ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂಡಿಗೆರೆ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ಪಟ್ಟಣದ ಸಂಘದ ಕಚೇರಿಯಲ್ಲಿ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ಮಲೆನಾಡು ಮಿಂಚು ಪತ್ರಿಕೆ ಸಂಪಾದಕ ಪ್ರಸನ್ನಕುಮಾರ್, ಉಪಾಧ್ಯಕ್ಷರಾಗಿ ಸಂತೋಷ್ ಅತ್ತಿಗೆರೆ, ಕಾರ್ಯದರ್ಶಿಯಾಗಿ ಪ್ರಕಾಶ್ ಬಕ್ಕಿ, ಖಜಾಂಚಿಯಾಗಿ ಪ್ರಸನ್ನ ತಳವಾರ ಅವರನ್ನು ಅವಿರೊಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ಆನಂದ್ ಕಣಚೂರು ವಹಿಸಿದ್ದರು. ಚುನಾವಣಾಧಿಕಾರಿಯಾಗಿ ಎ.ಆರ್.ಉದಯಶಂಕರ್ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪ್ರಸನ್ನ ಗೌಡಹಳ್ಳಿ, ಎಂ.ಎಚ್.ಅಮರ್‍ನಾಥ್, ತನು ಕೊಟ್ಟಿಗೆಹಾರ, ನಯನ ತಳವಾರ, ಉಮಾಶಂಕರ್, ಗಣೇಶ್ ಮಗ್ಗಲಮಕ್ಕಿ, ಸಂತೋಷ್ ಹಂಡುಗುಳಿ, ಸೋಮಶೇಖರ್, ಮನ್ಸೂರ್, ಸೈಯದ್, ಶಾರದಾ ಸೋಮಶೇಖರ್ ಉಪಸ್ಥಿತರಿದ್ದರು.



