santha

 

 

ಸಂತ ಮಾರ್ಥಾಸ್ ಶಾಲೆ ಮೂಡಿಗೆರೆ ಯಲ್ಲಿ ಸರ್ ಸಿ ವಿ ರಾಮನ್, ರಾಮನ್ ಎಫೆಕ್ಟ್ ಪರಿಣಾಮದ ಅಂಗವಾಗಿ ರಾಷ್ಟ್ರೀಯ ವಿಜ್ಞಾನ ದಿನ ನನ್ನ ಆಚರಿಸಲಾಯಿತು .

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸಿಸ್ಟರ್ ಡೀನಾ, ಮುಖ್ಯೋಪಾಧ್ಯಾಯರು ಮೊಲಿ, ಶರತ್ ಕುಮಾರ್, ಆಲ್ವಿನ್ ಫರ್ನಾಡಿಸ್ ಶ್ರೀಮತಿ ಸ್ಪೂರ್ತಿ ಭಾಗವಹಿಸಿದ್ದರು.

ಸಿಸ್ಟರ್ ಡೀನಾ ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನ ದ ಕಾರ್ಯಕ್ರಮ ಗಳು ಮಕ್ಕಳ ಆಲೋಚನೆ ಶಕ್ತಿ ಬೆಳೆಯುತ್ತದೆ ಅವರ ತಮ್ಮಲ್ಲಿರುವ ಪ್ರತಿಭೆಗಳು ಹೊರಹಾಕಲು ಅವಕಾಶ ಮಾಡಿಕೊಡುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಶಿಕ್ಷಕರ ಮಾತನಾಡಿ ವಿಜ್ಞಾನ ವಿಷಯಗಳು ಚಟುವಟಿಕೆ ಆಧಾರಿತವಾಗಿ ಕಲಿಸಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾದ  ಶರತ್ ಕುಮಾರ್ ಮಾತನಾಡಿ ವಿಜ್ಞಾನ/ ಸಮಾಜ ದ ತರಗತಿಗಳು ಪ್ರಯೋಗಾಲಯದಲ್ಲಿ ನಡೆದರೆ ವಿದ್ಯಾರ್ಥಿಗಳು ಮುಟ್ಟಿ ಸಂತಸ ಪಡುತ್ತಾರೆ ಅವುಗಳ ಪರಿಚಯ ಜೊತೆಗೆ ಕಲಿಕೆಯಲ್ಲಿ ನಾವಿನ್ಯತೆ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಆಲ್ವಿನ್ ಫರ್ನಾಂಡಿಸ್ ಮಾತನಾಡಿ ವಿಜ್ಞಾನ ಹಾಗು ತಂತ್ರಜ್ಞಾನ ಬಳಕೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಇಂದಿನ ವಿದ್ಯಾರ್ಥಿಗಳು ಹೊಸ ಹೊಸ ಅವಿಷ್ಕಾರಗಳೊಂದಿಗೆ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ರಚಿಸಿದ್ದ  ವಿಜ್ಞಾನ ಭೌತಶಾಸ್ತ್ರ ರಸಾಯನಶಾಸ್ತ್ರ ಜೀವಶಾಸ್ತ್ರ ಮಾದರಿಗಳನ್ನು ಪ್ರದರ್ಶನ,  ಕನ್ನಡ,ಇಂಗ್ಲಿಷ್ ಗಣಿತದ ವಿಷಯದ ಮಾದರಿ ಚಿತ್ರಪಟಗಳ ಪ್ರದರ್ಶನ ಗಮನ ಸೆಳೆದವು.

ಇದೇ ಸಂದರ್ಭದಲ್ಲಿ ಬೆಂಕಿ ಇಲ್ಲದೆ ಅಡುಗೆ ತಯಾರಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೇಘಶ್ರೀ ಸ್ವಾಗತಿಸಿ, ಜಗದೀಶ್ ವಂದಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ನೆರವೇರಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ