kalla malu kollabedi

 

 

ಬಣಕಲ್ ದಿ ಪ್ಲಾಂಟರ್ಸ್ ಸ್ಪೋರ್ಟ್ ಕ್ಲಬ್ (ರಿ ),  ಬಣಕಲ್ ಪೊಲೀಸ್ ಠಾಣೆ ಮತ್ತು ಸ್ಥಳೀಯ ಬೆಳೆಗಾರರ ಸಹಯೋಗದಲ್ಲಿ ಕಳ್ಳ ಮಾಲು ಕೊಳ್ಳಬೇಡಿ ಎಂಬ  ಜಾಗೃತಿ ಮೆರವಣಿಗೆಯನ್ನು ಬಣಕಲ್ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾಫಿ ಬೆಳೆಗಾರ ಪ್ರವೀಣ್ ಗೌಡ ಬಣಕಲ್ ಮಾತನಾಡಿ ಮಲೆನಾಡಿನಲ್ಲಿ ಇತ್ತೀಚೆಗೆ ಕಾಫಿ ಮತ್ತು ಇತರೆ ಕೃಷಿ ಫಸಲುಗಳ ಕಳ್ಳತನ ಹೆಚ್ಚಾಗಿದೆ. ಕಾಫಿ ಮತ್ತು ಕಾಳುಮೆಣಸಿಗೆ ಉತ್ತಮ ಬೆಲೆ ಇದ್ದು, ಕಳ್ಳರು ಈ ಬೆಳೆಗಳ ಮೇಲೆ ಕಣ್ಣು ಹಾಕಿದ್ದಾರೆ. ಕಾಫಿಯನ್ನು ಗಿಡದಲ್ಲಿಯೇ ರೆಕ್ಕೆಸಹಿತ ಕದ್ದುಕೊಯ್ಯುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದೀಗ ಕಳ್ಳರ ಹಾವಳಿಯಿಂದಾಗಿ ಬೆಳೆ ಉಳಿಸಿಕೊಳ್ಳಲು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಕಳ್ಳತನ ಕೃತ್ಯ ಮಾಡುವವರಿಗೆ ಯಾರು ಬೆಂಬಲ ನೀಡಬಾರದು, ಕಳ್ಳತನದಿಂದ ತಂದಿರುವ ವಸ್ತು ಎಂದು ಸಂಶಯ ಬಂದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು. ಇದರ ಬಗ್ಗೆ ಜಾಗೃತಿ ಮೂಡಿಸಲು ಇಂದು ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದರು.

ಬಣಕಲ್ ಠಾಣಾ ಪಿ ಎಸ್ ಐ ರೇಣುಕಾ ರವರು ಮಾತನಾಡಿ ಕೆಲವರು ಈ ಕಳ್ಳತನ ಮಾಡಲೆಂದೇ ರಾತ್ರೋರಾತ್ರಿ ತೋಟಗಳಿಗೆ ನುಗ್ಗುತ್ತಿದ್ದಾರೆ. ಹಸಿ ಕಾಫಿಯನ್ನೇ ಚೀಲದಲ್ಲಿ ಕಳವು ಮಾಡಲಾಗುತ್ತಿದೆ. ಅಲ್ಲದೆ ಬೆಳೆಗಾರರು ಒಣಗಿಸಿಟ್ಟ ಕಾಫಿ ಕಣಕ್ಕೆ ತೆರಳಿ ಕಣದಿಂದಲೇ ಕದಿಯುವ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ ಕಾಫಿ ಒಣಗಿಸುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.ಕಾಫಿ ಕೊಳ್ಳುವವವರು ಇದರ ಬಗ್ಗೆ ಗಮನ ಹರಿಸಬೇಕು ಅಪರಿಚಿತರು ಕಳ್ಳ ಮಾಲು ಮಾರಲು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ಕೊಡಬೇಕು ಎಂದರು.

ಇದಕ್ಕೂ ಮುನ್ನ ನೂರಾರು ಬೆಳೆಗಾರರು ಮತ್ತು ಪೊಲೀಸರು ದಿ ಪ್ಲಾಂಟರ್ಸ್ ಸ್ಪೋರ್ಟ್ ಕ್ಲಬ್ ಬಣಕಲ್ ಅವರಣದಿಂದ ಮೆರವಣಿಗೆ ಪ್ರಾರಂಭಿಸಿ ಮತ್ತಿಕಟ್ಟೆ ರಸ್ತೆ ಹಾಗೂ ಕೆ ಎಂ ರಸ್ತೆ ಮೂಲಕ ಸಾಗಿ ಪೆಟ್ರೋಲ್ ಬಂಕ್ ವರೆಗೆ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ