November 6, 2026
;
hasiru 1

 

 

ಹಸಿರು ಫೌಂಡೇಶನ್ (ರಿ) ವತಿಯಿಂದ ಮೂಡಿಗೆರೆ ತಾಲ್ಲೂಕು ಬಣಕಲ್  ಪೊಲೀಸ್ ಸ್ಟೇಷನ್ ಸರ್ಕಲ್ ನಿಂದ ಚಾರ್ಮಾಡಿ ವರೆಗೂ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಈ ಮಹತ್ಕಾರ್ಯದಲ್ಲಿ ಮೂಡಿಗೆರೆ ಡಿ ಎಸ್ ಬಿ ಜಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಹಸಿರು ಫೌಂಡೇಶನ್ (ರಿ) ಸ್ವಯಂ ಸೇವಕರು ಹಾಜರಿದ್ದರು.

ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದ ಬಿಜೆಪಿ ಮುಖಂಡ  ಕುರುವಂಗಿ ವೆಂಕಟೇಶ್ ಹಸಿರು ಫೌಂಡೇಶನ್ (ರಿ) ಸಂಸ್ಥೆ ಬಗ್ಗೆ ಶ್ಲಾಘಿಸಿದರು ಜೊತೆಗೆ ಸಂಸ್ಥೆ ವತಿಯಿಂದ ಇನ್ನಷ್ಟು ಉತ್ತಮ ಕಾರ್ಯಗಳು ಆಗಲಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.

ಇನ್ನೋರ್ವ ಮುಖಂಡರು ವಿಜಯ್ ಕುಮಾರ್ ಮಾತಾಡಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಸಿರು ಫೌಂಡೇಶನ್ (ರಿ) ಜೊತೆ ಕೈಜೋಡಿಸಿ ಒಳ್ಳೆ ಸಂದೇಶ ನೀಡಿದ್ದಾರೆ ಇದು ಹೀಗೆ ಮುಂದುವರೆಯಲಿ ಎಂದರು.

ಹಸಿರು ಫೌಂಡೇಶನ್ (ರಿ) ಅಧ್ಯಕ್ಷ ರತನ್ ಊರುಬಗೆ ಮಾತಾಡಿ  ನಮ್ಮ ಹಸಿರು ಫೌಂಡೇಶನ್ (ರಿ)  ಸಮಾಜ ಸೇವೆ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಲ್ಲರೂ ಕೈ ಜೋಡಿಸಿದರೆ ಏನು ಬೇಕಾದರೂ ಸಾಧಿಸಬಹುದು. ನಮ್ಮಟ್ರಸ್ಟ್ ನಿಂದ ನಿರಂತರವಾಗಿ  ಸಾಮಾಜಿಕ ಕೆಲಸಗಳು ನಡೆಯುತ್ತಿರುತ್ತವೆ ಎಂದರು.

ಈ ಸಂದರ್ಭದಲ್ಲಿ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ ಗೋಪಾಲ್, ಮುಖಂಡರಾದ ಸಂಜಯ್ ಕೊಟ್ಟಗೆಹಾರ, ಪ್ರಭಾಕರ್ ಬಿನ್ನಡಿ, ಗ್ರಾಮ ಪಂಚಾಯಿತಿ ಸದಸ್ಯ ಮಧುಕುಮಾರ್ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *