ಚಿಕ್ಕಮಗಳೂರು ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಆರ್.ಲೋಕೇಶ್ ಹಾಗೂ ಉಪಾಧ್ಯಕ್ಷರಾಗಿ ಎ.ಜೆ.ರಾಜೇಶ್ ಆಲ್ದೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದು ಚುನಾವಣಾಧಿಕಾರಿ ಅನುಪಮ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಸಮಾಜದ ಮುಖಂಡರು ಕಟ್ಟಿ ಬೆಳೆಸಿರುವ ಸಂಘವನ್ನು ಇನ್ನೂ ಉತ್ತಮ ಹಂತಕ್ಕೆ ಕೊಂಡೊಯ್ದು ಜಿಲ್ಲೆಯಲ್ಲಿ ಮಾದರಿ ಸಂಘವನ್ನಾಗಿ ಮಾಡುವ ಜವಾಬ್ದಾರಿ ನೂತನ ಆಡಳಿತ ಮಂಡಳಿ ಮೇಲಿದೆ. ಪರಸ್ಪರ ಸಹಕಾರ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಎಂ. ರಾಜಶೇಖರ್ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿ ನಂದಿಸಿ ಮಾತನಾಡಿ, ವೀರಶೈವ ಸಮಾಜದ ಹಲವು ಹಿರಿಯ ಸಹಕಾರಿ ಬಂಧುಗಳ ಶ್ರಮ ಹಾಗೂ ಅವರ ಜವಾಬ್ದಾರಿಯಿಂದ ಜಿಲ್ಲೆಯಲ್ಲಿ ವೀರಶೈವ ಪತ್ತಿನ ಸಹಕಾರ ಸಂಘ ತಲೆಎತ್ತಿದೆ ಎಂದರು.
ನೂತನ ಅಧ್ಯಕ್ಷ ಡಿ.ಆರ್.ಲೋಕೇಶ್ ಮಾತನಾಡಿ, ಎಲ್ಲಾ ನಿರ್ದೇಶಕರ ಸಹಕಾರದಿಂದ ನಮ್ಮ ಸಮಾಜದ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಂಘವನ್ನು ಆರ್ಥಿಕವಾಗಿ ಸಧೃಡಗೊಳಿಸಿ ನಮ್ಮ ಸಮಾಜದ ಜನರಿಗೆ ಅನುಕೂಲವಾಗುವಂತೆ ಬೆಳೆಸಬೇಕು. ಜಿಲ್ಲೆಯಲ್ಲಿ ಮಾದರಿ ಸಂಘವನ್ನಾಗಿ ಮಾಡಲು ಉಪಾಧ್ಯಕ್ಷರು ಹಾಗೂ ನಿರ್ದೇಶಕರು ತಮಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಹೆಚ್.ಎನ್. ನಂಜೇಗೌಡ, ನಿರ್ದೇಶಕರಾದ ಷಡಾಕ್ಷರಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ನಿರಂಜನ್, ಸಂಘದ ನೂತನ
ನಿರ್ದೇಶಕರಾದ ಮಂಜುನಾಥ್, ಕಿಶನ್, ಮಲ್ಲಿಕಾರ್ಜುನ್, ದರ್ಶನ್, ಮೋಹನ್, ಗಿರೀಶ್, ವೀರೇಶ್, ಸುಶಿಲಮ್ಮ, ಗಂಗಾಧರ್, ಪವಿತ್ರ, ಟೌನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಕೋಟೆ ಈಶ್ವರ್, ತಾಲೂಕು ವೀರಶೈವ ಮಹಾ ಸಭಾ ಉಪಾಧ್ಯಕ್ಷ ಆರಾಧ್ಯ, ಖಾಸಗಿ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ಷಣ್ಣುಕ, ನಗರ ವೀರಶೈವ ಸಮಾಜದ ಕಾರ್ಯದರ್ಶಿ ಜಗದೀಶ್, ಆಲ್ಲೂರು ಹೋಬಳಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಮಹೇಶ್, ಮುಖಂಡ ಬಿ.ಎಸ್.ರಾಜೀವ್, ವೀರಶೈವ ಪತ್ತಿನ ಸಹಕಾರ ಸಂಘದ ಸಿಇಒ ಷಡಾಕ್ಷರಿ ಇದ್ದರು.



