,ವಿಶೇಷ ಸನ್ಮಾನಿತರಾದ ಡಾll ಎ.ಯು.ಪಾದೂರ್,ಹಿರಿಯ ವೈದ್ಯರು,ಚೆನ್ನಪ್ಪ ನಿವೃತ ಫಾರ್ಮಸಿ ಅಧಿಕಾರಿ,ನೀವೃತ್ತ ಜಾನುವಾರು ಅಧಿಕಾರಿ ಜೆ.ಲಿಯೋ, ಸುದೇಶ್,ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಹಾಗೂ. ಶಿಕ್ಷಕರ ವೃಂದದವರು ಇದ್ದರು.



