ola misalu

 

 

ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ  ಎಚ್ ಎನ್ ನಾಗಮೋಹನ್ ದಾಸ್ ಆಯೋಗಕ್ಕೆ ನಮ್ಮ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಎಂದು ಅಖಿಲ ಕರ್ನಾಟಕ ಸುಡುಗಾಡು ಸಿದ್ಧ ಮಹಾ ಸಂಘ ರಾಷ್ಟ್ರೀಯ ಅಧ್ಯಕ್ಷ, ರಾಜ್ಯ ಬಿಜೆಪಿ ಎಸ್ ಸಿ ಮೋರ್ಚಾ ಸಂಶೋಧನೆ & ಯೋಜನೆ ವಿಭಾಗ ಸಂಚಾಲಕ ಲೋಹಿತ್ ತಿಳಿಸಿದ್ದಾರೆ.

ಒಳಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಅಂತರ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಹೆಚ್ಚಿನ ಆದ್ಯತೆ ನೀಡುವಂತೆ   ಮನವಿ ಮಾಡಿದ್ದು ಅತ್ಯಂತ ನಿರ್ಲಕ್ಷಿತ ಅಲೆಮಾರಿ ಸಮುದಾಯಗಳಿಗೆ ಸೂಕ್ತ ಪ್ರಾಮುಖ್ಯತೆ ಮತ್ತು ಆದ್ಯತೆಯನ್ನು ನೀಡುವುದಾಗಿ ಆಯೋಗದ ಅಧ್ಯಕ್ಷರು ಭರವಸೆ ನೀಡಿದ್ದಾರೆ. ಸರಿಯಾದ ಇತಿಹಾಸ, ಸಂಗತಿಗಳು ಮತ್ತು ಅಂಕಿ ಅಂಶಗಳೊಂದಿಗೆ ವರದಿಯನ್ನು ಸಿದ್ಧಪಡಿಸಿದ  ಎ ಎಸ್ ಪ್ರಭಾಕರ್ ಸರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅನೇಕ ಅಲೆಮಾರಿ ಮುಖಂಡರು ಭಾಗವಹಿಸಿದ್ದರು ಡಾ. ಚಿನ್ನು ಧೋಂಬರ ,  ಚಾವಡೆ ಲೋಕೇಶ್ ಗೋಸಂಗಿ ,  ಶಾಂತರಾಜು ಢಕ್ಕಲಿಗ , ಆನಂದ ಧೋಂಬರ ,  ಶಿವು ಬುಡುಗ ಜಂಗಮ , ಮಹೇಂದ್ರ ರಾವ್ ಸಾಸ್ನಿಕ್ ಶಿಳ್ಳೆಕ್ಯಾತ ,  ಶ್ರೀನಿವಾಸ ಶಿಳ್ಳೆಕ್ಯಾತ ,  ಮೋಹನ್ ಹೊಸೂರು ಗಂಟಿಚೋರ್ ,  ವೆಂಕಟರಮಣಯ್ಯ ಹಂಧಿಜೋಗಿ ,  ರಾಜೇಂದ್ರ ಹಂಧಿ ಜೋಗಿ , ಮಂಡ್ಯ  ರಾಜಣ್ಣ ,  ಕೃಷ್ಣಮೂರ್ತಿ , ರಮೇಶ್, ಸಾಬಣ್ಣ ಪರಿಯವರ್ , ಮಹಾಂತೇಶ ಸಂಕಲ , ಯಲ್ಲಪ್ಪ ಚೆನ್ನದಾಸರು , ಶೇಕಪ್ಪ ಸುಡುಗಾಡು ಸಿದ್ಧ , ಚೌಡಪ್ಪ ,ಸುನಿಲ್ ಹೆಳವರ್ ಪರಶುರಾಮ ಮುನುವಳ್ಳಿ ,ಲಿಂಗರಾಜು ಸುಡುಗಾಡು ಸಿದ್ದ, ಹನುಮಂತು, ಕಮಲಪ್ಪ ಹಾಗೂ ಅನೇಕ ಹಿರಿಯ ಮುಖಂಡರು ಭಾಗವಹಿಸಿ ಸಾಮಾಜಿಕ ನ್ಯಾಯದ ಆಧಾರದಲ್ಲಿ ನಮ್ಮ ಸರಿಯಾದ ಪಾಲು ಪಡೆಯಲು ಮುಂದಿನ ಚಟುವಟಿಕೆಗಳ ಕುರಿತು ಚರ್ಚಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ