November 6, 2026
;
maruala siddappa

 

 

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾರ್ಚ್ 7 ಮತ್ತು 8 ರಂದು  20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ  ಮಲೆನಾಡ ಹೆಬ್ಬಾಗಿಲು ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.

ಸಾಹಿತ್ಯ ಸಮ್ಮೇಳನಕ್ಕೆ   ಪಟ್ಟಣದ ತುಂಬೆಲ್ಲಾ  ತಳಿರು ತೋರಣ, ಸ್ವಾಗತ ಫಲಕಗಳು, ಫೆಕ್ಸ್, ಬಂಟಿಂಗ್ಸ್.ಗಳು ರಾರಾಜಿಸುತ್ತಿವೆ.   ಕನ್ನಡ ನಾಡು ನುಡಿ, ಸಾಹಿತ್ಯದ ಸವಿಯನ್ನು ಹಂಚಲು ವಿವಿಧ ವೇದಿಕೆ ನಾಡಿನ ಸಾಹಿತಿಗಳು, ವಾಗ್ಮಿಗಳಿಂದ ನಡೆಯಲಿರುವ ಕಾರ್ಯಕ್ರಮಗಳು ಹಬ್ಬದ ವಾತಾವರಣವನ್ನೇ ಸೃಷ್ಟಿಸಿದೆ.

ಜಾನಪದ ಕೋಗಿಲೆ ಶ್ರೀ ಕೆ.ಆರ್.ಲಿಂಗಪ್ಪ ಮಹಾ ಮಂಟಪ, ಶ್ರೀ ಎಚ್.ಚಂದ್ರಪ್ಪ ಮಹಾದ್ವಾರ, ಶ್ರೀ ತ.ಪು.ವೆಂಕಟರಾಂ ದ್ವಾರ ಹಾಗೂ ಶ್ರೀಮತಿ ಎಂ.ಕೆ. ಇಂದಿರಾ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಮುಖವಾಗಿ ಹತ್ತಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು, 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು, ಹವ್ಯಾಸಿ ಚಿತ್ರಕಲಾವಿದರಿಂದ ಚಿತ್ರ ಕಲಾ ಪ್ರದರ್ಶನಗಳು ಸಮ್ಮೇಳನಕ್ಕೆ ಮೆರುಗು ನೀಡಿವೆ.

ತರೀಕೆರೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಲ್ಲಿ ಹಬ್ಬದ ವಾತಾವರಣವನ್ನೇ ಮೂಡಿಸಿದೆ. ಸಾಹಿತ್ಯ ಜಾತ್ರೆಗೆ ಉದಯೋನ್ಮುಖ ಕವಿಗಳು ಬರಹಗಾರರು, ನಾಡಿನ ಸಾಹಿತಿಗಳು, ವಾಗ್ಮಿಗಳು ಕಳೆಕಟ್ಟುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದು ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದ್ದಾರೆ.

ನಮ್ಮೂರು ತರೀಕೆರೆ ಹಲವು ಪ್ರಥಮಗಳಿಗೆ ಹೆಸರುವಾಸಿಯಾಗಿದೆ. ತರೀಕೆರೆಯಲ್ಲಿ 1967ರಲ್ಲಿ ಜಾನಪದ ಸಮ್ಮೇಳನ ಆಯೋಜನೆಗೊಂಡು ಕವಿ ದ.ರಾ.ಬೇಂದ್ರೆ ಸಂಚರಿಸಿದ ಸ್ಥಳ ತರೀಕೆರೆ, ಇಡೀ ರಾಜ್ಯ ಮತ್ತು ರಾಷ್ಟ್ರದಲ್ಲಿ ಕುಸ್ತಿ ಸ್ಪರ್ಧೆಯಲ್ಲಿ 2ನೆ ಸ್ಥಾನದಲ್ಲಿ ನಿಂತಿರುವ ಈ ಊರು ನೆಲ, ಜಲ, ಸಾಹಿತ್ಯ, ಸಂಸ್ಕೃತಿ, ಜನಪದ ನಾಡು, ಕವಿಗಳ ನೆಲವೀಡಾಗಿದೆ. ಈ ಸಮ್ಮೇಳನಕ್ಕಾಗಿ ಇಡೀ ತರೀಕೆರೆ ಪಟ್ಟಣ ಸರ್ವಾಲಂಕೃತಗೊಂಡಿದೆ ಎಂದು ಕನ್ನಡಶ್ರೀ ಬಿ.ಎಸ್.ಭಗವಾನ್ ಹೇಳಿದರು.

ಸಾಹಿತಿ ಉಪನ್ಯಾಸಕ ಮರುಳಸಿದ್ದಪ್ಪ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದು, ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಎರಡೂ ದಿನಗಳ ಕಾಲ ಅನೇಕ ಗೋಷ್ಠಿಗಳು, ವಿಚಾರ ಮಂಥನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

 

 

Leave a Reply

Your email address will not be published. Required fields are marked *