oplus_131072

 

 

ಮೂಡಿಗೆರೆ ತಾಲೂಕು ಕಚೇರಿಯೊಳಗಿರುವ ಸಹಾಯಕ ಭೂಮಾಪನ ನಿರ್ದೇಶಕರ ಇಲಾಖೆಯಲ್ಲಿ ರೈತರ ಯಾವುದೇ ಕೆಲಸಗಳನ್ನು ನಿಗದಿತ ಸಮಯಕ್ಕೆ ಮಾಡಿಕೊಡುತ್ತಿಲ್ಲವೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ. ಮಂಜುನಾಥಗೌಡ ದೂರಿದ್ದಾರೆ

ಭಾನುವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ಜಮೀನಿಗೆ ಸಂಬಂಧಪಟ್ಟ ಪೋಡಿ ಪ್ರಕರಣವನ್ನು ತುರ್ತಾಗಿ ನಿಗದಿತ ಸಮಯಕ್ಕೆ ಮಾಡಿಕೊಡಬೇಕೆಂದು ಸರಕಾರದ ಆದೇಶವಿದ್ದರೂ ಇಲ್ಲಿನ ಭೂಮಾಪನ ನಿರ್ದೇಶಕರ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಸಬೂಬು ಹೇಳಿ ರೈತರನ್ನು ಸತಾಯಿಸುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ದೋಷಪೂರ್ಣ ವರದಿ ಸಲ್ಲಿಸಿ ಅಲೆದಾಡಿಸುತ್ತಿದ್ದಾರೆ. ಅಲ್ಲದೇ ತತ್ಕಾಲ್ ಪೋಡಿ ಪ್ರಕರಣದಲ್ಲಿ ಹಣ ಕಟ್ಟಿಸಿಕೊಂಡು ಒಂದೂವರೆ ವರ್ಷ ಕಳೆದರೂ ಪಹಣಿ, ಮಿಟೇಷನ್‍ಗಳಲ್ಲಿ ಇಂಡಿಕರಣವಾಗಿದೆ ಎಂದು ಅಭಿಲೇಖಾಲಯದ ಗುಮಾಸ್ತರು ಲಂಚಕ್ಕಾಗಿ ಕಡಿತವನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆಂದು ದೂರಿದ್ದಾರೆ.

ಕಚೇರಿಗೆ ಬಂದ ರೈತರನ್ನು ಸೌಜನ್ಯದಿಂದ ನಡೆಸಿಕೊಳ್ಳದೇ ಅಗೌರವದಿಂದ ಮಾತನಾಡುವ ಮೂಲಕ ರೈತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಡಿಡಿಎಲ್‍ಆರ್ ಅವರ ಗಮನಕ್ಕೆ ತರುವ ಸಲುವಾಗಿ ಕಪ್ಪು ಪಟ್ಟಿ ಧರಿಸಿ ಭೂಮಾಪನ ನಿರ್ದೇಶಕರ ಕಚೇರಿಗೆ ಮಾ.14ರಂದು ಪ್ರವೇಶಿಸಲಾಗುವುದು. ಇದಕ್ಕೆ ಡಿಡಿಎಲ್‍ಆರ್ ಅಧಿಕಾರಿಗಳಿಂದ ಸಮರ್ಪಕವಾದ ಉತ್ತರ ಸಿಗದಿದ್ದರೆ ಸ್ಥಳದಲ್ಲೇ ಮೌನ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ