ಭೂ ಸ್ವಾದೀನ ಹಾಗೂ ಪರಿಹಾರ ನೀಡುವ ದೃಷ್ಟಿಯಿಂದ ರಸ್ತೆ ಅಗಲೀಕರಣಕ್ಕೆ ವಿಳಂಬವಾಗುತ್ತಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಅವರು ಶನಿವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ತಾಲೂಕಿನಲ್ಲಿ ರಸ್ತೆ ಅಗಲೀಕರಣಗೊಂಡಿದ್ದು, ಮೂಡಿಗೆರೆ ಮತ್ತು ಶೃಂಗೇರಿಯಲ್ಲಿ ಬಾಕಿ ಉಳಿದಿದೆ. ಮೂಡಿಗೆರೆಯಿಂದ ಮೂಗ್ತಿಹಳ್ಳಿವರೆಗೆ 26 ಕಿ,ಮೀ ರಸ್ತೆ ಅಗಲೀಕರಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಭೂ ಸ್ವಾದೀನ ಹಾಗೂ ಪರಿಹಾರ ನೀಡುವ ಹಿನ್ನಲೆಯಲ್ಲಿ ಕಾಮಗಾರಿ ಪ್ರಾರಂಭಿಸಲು ವಿಳಂಬವಾಗಿದೆ.
ಬೇಲೂರಿನಿಂದ ಹ್ಯಾಂಡ್‍ಪೋಸ್ಟ್‍ವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ 1500 ಕೋಟಿ ಬಿಡುಗಡೆಯಾಗಿದೆ. ಗಡಿಕಲ್‍ಕೊಪ್ಪದಿಂದ ಶೃಂಗೇರಿಯಿಂದ ಎಸ್‍ಕೆ ಬಾರ್ಡರ್‍ವರೆಗೆ ಎನ್‍ಎಚ್ 169 ಮಂಜೂರಾತಿಯಾಗಿದೆ. ಇದರಲ್ಲಿ ಶೃಂಗೇರಿ ಪಟ್ಟಣ 5ಕಿ,ಮೀ ಸಮಸ್ಯೆ ಉಂಟಾಗಿದೆ. 2 ಕಿ,ಮೀ ಭೂಸ್ವಾದೀನ ಅರಣ್ಯದಲ್ಲಿದೆ. ಈ ಸಮಸ್ಯೆ ನಿವಾರಿಸಲು ಅಧಿಕಾರಿಗಳೊಂದಿಗೆ ಚರ್ಚೆ ಆಗಿದೆ. 520ಕೋಟಿ ವೆಚ್ಚದಲ್ಲಿ ಶೃಂಗೇರಿ ಪಟ್ಟನದಿಂದ ತನಿಕೋಡು ಗೇಟ್‍ವರೆಗೆ 8.8 ಕಿಮೀ ಅರಣ್ಯ ಭೂ ಸ್ವಾದೀನ ಬಾಕಿ ಇದೆ. ತನಿಕೋಡಿನಿಂದ ಮಾಳಗೇಟ್ 29 ಕಿ,ಮೀ, ಎಸ್‍ಕೆ.ಬಾರ್ಡರ್‍ನಿಂದ ಮಾಳಗೇಟ್‍ವರೆಗೆ 10,ಕಿಮೀ ಇದರ ಭೂ ಸ್ವಾದೀನ ಬಾಕಿ ಇದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್ 217 ಟವರ್‍ಗಳಿದ್ದು, 26 ಹೊಸ ಟವರ್ ನೀಡಲಾಗಿದೆ. ಅದರಲ್ಲಿ 16 ಟವರ್ ಕಾಮಗಾರಿ ಪೂರ್ಣಗೊಂಡಿದ್ದು, 10 ಬಾಕಿ ಉಳಿದಿದೆ. ಅಲ್ಲದೇ ರಾಜ್ಯಕ್ಕೆ ಇನ್ನೂ 100 ಹೊಸ ಟವರ್ ನಿರ್ಮಿಸಲು ಜಾಗದ ಸರ್ವೆ ನಡೆಯುತ್ತಿದೆ. ಈಗಾಗಲೇ ರಾಜ್ಯಕ್ಕೆ 93 ಬ್ಯಾಟರಿ ನೀಡಿದ್ದು, ಅದರಲ್ಲಿ 53 ಬ್ಯಾಟರಿ ಚಿಕ್ಕಮಗಳೂರು ಜಿಲ್ಲೆಗೆ ಕೊಟ್ಟಿದ್ದಾರೆ.
ಎಲ್ಲಾ ಟವರ್‍ಗಳಲ್ಲಿ 3ಜಿ ಯಿಂದ 4ಜಿ ಆಗುತ್ತಿರುವುದರಿಂದ ಮತ್ತೆ ಬಿಎಸ್‍ಎನ್‍ಎಲ್‍ಗ್ರಾಹಕರು ವಾಪಾದಾಗುತ್ತಿದ್ದಾರೆ. ಇನ್ನು 56 ಟವರ್‍ನಲ್ಲಿ 4ಜಿ ಸಂಪರ್ಕ ಕಾರ್ಯ ಉಳಿದಿದೆ. ಈ ಕೆಲಸದಿಂದಾಗಿ ಕೆಲ ಕಡೆ ನಟ್‍ವರ್ಕ್ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ತನ್ನ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತಾಲೂಕಿನಲ್ಲಿ ಗ್ರಾಹಕರ ಸಮಾವೇಶ ನಡೆಸಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.



