nenu 3_page-0001

 

 

ಚಿಕ್ಕಮಗಳೂರು ಸಮೀಪದ ದಾಸರಹಳ್ಳಿ ಸಮೀಪ ಯುವಕ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.  ಪ್ರೇಯಸಿಯನ್ನು ಕೊಂದು ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಕಾರಿನಲ್ಲಿ ಯುವತಿಯ ಶವ ಇದ್ದರೆ ಪಕ್ಕದ ಮರದಲ್ಲಿ ಯುವಕ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಚಿಕ್ಕಮಗಳೂರು ತಾಲ್ಲೂಕಿನ ದಾಸರಹಳ್ಳಿ ಗ್ರಾಮದ ಬಳಿ ನಡೆದಿದೆ.  ಭದ್ರಾವತಿ ಮೂಲದ ಯುವಕ ಮಧು ರಾಮನಗರ ಸಮೀಪದ ಪೂರ್ಣಿಮಾ ಶವವಾಗಿ ಪತ್ತೆಯಾಗಿರುವ ಪ್ರೇಮಿಗಳು.

ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇವರಿಬ್ಬರೂ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದು ಯುವತಿಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆ‌ ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರು KA 03 AD4628 ನೋಂದಣಿಯ ಬಾಡಿಗೆ ಕಾರಿನಲ್ಲಿ  ಈ ಪ್ರೇಮಿಗಳು ಬಂದಿದ್ದರು ಎನ್ನಲಾಗಿದೆ.

ಯುವತಿಯ ಕತ್ತು ಹಿಸುಕಿರುವ ಗುರುತು ಕಂಡು ಬಂದಿದೆ , ವೇಲ್ ನಿಂದ ಪಕ್ಕದ ಮರದಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಪೂರ್ಣಿಮ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಖಾಸಗಿ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಬೇರೆಯವರೊಂದಿಗೆ ಎಂಗೇಜ್ಮೆಂಟ್ ಆಗಿದ್ದ ಇವಳನ್ನು ಮಧು ಡ್ರಾಪ್ ನೆಪದಲ್ಲಿ ಕಾರಿನಲ್ಲಿ ಕರೆತಂದು ‘ಟ್ರಿಪ್ ಹೋಗೋಣ’ ಎಂದು ಹೇಳಿ ಚಿಕ್ಕಮಗಳೂರಿನ ದಾಸರಹಳ್ಳಿಗೆ ಕರೆದುಕೊಂಡು ಹೋಗಿದ್ದ. ಮಧು ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದವನಾಗಿದ್ದು, ಮಾಗಡಿಯಲ್ಲಿ ಡ್ರೈವರ್ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ.

ಮಧು ಪೂರ್ಣಿಮಾ ಕುಟುಂಬಕ್ಕೆ ಚಿರಪರಿಚಿತನಾಗಿದ್ದು, ಕಳೆದ ಮೂರು ವರ್ಷಗಳಿಂದ ಅವರ ಮನೆಗೆ ಬಂದು ಹೋಗುತ್ತಿದ್ದ. ಪೂರ್ಣಿಮ ಮತ್ತು ಮಧು ನಡುವೆ ಪ್ರೇಮಾಂಕುರವಾಗಿತ್ತು, ತನ್ನ ಪ್ರೇಯಸಿ ಬೇರೆಬ್ಬರೊಂದಿಗೆ ವಿವಾಹ ನಿಶ್ಚಿತಾರ್ಥವಾಗಿದ್ದರಿಂದ ಮಧು ಕೆರಳಿದ್ದ ಎನ್ನಲಾಗಿದೆ. ತನ್ನ ಪ್ರೀತಿ ನಿರಾಕರಿಸಿದ ಪ್ರೇಯಸಿಯನ್ನು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಹಿಂದಿನ ನಿಜವಾದ ಕಾರಣವನ್ನ ತಿಳಿದುಕೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ