check

 

 

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನಲ್ಲಿ ಕಾಡುಕೋಣ ದಾಳಿಗೆ ರೈತ ಬಲಿ‌ ಹಿನ್ನೆಲೆಯಲ್ಲಿ  ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಚೆಕ್ ವಿತರಿಸಲಾಯಿಉತ.

ಕಳಸ ಸಮೀಪದ ಹಳುವಳ್ಳಿ ಗ್ರಾಮದಲ್ಲಿ ಕೃಷಿಕ ರಘುಪತಿ ಹೆಬ್ಬಾರ್ ಎಂಬುವವರು ಕಾಡುಕೋಣ ದಾಳಿಯಿಂದ ಸಾವನ್ನಪ್ಪಿದ್ದರು.

ಮೃತರ ಪತ್ನಿ ರೇವತಿ ಅವರ ಹೆಸರಿಗೆ ಸರ್ಕಾರದಿಂದ ರೂ. 15 ಲಕ್ಷ ಮೊತ್ತದ ಚೆಕ್ ನೀಡಲಾಗಿದೆ. ರಘುಪತಿ ಹೆಬ್ಬಾರ್ ಅವರ ಪುತ್ರನಿಗೆ ಚೆಕ್ ಹಸ್ತಾಂತರಿಸಲಾಗಿದೆ.

ಭದ್ರಾ ಟೈಗರ್ ರಿಸರ್ವ್ ಫಾರೆಸ್ಟ್ ಎಸಿಎಫ್ ನಂದೀಶ್ ಅವರು ಮೃತರ ಕುಟುಂಬಕ್ಕೆ ಚೆಕ್ ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಕೆ.ಆರ್. ಪ್ರಭಾಕರ್, ಕಾಂಗ್ರೇಸ್ ಅಧ್ಯಕ್ಷ ಶ್ರೇಣಿಕ್, ಅಕ್ರಮ ಸಕ್ರಮ ಸಮಿತಿ ಸದಸ್ಯ ವಿಶ್ವಾನಾಥ್, ಕಳಸ ಸಹಕಾರ ಸಂಘದ ನಿರ್ದೇಶಕ ಎನ್.ಸಿ. ನಾರಾಯಣಗೌಡ, ಶಾಸಕರ ಆಪ್ತ ಸಹಾಯಕ ಶಂಷುದ್ದೀನ್ ಮುಂತಾದವರು ಉಪಸ್ಥಿತರಿದ್ದರು.

ಕಾಡುಕೋಣ ಹಾವಳಿ ಹಿನ್ನಲೆ ಶುಕ್ರವಾರ ಕಳಸ ತಾಲೂಕು ಬಂದ್ ಗೆ ಕರೆ ನೀಡಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ