IMG_20250218_092856

 

 

ಆತ್ಮವಿಶ್ವಾಸ, ಧೈರ್ಯ, ಉತ್ಸಾಹದಿಂದ ಪರೀಕ್ಷೆಗೆ ಸಿದ್ಧರಾದರೆ ಅದೊಂದು ಸಂಭ್ರಮವೆನಿಸುತ್ತದೆ ಎಂದು ಚಿಕ್ಕಮಗಳೂರು ಯುರೇಕಾ ಅಕಾಡೆಮಿ ಸ್ಥಾಪಕ ದೀಪಕ್ ದೊಡ್ಡಯ್ಯ ನುಡಿದರು.

ಅಖಿಲ ಭಾರತೀಯ ಸಾಹಿತ್ಯಪರಿಷದ್ ಮತ್ತು ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ ಕೆ.ಆರ್.ಪೇಟೆಯ ಎಂಇಎಸ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ‘ಪರೀಕ್ಷೆ ಒಂದು ಸಂಭ್ರಮ’ ವಿಶೇಷ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.

ಪರೀಕ್ಷೆಯ ಸಂದರ್ಭದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಪ್ರಮುಖವಾದದ್ದು. ವರ್ಷಪೂರ್ತಿ ಕಲಿತ ಸಂಗತಿಗಳನ್ನು ನೆನಪು ಮಾಡಿಕೊಂಡು ಸಮಾಧಾನ ಚಿತ್ತರಾಗಿ ಪರೀಕ್ಷೆಯನ್ನು ಎದುರಿಸುವುದು ಒಳ್ಳೆಯದು. ಪರೀಕ್ಷೆಗೆ ಸಾಕಷ್ಟು ಮುಂಚಿತವಾಗಿಯೆ ಕೊಠಡಿ ತಲುಪಿರಬೇಕು. ಅಗತ್ಯ ಪರಿಕರ ಹಾಲ್‍ಟಿಕೆಟ್, ತೆಗೆದುಕೊಂಡು ಹೋಗಿರಬೇಕು. ಶಾಂತಚಿತ್ತತೆ, ಸಮಾಧಾನ ಸ್ಥಿತಿ ಉತ್ತರಿಸಲು ಅನುಕೂಲಕರ ಎಂದರು.

ಪ್ರಶ್ನೆಪತ್ರಿಕೆಯನ್ನು ಒಮ್ಮೆ ಪೂರ್ಣವಾಗಿ ಓದಬೇಕು. ಸರಿಯಾಗಿ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಸಂಖ್ಯೆಯನ್ನು ನಮೂದಿಸಿ ಚೆನ್ನಾಗಿ ಉತ್ತರಿಸಬಹುದಾದ ಪ್ರಶ್ನೆಗಳನ್ನು ಮೊದಲು ಆರಿಸಿಕೊಂಡು ಉತ್ತರಿಸಬೇಕು. ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಪ್ರಯತ್ನ ಮಾಡಬೇಕು. ಒಂದೊಮ್ಮೆ ಪ್ರಶ್ನೆಗಳೆ ತಪ್ಪಾಗಿದ್ದಲ್ಲಿ ಇಂತಹ ಸಂದರ್ಭದಲ್ಲಿ ಪೂರ್ಣಅಂಕ ಸಿಗುತ್ತದೆ. ಮೊದಲ ಎರಡುಪುಟ ದುಂಡಾದ ಅಕ್ಷರಗಳಲ್ಲಿ ನಿಧಾನವಾಗಿ ಬರೆದು ಮೌಲ್ಯಮಾಪಕರಲ್ಲಿ ಆಸಕ್ತಿ ಮೂಡಿಸುವಂತಿರಬೇಕು. ನಂತರ ಸಮಯದ ಮಿತಿಯಲ್ಲಿ ವೇಗವಾಗಿ ಉತ್ತರಿಸುತ್ತಾ ಕೊನೆಯ ಪುಟವನ್ನು ನಿಧಾನವಾಗಿ ಬರೆದರೆ ಅಂಕಗಳಿಸುವ ನಿಟ್ಟಿನಲ್ಲಿ ಅನುಕೂಲಕರ ಎಂದರು.

ಪರೀಕ್ಷಾ ಭಯ ಮನಸ್ಸಿನಿಂದ ಕಿತ್ತುಹಾಕಬೇಕು. ಒತ್ತಡ ಮತ್ತು ಆತಂಕ ದೂರವಾದರೆ ಗೊತ್ತಿರುವ ಸಂಗತಿಗಳನ್ನು ಚೆನ್ನಾಗಿ ಬರೆಯಬಹುದು ಎಂದ ದೀಪಕದೊಡ್ಡಯ್ಯ, ತರಗತಿಗಳಲ್ಲಿ ಗಮನವಿಟ್ಟು ಪಾಠಕೇಳಿದ್ದರೆ-ಓದಿದ್ದರೆ ಉತ್ತರಿಸಲು ತಡಕಾಡಬೇಕಿಲ್ಲ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸಮಚಿತ್ತತೆ, ಸತತ ಅಧ್ಯಯನ, ಕಠಿಣಪರಿಶ್ರಮ, ಶಿಸ್ತು ಇದ್ದರೆ ಪರೀಕ್ಷೆ ಒಂದು ಸಂಭ್ರಮವೆನಿಸಕೊಳ್ಳುತ್ತದೆ ಎಂದು ವಿವರಿಸಿದರು.

ಕಸಾಪ ನೂತನ ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣಪ್ರದೇಶದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷೆ ಒಂದು ಸಂಭ್ರಮ ಎಂಬ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯಾರ್ಹವೆಂದರು.
ಎಂಇಎಸ್ ಮುಖ್ಯಶಿಕ್ಷಕ ಅರ್ಜನಪವರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಅಭಾಸಾಪ ಶೃಂಗೇರಿ ವಿಭಾಗೀಯ ಸಂಯೋಜಕ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಸಿದರು. ನಿವೃತ್ತಶಿಕ್ಷಕ ಮೋಹಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶ್ರೀದೇವಿ ವಿದ್ಯಾಸಂಸ್ಥೆಯ ವಿಶ್ರಾಂತ ಮುಖ್ಯಶಿಕ್ಷಕ ಕೆ.ಆರ್.ದಯಾನಂದಗೌಡ ಮಾತನಾಡಿ ಪರೀಕ್ಷಾರ್ಥಿಗಳು ಹಿಂದಿನರಾತ್ರಿ ಚೆನ್ನಾಗಿ ನಿದ್ದೆಮಾಡಿ ಬೆಳಗಿನಜಾವ ಎದ್ದು ಕೆಲಸಂಗತಿಗಳನ್ನು ಮನನಮಾಡಿ, ಸ್ನಾನ ಮಾಡಿ ಶುಭ್ರವಸ್ತ್ರಧಾರಿಗಳಾಗಿ ತೆರಳಿದರೆ ಸಹಜವಾಗಿಯೆ ಒಳ್ಳೆಯ ವಾತಾವರಣ ಉತ್ತರಿಸಲು ಅನುಕೂಲಕರ. ಪರೀಕ್ಷಾ ಕಾಲದಲ್ಲಿ ಸಾತ್ವಿಕ ಆಹಾರವನ್ನು ಹಿತಮಿತವಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಸಮಸ್ಥಿತಿ ಕಾಪಾಡಬಹುದು. ಆರೋಗ್ಯ ಕೈಕೊಟ್ಟರೆ ಪರೀಕ್ಷೆಯಲ್ಲಿ ಉತ್ತರಿಸುವುದೇ ಕಷ್ಟವಾಗುತ್ತದೆ ಎಂದರು.

ಅಭಾಸಾಪ ಜಿಲ್ಲಾಕಾರ್ಯದರ್ಶಿ ಅಶ್ವಥ್‍ಕಂಬಿಹಳ್ಳಿ ಸ್ವಾಗತಿಸಿ, ಶಿಕ್ಷಕ ಮಾಳತಪ್ಪ ವಂದಿಸಿದರು. ಇದೇ ಸಂದರ್ಭದಲ್ಲಿ ನೂತನ ಕಸಾಪ ಅಧ್ಯಕ್ಷ ದಯಾನಂದ ಮತ್ತು ಸಂಪನ್ಮೂಲ ವ್ಯಕ್ತಿ ದೀಪಕದೊಡ್ಡಯ್ಯ ಅವರನ್ನು ಎರಡುಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ