surveyar

 

 

ಜಮೀನಿನ ನಕ್ಷೆ ಸಿದ್ದಪಡಿಸಿಕೊಡಲು ಲಂಚ ಪಡೆಯುತ್ತಿದ್ದ ಸರ್ವೆಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕಡೂರು ತಾಲ್ಲೂಕು ಸರ್ವೆಯರ್ ಅಶೋಕ್  ಹುಲ್ಲೇಹಳ್ಳಿ ಗ್ರಾಮದ ಸರ್ವೆ ನಂ 61/03 ರಲ್ಲಿರುವ ವೆಂಕಟೇಶ್ ರವರ ಜಮೀನಿಗೆ ಬಂದು‌ ಹಳೆ ನಕ್ಷೆ ಪ್ರಕಾರ ಸರ್ವೆ ಮಾಡಿದ್ದರು. ಹಳೆ ನಕ್ಷೆ ತಪ್ಪಾಗಿದ್ದರಿಂದ ಅದನ್ನು ರದ್ದು ಪಡಿಸಿ  ಹೊಸದಾಗಿ  ಜಮೀನಿನ ನಕ್ಷೆ ತಯಾರಿಸಿಕೊಡುವಂತೆ ಕಡೂರಿನ ಎ ಡಿ ಎಲ್ ಆರ್.  ರವರಿಗೆ ಅರ್ಜಿ ಸಲ್ಲಿಸಿದ್ದರು.

ಸರ್ವೇಯರ್ ಅಶೋಕ್  1,200/-ರೂ ಹಣ ಪಡೆದುಕೊಂಡು ಎಲ್ಲಾ ರೆಕಾರ್ಡ್ ರೆಡಿ ಮಾಡಿ ಕೊಡಲು ಮತ್ತೆ 4,000/-ರೂ ಕೊಡುವಂತೆ  ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಜಮೀನಿಗೆ ಬಂದಿದ್ದ ಸರ್ವೆಯರ್ ಮತ್ತೆ  ಐದು ಸಾವಿರ ಕೇಳಿ ಅಂತಿಮವಾಗಿ ನಾಲ್ಕು ಸಾವಿರ ಕೊಡಿ ಎಂದು ಕೇಳಿದ್ದರು ಎಂದು ತಿಳಿಸಲಾಗಿದೆ .
ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು ಆರೋಪಿಯನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ