onti 1

 

 

ಹಾಸನ  ಜಿಲ್ಲೆಯ   ಬೇಲೂರು ತಾಲ್ಲೂಕಿನಲ್ಲಿ ಮೂರು ಕಾಡಾನೆಗಳನ್ನು ಹಿಡಿಯಲು ರಾಜ್ಯ ಸರ್ಕಾರ ಆದೇಶ ಮಾಡಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆಯ ಮೊದಲ ದಿನವೇ ಒಂದು ಕಾಡಾನೆಯನ್ನು ಸೆರೆಹಿಡಿಯಲಾಗಿದೆ.

ಬೇಲೂರು ತಾಲ್ಲೂಕಿನ ಅರೆಹಳ್ಳಿ ಬಿಕ್ಕೋಡು ಚೀಕನಹಳ್ಳಿ ಭಾಗದಲ್ಲಿ ಮಿತಿಮೀರಿರುವ ಕಾಡಾನೆ  ಹಾವಳಿ, ನಿರಂತರ ಜನರ ಸಾವಿನಿಂದ ರೊಚ್ಚಿಗೆದ್ದಿದ್ದ ಸಾರ್ವಜನಿಕರು ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದ ಮರುದಿನವೇ ಅರಣ್ಯ ಸಚಿವ ಈಶ್ವರ ಖಂಡ್ರೆ ಮೂರು ಕಾಡಾನೆಗಳ ಸೆರೆಗೆ ಆದೇಶ ಹೊರಡಿಸಿದ್ದರು. ಭಾನುವಾರದಿಂದಲೇ    ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಭಾನುವಾರ ಬೆಳಗ್ಗೆ   ಆರು ಇಟಿಎಫ್ (ಎಲೆಪ್ಯಾಂಟ್ ಟಾಸ್ಕ್ ಫೋರ್ಸ್) ತಂಡಗಳು ಪುಂಡಾನೆಗಳನ್ನು ಗುರುತಿಸಲು ತೆರಳಿದ್ದರು. ಬೇಲೂರು ತಾಲೂಕಿನ ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್‌ನಲ್ಲಿ ಎರಡು ಕಾಡಾನೆಗಳು ಕಂಡುಬಂದಿದ್ದು, ಒಂದು ಕಾಡಾನೆಗೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದರು. ಆದರೆ ಎರಡು ಕಾಡಾನೆಗಳು ಜೊತೆ ಜೊತೆಯಲ್ಲಿಯೇ ಎಲ್ಲಂದರಲ್ಲಿ ಓಡಾಡಲಾರಂಭಿಸಿದವು. ನಂತರ ಏಳು ಕುಮ್ಕಿ ಆನೆಗಳೊಂದಿಗೆ ಹರಸಾಹಸಪಟ್ಟು ಅವುಗಳನ್ನು ಬೇರ್ಪಡಿಸಿದರು.

ನಂತರ ಅರವಳಿಕೆ ಚುಚ್ಚುಮದ್ದು ನೀಡಲಾಗಿದ್ದ ಒಂಟಿಸಲಗ ಕುಸಿದು ಬಿದ್ದಿದ್ದು ನೀರು ಹಾಕಿ ಪ್ರಾಥಮಿಕ ಚಿಕಿತ್ಸೆ ನೀಡಿ ಎಚ್ಚರಗೊಳಿದರು. ನಂತರ ಕಾಡಾನೆಯನ್ನು ಸಾಕಾನೆಗಳು ಎಳೆದು ತಂದವು. ಕ್ರೇನ್ ಮೂಲಕ ಕಾಡಾನೆಯನ್ನು ಲಾರಿಗೆ ಹತ್ತಿಸಿ, ಅರಣ್ಯಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಾಕಾನೆ ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಇನ್ನೂ ಎರಡು ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ