awai 2

 

 

ಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಅವೇಜ್ ಅಹಮದ್ ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ.

ಭೂಮಿ ಮತ್ತು ಭೂಮಿಯ ನಾನಾ ರೀತಿಯ ವಾತಾವರಣದ ಸೂಕ್ಷ್ಮ ಮಾಹಿತಿಗಳನ್ನು ಸೆರೆಹಿಡಿಯಬಲ್ಲ ಮೂರು ಉಪಗ್ರಹಗಳನ್ನು ಅವೇಜ್ ಅಹಮದ್ ಅವರ  ಪಿಕ್ಸೆಲ್‌ ಕಂಪನಿ ಹಾರಿಬಿಟ್ಟಿದೆ. ಈ ಮೂರು ಉಪಗ್ರಹಗಳು ವಿಶ್ವದಲ್ಲೇ ಅತ್ಯುನ್ನತ ಸಾಮರ್ಥ್ಯದ ವಾಣಿಜ್ಯ ಉದ್ದೇಶದ ಹೈಪರ್‌ಸ್ಪೆಕ್ಟ್ರಾ(Hyper spectra) ಉಪಗ್ರಹಗಳಾಗಿವೆ ಎಂದು ಕಂಪನಿ ಹೇಳಿಕೊಂಡಿದೆ. ಇದೇ ಸರಣಿಯಲ್ಲಿ ಕಂಪನಿ ಈಗಾಗಲೇ 3 ಉಪಗ್ರಹಗಳನ್ನು ಹಾರಿಸಿದ್ದು, ಅದರ ಜೊತೆಗೆ ಮತ್ತೆ ಇದೀಗ ಮೂರು ಉಪಗ್ರಹ ಸೇರಿದೆ.

ಅಮೆರಿಕದ ಸ್ಪೇಸ್‌ಎಕ್ಸ್‌ ಸಂಸ್ಥೆಯ ಮೂಲಕ ಭಾರತೀಯ ಕಾಲಮಾನ ಮಂಗಳವಾರ ಮುಂಜಾವಿನ 1 ಗಂಟೆಗೆ ಅಮೆರಿಕದ ಕ್ಯಾಲಿಫೋರ್ನಿಯಾದ ವ್ಯಾಂಡನ್‌ಬರ್ಗ್‌ ಉಡ್ಡಯನ ನೆಲೆಯಿಂದ ಉಪಗ್ರಹಗಳನ್ನು ಹಾರಿಬಿಡಲಾಯಿತು ಎಂದು ಕಂಪನಿಯ ಸಂಸ್ಥಾಪಕ ಅವೈಸ್‌ ಅಹಮದ್‌ ತಿಳಿಸಿದ್ದಾರೆ.

 

ಯಾರಿವರು ಅವೇಜ್ :

ಆಲ್ದೂರು ಪಟ್ಟಣದಲ್ಲಿ ಮೆಡಿಕಲ್ ಶಾಪ್ ಮಾಲೀಕರಾಗಿರುವ ನದೀಮ್ ಅಹಮದ್ ಅವರ ಪುತ್ರ ಅವೇಜ್   ತನ್ನ ಪ್ರಾಥಮಿಕ ಶಿಕ್ಷಣವನ್ನು ಆಲ್ದೂರಿನಲ್ಲಿಯೇ ಪಡೆದು  ಮುಂದೆ ಬಿರ್ಲಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

25ರ ಹರೆಯದ ಅವೇಜ್ ದೇಶದ ವೈಜ್ಞಾನಿಕ ಮತ್ತು ಸಂವಹನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಆಗಬಲ್ಲ ಖಾಸಗಿ ಉಪಗ್ರಹಗಳನ್ನು ಅಭಿವೃದ್ಧಿಗೊಳಿಸಿ ಅಂತರಿಕ್ಷಕ್ಕೆ ಹಾರಿಬಿಡುವ ಮಹತ್ವದ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈಗಾಗಲೇ ಕಳೆದ ವರ್ಷ ಮೂರು ಕಮರ್ಷಿಯಲ್ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಸೇರಿಸಿದ್ದ ಅವರ ಪಿಕ್ಸಲ್ ಕಂಪನಿ ಇದೀಗ ಮತ್ತೆ ಮೂರು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಅವೇಜ್ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸಹ ಗುರುತಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅವೇಜ್ ಅವರ ಕಾರ್ಯವನ್ನು ಶ್ಲಾಘಿಸಿದೆ.

ಪಿಕ್ಸೆಲ್‌ ಹಾರಿಬಿಟ್ಟಿರುವ ಫೈರ್‌ಫ್ಲೈ ಉಪಗ್ರಹಗಳು, ಹಾಲಿ ಹೈಪರ್‌ಸ್ಪೆಕ್ಟ್ರಲ್‌ ಉಪಗ್ರಹಗಳಲ್ಲಿ ಇರುವ ಸಾಮಾನ್ಯ ಚಿತ್ರಗಳಿಗಿಂತ 6 ಪಟ್ಟು ಹೆಚ್ಚು ಗುಣಮಟ್ಟದ ಚಿತ್ರ ಸೆರೆಹಿಡಿಯಬಲ್ಲದಾಗಿದೆ. ಸಾಂಪ್ರದಾಯಿಕ ಉಪಕರಣಗಳು ಸೆರೆಹಿಡಿಯಲಾಗದ ಅಂಶಗಳನ್ನೂ ಈ ಉಪಗ್ರಹದ ಕ್ಯಾಮೆರಾಗಳು ಸೆರೆಹಿಡಿಯಬಲ್ಲದು. ಇದರ ಮೂಲಕ ಭೂಮಿಯ ಮೇಲಿನ ರಾಸಾಯನಿಕ ಬದಲಾವಣೆ, ಭೂಮಿಯ ಆರೋಗ್ಯದಲ್ಲಿನ ಬದಲಾವಣೆ, ನೀರಿನ ಗುಣಮಟ್ಟ ಮತ್ತು ವಾತಾವರಣದಲ್ಲಿ ಬದಲಾವಣೆಯನ್ನು ಕೂಡಾ ಹಿಂದೆಂದಿಗಿಂತಲೂ ಹೆಚ್ಚು ನಿಖರವಾಗಿ ಪತ್ತೆ ಹೆಚ್ಚಬಹುದಾಗಿದೆ ಎಂದು ಅವೇಜ್ ಅಹಮದ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಭೂ ಕಕ್ಷೆಯಲ್ಲಿ ಸುತ್ತುತ್ತಿರುವ 5 ಸೆಂ.ಮೀನಷ್ಟು ಸಣ್ಣ ವಸ್ತುಗಳ ಮೇಲೂ ನಿಗಾ ಇಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ವಾಣಿಜ್ಯ ಉಪಗ್ರಹವನ್ನು ಬೆಂಗಳೂರು ಮೂಲದ ದಿಗಂತರಾ ಏರೋಸ್ಪೇಸ್‌ ಸಂಸ್ಥೆ ಉಡ್ಡಯನ ಮಾಡಿದೆ.ಅ ‘ಸ್ಪೇಸ್‌ ಕ್ಯಾಮೆರಾ ಫಾರ್‌ ಅಬ್ಜೆಕ್ಟ್‌ ಟ್ರಾಕಿಂಗ್‌’ (ಸ್ಕಾಟ್‌), ಅತ್ಯಂತ ಸಣ್ಣ ವಸ್ತುಗಳ ಮೇಲೆ ಕೂಡಾ ನಿಗಾ ಇಡುವ ಸಾಮರ್ಥ್ಯ ಹೊಂದಿದೆ. ಇದು ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳ ಸುರಕ್ಷತೆಗೆ ಇನ್ನಷ್ಟು ಬಲ ತುಂಬಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಬಾಹ್ಯಾಕಾಶವು ಉಪಗ್ರಹಗಳು, ನೌಕೆಗಳು ಮತ್ತು ಬಾಹ್ಯಾಕಾಶ ತ್ಯಾಜ್ಯಗಳಿಂದ ತುಂಬಿದ್ದು ಭವಿಷ್ಯದಲ್ಲಿ ಸಾಕಷ್ಟು ಅಪಾಯ ತರುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ದಿಗಂತರಾ ನೆರವು ನೀಡಲಿದೆ ಎಂದು ಸಂಸ್ಥೆಯ ಸಿಇಒ ಅನಿರುದ್ಧ ಶರ್ಮಾ ಹೇಳಿದ್ದಾರೆ.

ನಮ್ಮ ರಾಜ್ಯದ ಇಬ್ಬರು ಯುವ ವಿಜ್ಞಾನಿಗಳು ಮಾಡಿರುವ ಸಾಧನೆ ಹೆಮ್ಮೆಪಡುವಂತಹುದಾಗಿದೆ. ಇವರ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸೋಣ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ