ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಕಾಳಿಂಗ ಸರ್ಪವೊಂದನ್ನು ಸೆರೆಹಿಡಿಯಲಾಗಿದೆ.
ತರುವೆ ಗ್ರಾಮದ ಅರುಣ ಹಾಗೂ ಟಿ. ಎಂ. ಲಕ್ಷ್ಮಣ ಗೌಡರ ಮನೆ ಸಮೀಪ 16 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ತಕ್ಷಣ ಉರುಗ ಪ್ರೇಮಿ ಬಣಕಲ್ ನ ಸ್ನೇಕ್ ಅರೀಫ್ ಮತ್ತು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಲಾಗಿತ್ತು.
ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ನೇಕ್ ಆರೀಫ್ ಅವರು ಕಾಳಿಂಗ ಸರ್ಪವನ್ನು ಸೆರೆಹಿಡಿದು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟರು.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಧಿಕಾರಿ ದೀಪಕ್, ಅರಣ್ಯ ಗಸ್ತು ಪಾಲಕ ಉಮೇಶ್ ಹಾಗೂ ಶಂಕರ್ ಇದ್ದರು.



