Oplus_131072

Oplus_131072

 

 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆ ವ್ಯಾಪ್ತಿಯ ಭಾರತೀಬೈಲ್ ಗ್ರಾಮದಲ್ಲಿ ಅಳಿಯನಿಂದ ಅತ್ತೆಯ ಕೊಲೆ ನಡೆದಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

65 ವರ್ಷದ ಯಮುನಾ ಎಂಬುವವರನ್ನು ಅವರ ಅಳಿಯ ಶಶಿಧರ್‌ ಕೊಲೆ ಮಾಡಿದ್ದಾನೆ.

ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ.

ಕೊಲೆ ಮಾಡಿದ ಬಳಿಕ ಶಶಿಧರ್ ಪರಾರಿಯಾಗಿದ್ದಾನೆ.

ಈ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಾರಿಯಾಗಿರುವ ಶಶಿಧರ್‌ನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಕಣತಿ ಗ್ರಾಮದ ದರಣಪ್ಪ ಪೂಜಾರಿ ಅವರ ಪತ್ನಿ ಯಮುನಾ ಕೊಲೆಯಾದ ದುರ್ದೈವಿ.
ಆರು ತಿಂಗಳಿಂದ ಪುತ್ರಿಯ ಮನೆ ಭಾರತಿಬೈಲ್ ಗ್ರಾಮಕ್ಕೆ ಬಂದು ನೆಲೆಸಿದ್ದ ಯಮುನಾ ಅವರು ಭಾನುವಾರ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಮಗಳ ಮನೆಗೆ ಬಂದಿದ್ದರು. ಆಗ ಮನೆಯಲ್ಲಿ ಕುಡಿದು ಜಗಳವಾಡುತ್ತಿದ್ದ ಮಗಳ ಗಂಡನ ಅಣ್ಣ ಶಶಿಧರ ಪೂಜಾರಿಗೆ ಯಮುನಾ ಬುದ್ದಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಶಶಿಧರ ಪೂಜಾರಿ ಸುತ್ತಿಗೆಯಿಂದ ಯಮುನಾ ಅವರ ತಲೆಗೆ ಹೊಡೆದಿದ್ದಾನೆ ಯಮುನಾ ಸ್ಥಳದಲ್ಲಿ ಕುಸಿತು ಬಿದ್ದಲಾಗಿದೆ.

ಕೂಡಲೇ ಅವರನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯಮುನಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಆರೋಪಿ ಶಶಿಧರ ಪೂಜಾರಿ ಈಗಾ ಪರಾರಿಯಾಗಿದ್ದಾನೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ