IMG_20250208_143432_copy_591x517

 

 

ಚಿಕ್ಕಮಗಳೂರು  ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ‌ ಸಾವಿನ ಸರಣಿ ಮುಂದುವರೆದಿದೆ.

ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕತ್ತಲೇಖಾನ್ ಎಸ್ಟೇಟ್ ನಲ್ಲಿ ಘಟನೆ ನಡೆದಿದೆ.

ವಿನೋದಾ ಬಾಯಿ (39) ಮೃತ ಕಾರ್ಮಿಕ ಮಹಿಳೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ಮೂಲದ ವಿನೋದಾ ಬಾಯಿ ಕೂಲಿಗಾಗಿ  ವಲಸೆ ಬಂದಿದ್ದರು.

ಇಂದು ಬೆಳಗ್ಗೆ ಕಾಫಿ ಹಣ್ಣು ಕೊಯ್ಯುವಾಗ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು ತೀವ್ರ ಗಾಯಗೊಂಡು ಮಹಿಳೆ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿದ್ದು ಸ್ಥಳೀಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್ ಆರ್ ಪುರ ತಾಲೂಕಿನಲ್ಲಿ  ಕಾಡಾನೆ ದಾಳಿಯಿಂದ ಇತ್ತೀಚೆಗೆ ಮೂರ್ನಾಲ್ಕು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ಕಳಸ ತಾಲೂಕಿನಲ್ಲಿ, ಕಾಡುಕೋಣ ದಾಳಿಯಿಂದ ಕೃಷಿಕರೊಬ್ಬರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಜೀವ ಕಾಡುಪ್ರಾಣಿಯ ದಾಳಿಗೆ ಬಲಿಯಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ