ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟ ಇದರ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಮಾವೇಶ ಕಾರ್ಯಕ್ರಮವನ್ನು ‘ಆರೋಗ್ಯವಂತ ಮಹಿಳೆ ಆರೋಗ್ಯಕರ ಕುಟುಂಬ’ ಎಂಬ ದ್ಯೇಯದೊಂದಿಗೆ ಬಣಕಲ್ ಚರ್ಚ್ ಸಮುದಾಯ ಭವನದಲ್ಲಿ ದಿನಾಂಕ ಮಂಗಳವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವು ಬಣಕಲ್ ಬೀಧಿಯಲ್ಲಿ ನಡೆದ ಜಾಥಾದೊಂದಿಗೆ ಪ್ರಾರಂಭವಾಯಿತು. ಜಾಥಾವನ್ನು ವಂದನಿಯ ತೋಮಸ್, ಬಣಕಲ್ ಬಾಲಿಕ ಮರಿಯ ದೇವಾಲಯದ ಸಹಾಯಕ ಧರ್ಮಗುರುಗಳು ಹಾಗೂ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಅತಿಕಾಭಾನುರವರು ಉದ್ಘಾಟಿಸಿದರು. ವೀರ ಮಹಿಳೆಯರಾದ ಒನಕ್ಕೆ ಓಬವ್ವ, ಕಿತ್ತೂರು ಚೆನ್ನಮ್ಮ, ಮದರ್ ಥೆರೆಸಾ, ಸಾವಿತ್ರಿ ಭಾ ಫುಲೆ ಹಾಗೂ ಭಾರತಾಂಭೆಯ ವೇಷಭೂಷಣ ಹಾಕಿದ ಮಹಿಳೆಯರು ಜಾಥಾದ ಮೆರುಗನ್ನು ಹೆಚ್ಚಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಕಾವ್ಯಶ್ರೀ ಎಚ್ ಎಲ್, ಆಯುರ್ವೇದ ವಿಶೇಷ ವೈದ್ಯಾಧಿಕಾರಿಗಳು, ತರಿಕೆರೆ ಹಾಗೂ ಎಲ್ಲ ಗಣ್ಯರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.
ಪೊಲೀಸ್ ಉಪನಿರೀಕ್ಷಕರು ಬಣಕಲ್ ಪೊಲೀಸ್ ಠಾಣೆ ರೇಣುಕಾರವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮನ್ನು ನೀವು ಮೊದಲು ಪ್ರೀತಿಸಲು ಕಲಿಯಿರಿ. ನೀವು ಉಪಯೋಗಿಸುವ ವಸ್ತುಗಳಲ್ಲ, ಜ ನೀವು ಅಬಲೆಯಲ್ಲ ಸಬಲರು , ನಿಮ್ಮ ಆರೋಗ್ಯವನ್ನು ಮೊದಲು ನೋಡಿಕೊಳ್ಳಿ. ಅದೇ ರೀತಿ ಹೆಣ್ಣು ಮಕ್ಕಳಲ್ಲಿಗಿರುವ ಪ್ರತಿಭೆಗಳನ್ನು ಗುರುತಿಸಿ ಅದರಲ್ಲಿ ಬೆಳೆಯಲು ಅವಕಾಶ ಕೊಡಿ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಮದುವೆಯ ಚಿಂತನೆಯನ್ನು ಬಿಟ್ಟು ಅವರ ಭವಿಷ್ಯವನ್ನು ರೂಪಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಹೇಳಿದರು.
ಡಾಕ್ಟರ್ ಕಾವ್ಯಶ್ರೀ ಅವರು ಮಾತನಾಡುತ್ತಾ ಮಹಿಳೆಯರು ಯಾವ ರೀತಿಯಲ್ಲಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ವಿಶೇಷವಾಗಿ ಆಯುರ್ವೇದದ ಚಿಕಿತ್ಸೆಯನ್ನು ಬಳಸಿ, ಅದರಂತೆ ಸರಿಯಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯವನ್ನು ತಮ್ಮದಾಗಿಸಬಹುದು ಎಂದು ಹೇಳುತ್ತಾ ಉತ್ತಮ ಆರೋಗ್ಯ ಕಾಪಾಡುವಲ್ಲಿ ಬೇಕಾದ ಅನೇಕ ಸಲಹೆ ಸೂಚನೆಗಳನ್ನು ತಿಳಿಸಿದರು.
ಪ್ರೇಮ್ ರವರು ಮಾತನಾಡುತ್ತಾ ಮಹಿಳೆಯರ ಜೀವನ ಸವಾಲುಗಳಿಂದ ತುಂಬಿದ ಜೀವನ ಅದನ್ನು ಎದುರಿಸುವ ಶಕ್ತಿ ಪ್ರತಿಯೊಬ್ಬರಿಗೆ ಇದೆ. ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಪುರುಷರ ಅವಶ್ಯಕತೆ ಇಲ್ಲ ಬದಲಾಗಿ ಪುರುಷರಿಗೆ ಮಹಿಳೆಯ ಅವಶ್ಯಕತೆ ಇದೆ ಹಾಗೂ ಮಹಿಳೆಯು ಯಾವ ಕ್ಷೇತ್ರದಲ್ಲು ಸಾಧನೆಯನ್ನು ಮಾಡಲು ಶಕ್ತಳು ಎಂದು ಹೇಳಿದರು.
ಫ್ರೆಡ್ರಿಕ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರತಿ ಮಹಿಳೆ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಪ್ರೇರಣೆಯಾಗಬೇಕು. ಮಹಿಳೆಯರು ಆರೋಗ್ಯವಂತರಾಗಿದ್ದಲ್ಲಿ ಅವರ ಕುಟುಂಬ ಆರೋಗ್ಯವಾಗಿರುತ್ತದೆ ಕುಟುಂಬ ಆರೋಗ್ಯವಾಗಿದ್ದಲ್ಲಿ ಸಮಾಜವು ಆರೋಗ್ಯಕರವಾಗಿರುತ್ತದೆ ಎಂದು ಹಿತನುಡಿಗಳನ್ನು ಹೇಳಿದರು. ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೇಮ್ ಡಿಸೋಜ ಧರ್ಮ ಗುರುಗಳು ಬಣಕಲ್ ಬಾಲಿಕ ಮರಿಯ ದೇವಾಲಯ, ಝರೀನಾ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಬಣಕಲ್, ಎಡ್ವಿನ್ ಡಿಸೋಜಾ ನಿರ್ದೇಶಕರು, ಶ್ರೀಮತಿ ಆತಿಕ ಬಾನು ವಿಮುಕ್ತಿ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸ್ವಾಮಿ ಜೊಯೆಲ್, ಸ್ವಾಮಿ ಥಾಮಸ್, ಲವೀನಾ, ನವೀನ್ ಕುಮಾರ್, ಸಿದ್ಧಾಂತ್, ಸುಗ್ರಾಮ ಮಹಿಳಾ ಚುನಾಯಿತ ಒಕ್ಕೂಟದ ಸದಸ್ಯರು, ಸಂಸ್ಥೆಯ ಸಿಬ್ಬಂದಿಯಾದ ವಿಂದ್ಯ ರವರು ಉಪಸ್ಥಿತರಿದ್ದರು.



