raja 111

 

 

‘ಕ್ಯಾಶ್‌ಲೆಸ್’ ಭಾರತದ ಬದಲು ‘ಕಾನ್ಸ್‌ಲೆಸ್’ ಭಾರತ ನಿರ್ಮಿಸಬೇಕು’ ಎಂದು ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ‘ಅಂಬೇಡ್ಕರ್ ಅಭಿಪ್ರಾಯಪಟ್ಟರು.

ಆಲ್ದೂರು ಪಟ್ಟಣದಲ್ಲಿ ಬುಧವಾರ ನಡೆದ ಸ್ವಾಭಿಮಾನ ‘ಪ್ರಜಾಪ್ರಭುತ್ತದ ಅಂಬೇಡ್ಕರ್ ಸಮ್ಮೇಳನದಲ್ಲಿ ಯಶಸ್ಸಿನಲ್ಲಿ ಚಿಂತನೆಗಳು; ಭಾರತದಲ್ಲಿ ಜಾತಿಗಳ ಸರ್ವನಾಶ’ ವಿಷಯದ ಕುರಿತು ಅವರು ಮಾತನಾಡಿದರು.

ಅಂಬೇಡ್ಕರ್ ಅವರ ಹೋರಾಟದ ಫಲ ದೇಶದಲ್ಲಿ ಇಂದಿಗೂ ಪರಿಣಾಮ ಬೀರುತ್ತಿರುವುದು ಕಂಡು ಸಂತಸವಾಗುತ್ತಿದೆ. ಅಂಬೇಡ್ಕರ್ ಅವರ ಮೊಮ್ಮಗ ಎಂಬುದು ನನಗೆ ಹೆಮ್ಮೆಯ ಸಂಗತಿಯಾಗಿದೆ.

ಕೇವಲ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣದಿಂದ ಮಾತ್ರ ಸಂತೃಪ್ತರಾಗದೇ ಅವರ ವಿಚಾರಗಳನ್ನು ಬದುಕಿನಲ್ಲಿ, ಸಮಾಜದಲ್ಲಿ ಅನುಷ್ಠಾನಕ್ಕೆ ತರುವ ಕಡೆಗೆ ಮನಸ್ಸು ಮಾಡಬೇಕು ಎಂದರು.

ಪುತ್ಥಳಿ ನಿರ್ಮಾಣ ಸಮಿತಿಯವರಿಗೆ -ಜವಾಬ್ದಾರಿ ಹೆಚ್ಚಾಗಿದ್ದು, ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಒಬ್ಬೊಬ್ಬ ಐ.ಎ.ಎಸ್, ಐ.ಪಿ.ಎಸ್, ವಕೀಲ, -ಎಂಜಿನಿಯರ್ ಸೃಷ್ಟಿಸುವ ಹೊಣೆ ನಿಮ್ಮದಾಗಿದೆ’ ಎಂದರು. ರಾಜರತ್ನ ಅವರ ಭಾಷಣವನ್ನು ವಕೀಲ ಸುಧೀರ್ ಕುಮಾರ್ ಮುರೋಳ್ಳಿ ಕನ್ನಡಕ್ಕೆ ಅನುವಾಧಿಸಿದರು. ಅಂಬೇಡ್ಕರ್ ಅವರ ಮೊಮ್ಮಗನನ್ನು ಕಂಡು ನೆರೆದಿದ್ದ ಜನರು ಪುಳಕಿತರಾದರು.

ಅಂಬೇಡ್ಕರ್ ವುತ್ಥಳಿ ನಿರ್ಮಾಣ ಸಮಿತಿ ವತಿಯಿಂದ ರಾಜರತ್ನ ಅಂಬೇಡ್ಕರ್ ಅವರಿಗೆ ಬುಧವಾರ ಸ್ವಾಭಿಮಾನಿ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು

ನವರಾಜು ಎಚ್ ಕಠಾರದಹಳ್ಳಿ ಮಾತನಾಡಿ, ‘ಅಂಬೇಡ್ಕರ್ ಪುತ್ಥಳಿ ವಿಭಿನ್ನವಾಗಿರಬೇಕು ಎಂದು ಒಂದು ವರ್ಷದಿಂದ ಯೋಜನೆ ರೂಪಿಸಿ, ಅವರ ಒಂದು ಕೈಯಲ್ಲಿ ಪದವಿ ಪ್ರಮಾಣ ಪತ್ರ ಇನ್ನೊಂದು ಕೈಯಲ್ಲಿ ಸಂವಿಧಾನ ಇರುವಂತೆ ಎಂದರು. ನಿರ್ಮಿಸಲಾಗಿದೆ’

‘ಮಹಿಳೆ ಮತ್ತು ಸಾಮಾಜಿಕ ಸಮಾನತೆಯ ಬಗ್ಗೆ ಅಂಬೇಡ್ಕರ್ ಚಿಂತನೆ’ ಕುರಿತು ಮಾಜಿ ಸಭಾಪತಿ ರಮೇಶ್ ಕುಮಾ‌ರ್ ಮಾತನಾಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ರುದ್ರಸ್ವಾಮಿ ಮಾತನಾಡಿದರು. ‘ಭೀಮನ ಸಂವಿಧಾನ ಮತ್ತು ಭಾರತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಕಠಾರದಹಳ್ಳಿ ಸತೀಶ್, ಎಚ್. ಎಸ್ ಕವೀಶ್, ದೊಡ್ಡ ಮಾಗರವಳ್ಳಿ ಆಶೋಕ್ ಡಿಬಿ, ಗಣೇಶ್ ಕಠಾರದಹಳ್ಳಿ, ಗಾಳಿಗಂಡಿ ಸುಂದರ್, ಅಶ್ರಫ್ ಕೆ., ನೋಜ್ಜಿಪೇಟೆ ಜಗದೀಶ್, ಎಂ. ಕೆ ಮಂಜುನಾಥ್ ಅಲ್ಲೂರು, ಗಿರೀಶ್ ದೊಡ್ಡ ಮಾಗರವಳ್ಳಿ, ಹಳ್ಳಿ ಸುರೇಶ್, ಬೆಳಗೋಡು ಎಸ್ಟೇಟ್ ಮಂಜುನಾಥ್, ನೋಜ್ಜಿಪೇಟೆ ಲಕ್ಷ್ಮಣ, ದಿ.ಲಿಯಾಕತ್ ಅಲಿ ಅವರ ಪರವಾಗಿ ಪುತ್ರ ಅರ್ಬಾಜ್ ಅಲಿ ಸೇರಿ ಒಟ್ಟು 13 ಮಂದಿಯನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರನ್ನು ಗೌರವಿಸಲಾಯಿತು.

ಪುತ್ಥಳಿ ನಿರ್ಮಾಣ ಸಮಿತಿಯ ಅಧ್ಯಕ್ಷ ಗಣೇಶ್ ಕಠಾರದಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎಂಎಲ್ಸಿ ಸಿ.ಟಿ.ರವಿ, ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ, ಬಿ.ಬಿ ನಿಂಗಯ್ಯ, ಬಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ ರಾಧಾಕೃಷ್ಣ, ಉದ್ಯಮಿ ರವಿ ಕೀರ್ತಿ, ಐಎಎಸ್ ಅಧಿಕಾರಿ ದೇವಿಂದ್ರ ರಾಮ್, ಟಿ. ಕೆ. ಕೌಶಿಕ್ ಎ.ಡಿ, ಕೆಂಚಯ್ಯ, ಕೃಷ್ಣಮೂರ್ತಿ, ಯೋಗೇಶ್ ತುಡುಕೂರು, ಪೂರ್ಣೇಶ್ ಹುಣಸೆ ಮಕ್ಕಿ, ಕುಮಾರ್, ಗಿರೀಶ್ ಹಳ್ಳಿ, ವಸಂತ್, ಉಮೇಶ್ ದೇವರಹಳ್ಳಿ, ಲಕ್ಷ್ಮಣ್ ಹುಣಿಸೆ ಮಕ್ಕಿ, ನಾಗೇಶ್ ದೋಣ ಗುಡಿಗೆ, ಪದಾಧಿಕಾರಿಗಳು ಇದ್ದರು

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ  ಕಲಾತಂಡಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆದು, ಸಂವಿಧಾನ ಶಿಲ್ಪಿಯ ನೂತನ ಪುತ್ತಳಿಗೆ ಮಾಲಾರ್ಪಣೆ ನಡೆಯಿತು. ಪಂಚಾಯಿತಿ ಅವರಣದ ಪಕ್ಕದ ಜಾಗದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಕಲಾವಿದರ ಸಂಘದ ವತಿಯಿಂದ ಭೀಮ ಗೀತೆ ಹಾಡಲಾಯಿತು. ಹೆಡದಾಳು ಪುಟ್ಟರಾಜು ಸಂವಿಧಾನದ ಪೀಠಿಕೆ ಬೋಧಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗೌರವ ಅಧ್ಯಕ್ಷ ಹೊನ್ನಪ್ಪ, ಅಂಬೇಡ್ಕರ್ ವೃತ್ತ ಮತ್ತು ಪುತ್ಥಳಿ ನಿರ್ಮಾಣದ ಕುರಿತು ವಿವರಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ