ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಮಲ್ಲೇಶ್ವರಂ ಕ್ಷೇತ್ರದ ಶಾಸಕರಾಗಿರುವ ಡಾ. ಅಶ್ವಥ್ ನಾರಾಯಣ ಅವರನ್ನು ಅಭಿನಂದಿಸಲಾಯಿತು.
ಸೋಮವಾರ ಅತ್ತಿಗೆರೆ ಗ್ರಾಮದ ತಮ್ಮ ಬಂಧು ಮತ್ತು ಸ್ನೇಹಿತರಾದ ಚೇತನ್ ಅತ್ತಿಗೆರೆ ಅವರ ಮನೆಯ ಗೃಹಪ್ರವೇಶಕ್ಕೆ ಡಾ. ಅಶ್ವಥ್ ನಾರಾಯಣ ಅವರು ಪತ್ನಿ ಶೃತಿ ಅವರೊಂದಿಗೆ ಆಗಮಿಸಿ ಶುಭ ಹಾರೈಸಿದರು.

ಚೇತನ್ ಅವರು ಬೆಂಗಳೂರಿನಲ್ಲಿ ಯುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಪತ್ನಿ ಸುಪ್ರಿಯ ಅವರು ಬೆಂಳೂರಿನ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದಾರೆ.
ಗೃಹ ಪ್ರವೇಶಕ್ಕೆ ಆಗಮಿಸಿದ್ದ ಡಾ. ಅಶ್ವಥ್ ನಾರಾಯಣ ಮತ್ತು ಪತ್ನಿ ಶೃತಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಮುಖಂಡರಾದ ದೀಪಕ್ ದೊಡ್ಡಯ್ಯ, ಬಿ.ಎನ್. ಜಯಂತ್, ಜೆ.ಎಸ್.ರಘು, ಸುಂದ್ರೇಶ್ ಕೊಣಗೆರೆ, ಸುರೇಂದ್ರ ಕೊಣಗೆರೆ, ಸಂಜಯ್ ಕೊಟ್ಟಿಗೆಹಾರ, ನಾಗೇಶ್ ಅತ್ತಿಗೆರೆ, ಚೇತನ್ ಅತ್ತಿಗೆರೆ ಅವರ ಕುಟುಂಬದವರು ಉಪಸ್ಥಿತರಿದ್ದರು.



