ಚಿಕ್ಕಮಗಳೂರು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಡಿ.ಎಲ್. ಅಶೋಕ್ ಕುಮಾರ್ ಬಾಳೆಗದ್ದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಅಶೋಕ್ ಕುಮಾರ್ ಅವರು ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಉಪಾಧ್ಯಕ್ಷರಾಗಿ ರಂಗನಾಥ್ ಕಡೂರು, ಕಾರ್ಯದರ್ಶಿಯಾಗಿ ಪಿ.ಕೆ. ಬಸವರಾಜು, ಎನ್.ಅರ್.ಪುರ, ಖಜಾಂಚಿಯಾಗಿ ಎಸ್.ಎಲ್. ರುದ್ರೇಗೌಡ ಕಡೂರು ಮತ್ತು ರಾಜ್ಯ ಪ್ರತಿನಿಧಿಯಾಗಿ ಬಿ.ಆರ್. ರವಿ ತರೀಕೆರೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೃಷಿಕ ಸಮಾಜ ಜಿಲ್ಲಾ ಸಮಿತಿ ಸದಸ್ಯರಾಗಿ ಕೆ.ಸಿ.ಕೆಂಗೇಗೌಡ ಲಕ್ಯಾ, ಬಿ.ಕೆ. ನಾರಾಯಣಸ್ವಾಮಿ ಎನ್.ಅರ್.ಪುರ, ಕೆ.ಎನ್. ಗೋಪಾಲಹೆಗ್ಡೆ ಶೃಂಗೇರಿ, ಎಂ. ಸಿದ್ದಬಸಪ್ಪ ಅಜ್ಜಂಪುರ, ಹೆಚ್.ಎ. ಕೃಷ್ಣಮೂರ್ತಿ ಕೊಪ್ಪ, ಎ.ಕೆ. ವಸಂತೆಗೌಡ ಆವತಿ, ಪಿ.ಕೆ. ನಾಗೇಶ್ ಪಟ್ಟದೂರು, ಮೂಡಿಗೆರೆ, ಎಂ.ಕೆ. ವೆಂಕಟೇಶ್ ಭಟ್ ಶೃಂಗೇರಿ, ಎಂ.ಆರ್.ಚಂದ್ರಮೌಳಿ ತರೀಕೆರೆ, ಸಿ.ಇ.ಚಂದ್ರಪ್ಪ ಅಜ್ಜಂಪುರ, ಎಂ.ಜಿ. ಶಂಕರ ಕೊಪ್ಪ,

ಡಿ.ಎಲ್. ಅಶೋಕ್ ಅವರು ಪ್ರಸ್ತುತ ಮೂಡಿಗೆರೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿದ್ದರಿಂದ ಜಿಲ್ಲಾ ಸಮಿತಿಗೆ ಸದಸ್ಯರಾಗಿದ್ದರು. ಇದೀಗ ಅವರ ಹಿರಿತನ ಮತ್ತು ಅನುಭವವನ್ನು ಗುರುತಿಸಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.
ಮೂಡಿಗೆರೆ ತಾಲ್ಲೂಕಿನ ಬಾಳೆಗದ್ದೆ ಗ್ರಾಮದವರಾದ ಅಶೋಕ್ ಕುಮಾರ್ ಅವರು ಉತ್ತಮ ಕೃಷಿಕರಾಗಿದ್ದಾರೆ. ರಾಜಕೀಯವಾಗಿ ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷರಾಗಿದ್ದಾರೆ. ಮೂಡಿಗೆರೆ ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರಾಗಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿರುವ ಅಶೋಕ್ ಕುಮಾರ್ ಅವರು ; ಕೃಷಿಕ ಸಮಾಜ ಕೃಷಿ ಇಲಾಖೆಯ ಸಹಯೋಗದಲ್ಲಿ ರೈತರಿಗೆ ಅನುಕೂಲಕರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ, ರೈತರಿಗೆ ತರಬೇತಿ, ಮಾಹತಿಗಳನ್ನು ನೀಡುವ, ರೈತರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಒಂದು ಸಂಸ್ಥೆಯಾಗಿದೆ. ಜಿಲ್ಲೆಯಲ್ಲಿ ಕೃಷಿಕ ಸಮಾಜದ ಕಾರ್ಯಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿ, ಎಲ್ಲಾ ಸದಸ್ಯರ ಮತ್ತು ಕೃಷಿ ಇಲಾಖೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುವುದು ಎಂದಿದ್ದಾರೆ. ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಿದ ಎಲ್ಲಾ ಸದಸ್ಯರಿಗೆ, ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ, ಮಾಜಿ ಸಚಿವರುಗಳಿಗೆ, ರಾಜಕೀಯ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಎಲ್. ಅಶೋಕ್ ಕುಮಾರ್ ಅವರಿಗೆ ಮೂಡಿಗೆರೆ ತಾಲ್ಲೂಕು ಕೃಷಿಕ ಸಮಾಜದ ಸದಸ್ಯರು ಮತ್ತು ಕಾಂಗ್ರೇಸ್ ಮುಖಂಡರಾದ ಡಾ.ಡಿ.ಎಲ್. ವಿಜಯಕುಮಾರ್ ಮತ್ತು ಬಿ.ಎಂ. ಸಂದೀಪ್ ಅವರು ಅಭಿನಂದನೆ ಸಲ್ಲಿಸಿದರು.


