shooting 2

 

 

ದಿನಾಂಕ 28.01.2025 ರಿಂದ 02.02.2025 ರವರೆಗೆ ಚಿಕ್ಕಮಗಳೂರು ಡಿ.ಎ.ಆರ್. ನಲ್ಲಿ ಆಯೋಜಿಸಲಾಗಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಡಿ.ಎ.ಆರ್. ಆವರಣದಲ್ಲಿ ನಡೆಸಲಾಯಿತು. 520 ಶಿಬಿರಾರ್ಥಿಗಳಿಗೆ RPI DAR ರವರು ಪ್ರಮಾಣ ವಚನ ಬೋಧಿಸಿ, ಡಾ. ವಿಕ್ರಮ ಅಮಟೆ, IPS, ಪೊಲೀಸ್ ಅಧೀಕ್ಷಕರವರು ಪ್ರಮಾಣ ಪತ್ರಗಳನ್ನು ವಿತರಿಸಿದರು.

ಅತ್ಯುತ್ತಮ ಶೂಟರ್ ಪ್ರಶಸ್ತಿಯನ್ನು ಆಲ್ದೂರು ಹೋಬಳಿ ದೊಡ್ಡಮಾಗರವಳ್ಳಿ ಗ್ರಾಮದ ರಾಹುಲ್ ಗೌಡ ಡಿ ಎ ಗಳಿಸಿದರು. ರಾಹುಲ್ ಅವರು ಆಲ್ದೂರು ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಬಿ. ಅಶೋಕ್ ಅವರ ಪುತ್ರ.

ಸಮಾರೋಪ ಸಮಾರಂಭದಲ್ಲಿ   ರಮೇಶ್ ಬಾಬು ಎನ್, IFS, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಚಿಕ್ಕಮಗಳೂರು ವಿಭಾಗ;   ಶೈಲೇಂದ್ರ ಹೆಚ್ ಎಂ, ಡಿ.ವೈ.ಎಸ್.ಪಿ., ಚಿಕ್ಕಮಗಳೂರು ಉಪವಿಭಾಗ ಮತ್ತು ಬಂದೂಕು ತರಬೇತಿ ನೀಡಿದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಬಂದೂಕು ತರಬೇತಿ ಶಿಬಿರದಲ್ಲಿ ಡಾ. ವಿಕ್ರಮ ಅಮಟೆ,   ಪೊಲೀಸ್ ಅಧೀಕ್ಷಕರವರು  ಜನಸಂಪರ್ಕ ಸಭೆಯನ್ನು ನಡೆಸಿ, ಸಾರ್ವಜನಿಕರೊಂದಿಗೆ ಸಂವಹನ ನಡೆಸಿ, ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಕುರಿತು ಕುಂದುಕೊರತೆಗಳನ್ನು ಆಲಿಸಿದರು.  ವಲಸೆ ಕಾರ್ಮಿಕರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವಂತೆ, ಅಪರಾಧ ತಡೆ, ರಸ್ತೆ ಸುರಕ್ಷತೆ, ಸೈಬರ್ ಅಪರಾಧಗಳು, Drug Free Karnataka mobile app ಮೂಲಕ ಡ್ರಗ್ಸ್ ಬಗ್ಗೆ ಮಾಹಿತಿ ನೀಡುವಂತೆ, 112 ತುರ್ತು ಸಹಾಯವಾಣಿ ಮತ್ತು 1930 ಸೈಬರ್ ಅಪರಾಧ ಸಹಾಯವಾಣಿ ಕುರಿತು ಪೊಲೀಸ್ ಅಧೀಕ್ಷಕವರು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ತುಂಬಾ ಸುವ್ಯವಸ್ಥೆಯಿಂದ ಕೂಡಿದ ಈ ಬಂದೂಕು ತರಬೇತಿ ಕ್ಯಾಂಪ್ ಪೊಲೀಸ್ ಶಿಸ್ತಿನ ಪಾಠವನ್ನು ಅಚ್ಚುಕಟ್ಟಾಗಿ ತೋರ್ಪಡಿಸಿದ್ದೀರಿ.

ಡಿ ಎ ಆರ್ ಸಹಾದೇವ್ ಹಾಗು ಟ್ರೈನರ್ ಪ್ರಸನ್ನ ಅವರ ಕಾರ್ಯಚಟುವಟಿಕೆ ಈ ಕ್ಯಾಂಪ್ ಇನ್ನಷ್ಟು ಮೆರುಗು ತಂದಿತ್ತು ಎಂದರು ತಪ್ಪಾಗದು.

ದೈಹಿಕ ಕಸರತ್ತಿನ ಪಾಠವನ್ನು ಪ್ರಸನ್ನ ಅವರಿಂದ ಕಲಿತರೆ ಮಾನಸಿಕ ಸ್ಥಿರತೆಯ ಪಾಠವನ್ನು ಸಹದೇವ್ ಅವರಿಂದ ಕಲಿಯುವಂತೆ ಆಯಿತು. ಧನ್ಯವಾದಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗು ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ.

ರಜಿತ್ ಕೆಳಗೂರ್ ಕಳಸ

 

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ