eye 3

 

 

ಜೇಸಿಐ ಮೂಡಿಗೆರೆ,  ಜೇಸಿಐ ಅಲ್ಯೂಮಿನಿ ಕ್ಲಬ್ ಮತ್ತು ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಹಯೋಗದಲ್ಲಿ ಗುರುವಾರ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಉಚಿತ ನೇತ್ರ ತಪಾಸಣೆ, ಪೊರೆ ಶಸ್ತ್ರಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಶಿಬಿರವನ್ನು ಏರ್ಪಡಿಸಲಾಗಿತ್ತು.

ಶಿಬಿರದಲ್ಲಿ ಮೂಡಿಗೆರೆ ಹಾಗೂ ಸುತ್ತಮುತ್ತಲಿನ ನೂರಾರು ಜನರು ಉಡುಪಿಯಿಂದ ಆಗಮಿಸಿದ್ದ ನೇತ್ರ ತಜ್ಞರಿಂದ ಉಚಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಇದರಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಕಂಡು ಬಂದವರನ್ನು ಉಡುಪಿಗೆ ಕರೆದೊಯ್ದು ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಮಸೂರ ಅಳವಡಿಕೆ ಅವಶ್ಯಕತೆ ಇರುವವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಿಗೆರೆ ಜೇಸಿಐ ಅಧ್ಯಕ್ಷ ಜೇಸಿ ಪ್ರದೀಪ್ ಕುನ್ನಹಳ್ಳಿ ವಹಿಸಿದ್ದರು. ಈ ಸಂದರ್ಭದಲ್ಲಿ ಜೇಸಿಐ ಅಲ್ಯೂಮಿನಿ ಕ್ಲಬ್ ವಲಯ ಅಧ್ಯಕ್ಷ ಜೇಸಿ ಯೋಗೇಶ್ ಹೆಚ್.ಕೆ., ಮೂಡಿಗೆರೆ ಜೇಸಿಐ ಕಾರ್ಯದರ್ಶಿ ಪಿ.ಕೆ. ಹಮೀದ್ ಸಬ್ಬೇನಹಳ್ಳಿ, ಲೇಡಿ ಜೆಸಿ ಅಧ್ಯಕ್ಷೆ ರೇಖಾ ನಾಗರಾಜು,  ನಿಕಟಪೂರ್ವ ಅಧ್ಯಕ್ಷ ಸುಪ್ರಿತ್ ಕಾರಬೈಲ್, ಪೂರ್ವಾಧ್ಯಕ್ಷ ವಿಜಯಕುಮಾರ್, ಕಾರ್ಯಕ್ರಮ ನಿರ್ದೇಶಕಿ ರಮ್ಯಾ ಸಂದೇಶ್, ನೇತ್ರ ತಜ್ಞ ಹಾಗೂ ಮೂಡಿಗೆರೆ ಲಯನ್ಸ್ ಮಾಜಿ ಅಧ್ಯಕ್ಷ ರಂಗನಾಥಗೌಡ, ಉಡುಪಿ ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್ ಮತ್ತು ಪ್ರಸಾದ್ ನೇತ್ರಾಲಯದ ಪದಾಧಿಕಾರಿಗಳು, ವೈದ್ಯರು, ಮೂಡಿಗೆರೆ ಜೇಸಿಐ ನ ವಿಶ್ವಕುಮಾರ್,  ಪವನ ವಿಜಯ್, ಕೃತಿ ಪ್ರದೀಪ್, ಸುಧಾ ಚಂದ್ರಶೇಖರ್, ನಿಶ್ಚಿತಾ ಯತೀಶ್, ಪ್ರೇಮಾ ಪುಣ್ಯಮೂರ್ತಿ, ವಿಶ್ವ ಮುಗ್ರಹಳ್ಳಿ, ಅಕ್ಷತ್ ಪಟ್ಟದೂರು,  ಸಿಯಾ ಬುದ್ದಿನ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ