ಮೂಡಿಗೆರೆ ನಗರ ಟೈಲರ್ ಸಮಿತಿ ವತಿಯಿಂದ ಟೈಲರ್ ಡೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೂಡಿಗೆರೆ ಬಿಜೆಪಿ ಕಛೇರಿ ಪಾಂಚಜನ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಅಬಕಾರಿ ನೀರೀಕ್ಷಕರಾದ ಶೇಖರ್ ಉದ್ಘಾಟಿಸಿದರು. ಅವರು ಮಾತನಾಡಿ ಟೈಲರ್ ವೃತ್ತಿ ಅತ್ಯಂತ ಶ್ರೇಷ್ಠವಾದುದು, ವೃತ್ತಿ ಬಾಂಧವರು ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಯಾವುದೇ ವ್ಯಸನಕ್ಕೆ ಬಲಿಯಾಗದೆ ಉಳಿತಾಯ ಮಾಡಿ ತಮ್ಮ ಮತ್ತು ಮಕ್ಕಳ ಉತ್ತಮ ಭವಿಷ್ಯಕ್ಕೆ ವಿನಿಯೋಗಿಸಲು ಪ್ರಯತ್ನಿಸಬೇಕೆಂದರು.
ತಾಲೂಕು ಅಧ್ಯಕ್ಷರಾದ ಶಿವೇಗೌಡ ಮಾತನಾಡಿ 1997 ರಿಂದಲೂ ನೊಂದ ವೃತ್ತಿ ಬಾಂಧವರಿಗೆ ಧ್ವನಿಯಾಗಿ ಒಗ್ಗಟ್ಟಿನಿಂದ ಸಂಘಟನೆ ಕಟ್ಟಲಾಗಿದೆ. ಸಂಘ ಈಗ ಇಪ್ಪತ್ತೈದು ವರ್ಷಗಳನ್ನು ಪೂರೈಸಿದ್ದು, ಬೆಳ್ಳಿಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತಯಾರಿ ನಡೆಸಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರ ಸಮಿತಿ ಅಧ್ಯಕ್ಷ ಉಮಾಶಂಕರ್ ಎಲ್ಲರ ಸಹಕಾರದಿಂದ ಸಮಾಜಮೂಖಿ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಟೈಲರ್ ವೃತ್ತಿಬಾಂಧವರನ್ನು ಗೌರವಿಸಲಾಯಿತು.
ಪೂರ್ಣೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು, ಉಪಾಧ್ಯಕ್ಷ ಷಣ್ಮುಖಾನಂದ, ಪದಾಧಿಕಾರಿಗಳಾದ ಸತೀಶ್, ಮಂಜುಳಾ, ಗಿರೀಶ್, ಬಸವರಾಜ್, ಗಿರೀಶ್, ಜಗದೀಶ್, ಮೊಹನ್, ಪ್ರಕಾಶ್, ದಿಪೀಕಾ, ಶೃತಿ, ಯೊಗೇಶ್, ಸುರೇಶ್, ಮಂಜು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮೂಡಿಗೆರೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.




