IMG-20250314-WA0000

 

 

ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಳಿಕೆ ಹಣದಿಂದ ಬಡವರ ಮನೆಗೆ ಬಾಗಿಲು ಸಮರ್ಪಿಸಿ ಯುವಕ ತಂಡವೊಂದು ಮಾನವೀಯತೆ ಮೆರೆದಿದ್ದಾರೆ.
ಆಕಸ್ಮಿಕ ಗ್ಯಾಸ್ ಬ್ಲಾಸ್ಟ್‌ ಕಾರಣವಾಗಿ ತನ್ನ ಮನೆ ಕಳೆದುಕೊಂಡಿದ್ದ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಗಬ್ಗಲ್ ಗ್ರಾಮದ ಬಂಗಾರಪ್ಪ ಅವರ ಸಹಾಯಕ್ಕೆ ನಿಡುವಾಳೆ ಭಗತ್ ಸಿಂಗ್ ಯುವಕ ಸಂಘದವರು ಧಾವಿಸಿದ್ದಾರೆ. ಮಾನವೀಯತೆ ಮೆರೆಸಿದ ಈ ಯುವಕರು, ಬಂಗಾರಪ್ಪ ಅವರ ಮನೆಯನ್ನು ಪುನರ್ ನಿರ್ಮಿಸಲು ಸಹಕಾರ ನೀಡಿದ್ದು, ಹೊಸ ಬಾಗಿಲನ್ನು ದಾನವಾಗಿ ಒದಗಿಸಿದ್ದಾರೆ.
ಈ ಹಿಂದೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಸಂಗ್ರಹಗೊಂಡಿದ್ದ ಹಣವನ್ನು ಈ ಪುಣ್ಯ ಕಾರ್ಯಕ್ಕೆ ಬಳಸಲಾಗಿದೆ. ತಮ್ಮ ತಂಡದ ಆಶಯವನ್ನು ಜನಸೇವೆ ಎಂದು ಪರಿಗಣಿಸಿರುವ ಈ ಯುವಕರು, ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ.
ಈ ಕಾರ್ಯಕ್ಕೆ ಸಾಕ್ಷಿಯಾಗಿರುವ ಸ್ಥಳೀಯರು, ಭಗತ್ ಸಿಂಗ್ ಯುವಕರ ಮಾನವೀಯ ಹಾದಿಯನ್ನು ಶ್ಲಾಘಿಸಿ, ಇತರ ಯುವಕರಿಗೂ ಪ್ರೇರಣೆಯಾಗುವಂತೆ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ