budget

 

 

ಮೀನು, ಕೋಳಿ, ಕುರಿಮಾಂಸದ ಅಂಗಡಿಗಳನ್ನು ಒಂದೇ ಕಡೆ ತೆರೆಯಬೇಕು, ಎಂ.ಜಿ.ರಸ್ತೆ ಅಗಲೀಕರಣ ಗೊಳಿಸಬೇಕು, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಬೇಕು, ವಾಹನ ದಟ್ಟಣೆ ನಿಯಂತ್ರಿಸಲು ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು, ಬೀದಿ ದೀಪ ಕೆಲಸಮಾಡದೆ ಕತ್ತಲೆಯಲ್ಲಿ ಓಡಾಡುವಂತಾಗಿದೆ. ವ್ಯಾಪಾರ ಪರವಾನಗಿ ಪಡೆಯಲು ಕಂದಾಯ ಪಾವತಿ ವ್ಯವಸ್ಥೆ ಕೈಬಿಡಬೇಕು, ವಾರದ ಸಂತೆಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿದೆ ಎಂದು ಮೂಡಿಗೆರೆ ಪ.ಪಂ.ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಭಾರಿ ಚರ್ಚೆ ನಡೆಯಿತು.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮೀನು, ಕೋಳಿ, ಕುರಿ ಮಾಂಸದ ಅಂಗಡಿ ತೆರೆಯಲಾಗಿದೆ. ಇದರಿಂದ ಪಟ್ಟಣದಲ್ಲಿ ದುರ್ವಾಸನೆ ಉಂಟಾಗುವ ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ. ಹಾಗಾಗಿ ಎಲ್ಲ ತರದ ಮಾಂಸದ ಅಂಗಡಿಗಳನ್ನು ಒಂದೇ ಕಡೆ ತೆರೆಯಬೇಕು ಎಂದು ಬಿ.ಹೆಚ್.ಮಹಮ್ಮದ್ ಮತ್ತು ಆದರ್ಶ ಎಂಬುವವರು ಸಭೆಯ ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಪ.ಪಂ.ಅಧ್ಯಕ್ಷ ವೆಂಕಟೇಶ್ ಮೀನು ಮಾಂಸದ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಸದ್ಯದಲ್ಲೇ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು. ಎಂ.ಜಿ.ಎಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಎಂ.ಜಿ.ಎಸ್ತೆ ವಿಸ್ತರಣೆಗೆ 50 ಲಕ್ಷ ರೂ ಅನುದಾನ ಮೀಸಲಿರಿಸಲಾಗಿತ್ತು. ವರ್ತಕರಿಂದ ವಿರೋಧವಿರಲಿಲ್ಲ. ಇಬ್ಬರು ವ್ಯಕ್ತಿಗಳು ಮಾತ್ರ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಗಲೀಕರಣಕ್ಕೆ ಜಿಲ್ಲಾಧಿಕಾರಿಗಳಿಂದಾಗಲಿ ನ್ಯಾಯಾಲಯ ದಿಂದಾಗಲಿ ತಡೆ ಇಲ್ಲ. ಸದ್ಯದಲ್ಲೇ ಸಭೆ ಕರೆದು ಎಂ.ಜಿ.ರಸ್ತೆ ಅಗಲೀಕರಣ ನಡೆಸಲಾಗುವುದು ಎಂದು ಪ.ಪಂ.ಅಧ್ಯಕ್ಷ ವೆಂಕಟೇಶ್ ಸಬೆಗೆ ತಿಳಿಸಿದರು.

ಪಟ್ಟಣದ ಬೀದಿ ದೀಪಗಳು ಉರಿಯುತ್ತಿಲ್ಲ. ಕೂಡಲೇ ಸರಿಪಡಿಸಬೇಕು ಎಂದು ಪಟ್ಟಣದ ಕುಮಾರ್ ಮತ್ತು ಜಿಯಾವುಲ್ಲ ಎಂಬುವವರು ಸಭೆಯ ಗಮನಕ್ಕೆ ತಂದಾಗ ಪ್ರತಿಕ್ರಯಿಸಿದ ವೆಂಕಟೇಶ್ ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆ ಅಧಿಕಾರ ಪ.ಪಂ.ಗೆ ಇಲ್ಲ. ಕೇಂದ್ರ ಸರ್ಕಾರದಿಂದ ನೇರವಾಗಿ ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಅದರ ನಿರ್ವಹಣೆ ಗುತ್ತಿಗೆ ನೀಡಲಾಗಿದೆ. ಅವರು ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಕೇಂದ್ರದಿಂದ ಪ.ಪಂ.ಗೆ ಬರುವ ಅನುದಾನದಲ್ಲಿ 15ಲಕ್ಷ ರೂ ಹಣವನ್ನು ಕೇಂದ್ರ ಸರ್ಕಾರ ಬೀದಿ ದೀಪ ನಿರ್ವಹಣೆಗೆ ಪಡೆದು ಕೊಂಡಿದೆ. ಬೀದಿ ದೀಪದ ನಿರ್ವಹಣೆ ಪಡೆದ ಗುತ್ತಿಗೆದಾರನ ಮೊಬೈಲ್ ನಂಬರ್ ಎಲ್ಲ ವಿದ್ಯುತ್ ಕಂಬದಲ್ಲಿ ಬರೆಯಿಸಲಾಗುವುದು. ಸಾರ್ವಜನಿಕರು ನೇರವಾಗಿ ಕರೆ ಮಾಡಬೇಕು ಎಂದು ತಿಳಿಸಿದರು.

ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಕಾಂಪೋಸ್ಟ್ ಗೊಬ್ಬರ ಮಾಡಿದರೆ ಅದರಿಂದ ಪಪಂಗೆ ವರಮಾನ ಬರಲಿದೆ ಎಂದು ಟಿ.ಹರೀಶ್ ಎಂಬುವವರು ಹೇಳಿದಾಗ ಕಾಂಪೋಸ್ಟ್ ಗೊಬ್ಬರ ತಯಾರಿಸಲು ವ್ಯವಸ್ಥೆ ಮಾಡಲಾಗಿದೆ ಸದ್ಯದಲ್ಲೇ ಏಜೆನ್ಸಿಗಳಿಗೆ ಟೆಂಡರ್ ನೀಡಲಾಗುವುದು ಎಂದು ಪಪಂ ಸದಸ್ಯೆ ಗೀತಾ ರಂಜನ್ ಅಜಿತ್ ಕುಮಾರ್ ತಿಳಿಸಿದರು.

ಸಂತೆ ಮೈದಾನದಲ್ಲಿ 2 ಕಾಲೇಜುಗಳಿವೆ. ವಾರದ ಸಂತೆ ದಿನ ಶುಕ್ರವಾರ ವಿಧ್ಯಾರ್ಥಿಗಳು ಮತ್ತು ಸಂತೆ ಗ್ರಾಹಕರು ತಿರುಗಾಡದಂತೆ ಅಲ್ಲಲ್ಲಿ ಆಟೋ ರಿಕ್ಷಾ ಮತ್ತು ಇತರೆ ಗೂಡ್ಸ್ ವಾಹನಗಳು ಅಡ್ಡದಿಡ್ಡಿ ನಿಲ್ಲಿಸಲಾಗುತ್ತದೆ. ಅಲ್ಲದೆ ಸಂತೆಗೆ ತೆರಳುವ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಈ ಬಗ್ಗೆ ಪೋಲೀಸರಿಗೆ ಕರೆ ಮಾಡಿದರೆ ಪಪಂ ಗೆ ತಿಳಿಸಿ ಎನ್ನುತ್ತಾರೆ. ಪಪಂಗೆ ಕರೆಮಾಡಿದರೆ ಪೋಲೀಸರಿಗೆ ತಿಳಿಸಿ ಎನ್ನುತ್ತಾರೆ. ಈ ದ್ವಂದ ನೀತಿ ಒಳಾರ್ಥ ಅರ್ಥವಾಗುತ್ತಿಲ್ಲ ಎಂದು ಸಾರ್ವಜನಿಕರು ಒಕ್ಕೊರಲಿನಿಂದ ಹೇಳೆದಾಗ ಸಂತೆಯೊಳಗೆ ವಾಹನಗಳು ತೆರಳದಂತೆ ಹಾಗೂ ಸಂತೆಗೆ ತೆರಳುವ ಜಾಗದಲ್ಲಿ ವಾಹನ ದಟ್ಟಣೆ ದಟ್ಟಣೆ ನಿಯಂತ್ರಿಸುವಂತೆ ಪೋಲೀಸರಿಗೆ ದೂರಿ • ನೀಡಿ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ವೆಂಕಟೇಶ್ ತಿಳಿಸಿದರು.

ಸಭೆಯ ನಂತರ ಪ್ರಾಸ್ತಾವಿಕವಾಗಿ ಪಪಂ ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಾಗೂ ಮೈಸೂರ್ ಬ್ಯಾಂಕ್ ಪಕ್ಕದಲ್ಲಿ ಇದ್ದ ಎರಡು ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲಾಗಿದೆ. ಆಶಾ ಹಿಸ ಕಟ್ಟಡ ನಿರ್ಮಾಣಕ್ಕೆ 1.50ಕೋಟಿ ರೂ ಅನುದಾನ ಬಿಡುಗಡೆಯಾಗಿತ್ತು. ಅದು ಕಾರ್ಯಗತವಾಗದೆ ಸರ್ಕಾರಕ್ಕೆ ವಾಪಾಸ್ಸಾಗಿದೆ. ಆ ಅನುದಾನವನ್ನು ಮರಳಿ ಪಡೆಯಲು ಶಾಸಕಿ ನಯನಾ ಮೋಟಮ್ಮ ಅವರೊಂದಿಗೆ ಚರ್ಚಿಸಲಾಗುವುದು. ಹಣ ಮರಳಿದ ಬಳಿಕ 2 ಕಡೆ ವಾಣಿಜ್ಯ ಮಳಿಗೆ ನಿರ್ಮಿಸಲಾಗುವುದು. ಬಾಡಿಗೆ ಮನೆಗಳು ವಾಣಿಜ್ಯ ಕಟ್ಟಡದ ವ್ಯಾಪ್ತಿಗೆ ಸೇರತ್ತದೆ. ಪಟ್ಟಣದಲ್ಲಿ ಬಾಡಿಗೆ ಮನೆ ಹೊಂದಿರುವ ಕಟ್ಟಡದ ಮಾಲಿಕರ ಪೈಕಿ ಕೆಲವರು ಬಾಡಿಗೆ ಮನೆ ಎಂದು ಪಪಂಗೆ ಮಾಹಿತಿ ನೀಡಿಲ್ಲ.

ತಪ್ಪು ಮಾಹಿತಿ ನೀಡಿದವರ ಕಟ್ಟಡದ ಖಾತೆಯನ್ನು 6 ವರ್ಷಗಳ ಕಾಲ ನಿಷೇಧಿ ಮತ್ತು ದಂಡ ವಿಧಿಸುವ ಅಧಿಕಾರ ಪಪಂಗೆ ಇದೆ, ಮಾಲೀಕರು ತಪ್ಪು ಮಾಹಿತಿ ನೀಡಬಾರದು. ಪಟ್ಟಣದಲ್ಲಿ 3804 ಖಾತೆ ಇದೆ, 600 ಖಾಲಿ ನಿವೇಶನವಿದೆ. 2754 ಕಟ್ಟಡಗಳು, 450 ವಾಣಿಜ್ಯ ಮಳಿಗೆಗಳು ಇವೆ. 1794 ಕುಡಿಯುವ ನೀರಿನಲ್ಲಿ ಸಂಪರ್ಕವಿದೆ. ಅದರ ಪೈಕಿ 75 ವಾಣಿಜ್ಯ, 1699 ವಸತಿ 20 ಸಾರ್ವಜನಿಕ ನಲ್ಲಿಗಳಿವೆ. ಅಂಗಡಿ, ಹೋಟೆಲ್, ಮಾರುಕಟ್ಟೆ ಬಾರ್ ಈ ಕಟ್ಟಡಗಳಲ್ಲಿ ನಲ್ಲಿ ಸಂಪರ್ಕ ಪಡೆದಿದ್ದರೆ ಅದು ವಾಣಿಜ್ಯ ಉದ್ದೇಶಕ್ಕೆ ಎಂದಾಬೇಕು. ಕೆಲವರು ತಪ್ಪು ಮಾಹಿತಿ ನೀಡಿ ಮನೆ ಸಂಪರ್ಕವನ್ನು ಪಡೆದಿದ್ದಾರೆ. ರೆ. ಇದರಿಂದ ಪ.ಪಂ. ಆದಾ ಆದಾಯಕ್ಕೆ ಕುಂಠಿತವಾಗುತ್ತದೆ. ಅಂತಹದನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯರಾದ ಜಿ.ಬಿ.ಧರ್ಮಪಾಲ್, ಎಂ.ಎ. ಹಂಝ, ಗೀತಾ ರಂಜನ್ ಅಜಿತ್ ಕುಮಾರ್, ಖುರ್ಷಿದಾ ಭಾನು, ಸುಧೀರ್, ಕಮಲಮ್ಮ, ಮೋಹನ್, ನಾಮನಿರ್ದೇಶಿತ ಸದಸ್ಯ ಬಿ.ಕೆ.ಜಯಮ್ಮ, ಅಜ್ಜಲ್, ಪಪಂ ಮುಖ್ಯಾಧಿಕಾರಿ ಕಲಾವತಿ ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ