16Mudigere1A

 

 

ನಮ್ಮ ನಾಡಿನ ಆಚಾರ, ವಿಚಾರ, ಸಂಸ್ಕøತಿ ಉಳಿಸಿ ಬೆಳೆಸಲು ಯುವ ಜನತೆ ಮುಂದಾಗಬೇಕೆಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಅವರು ಭಾನುವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗ ಮಂದಿರದ ದಿ|| ಎಚ್.ಟಿ.ಬಿಳಿಯಪ್ಪ ವೇದಿಕೆಯಲ್ಲಿ ಮಿತ್ರ ಜಾನಪದ ಕಲಾ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಟಿವಿ, ಮೊಬೈಲ್, ತಂತ್ರಜ್ಞಾನ ಮುಂದುವರೆಯುತ್ತಿದ್ದಂತೆ ಕಲಾವಿದರ ಸಂಖ್ಯೆ ಮತ್ತು ಕಲೆಗಳು ಕ್ಷೀಣಿಸುತ್ತಿದೆ. ಇದು ಆಗಬಾರದು. ಹಿಂದೆ ಕಷ್ಟ, ಸುಖ, ನೋವು ನಲಿವಿನ ಅರ್ಥಪೂರ್ಣ ಸಾರಾಂಶವನ್ನು ಹಾಡಿನ ಮೂಲಕ ಇಂದಿಗೂ ಮುಂದುವರೆಸಿಕೊಂಡು ಬಂದಿರುವ ಜಾನಪದ ಸೊಗಡು ಮುಂದಿನ ಪೀಳಿಗೆಗೆ ದೊರಕುವಂತಾಗಬೇಕು. ಹಾಗಾಗಿ ಯುವಜನಮೇಳ ಕಾರ್ಯಕ್ರಮ ಪ್ರಾರಂಭಿಸುವ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ರದ್ದಾಗಿದ್ದ ಯುವಜನೋತ್ಸವ ಹಾಗೂ ಯುವಜನ ಮೇಳ ಕಾರ್ಯಕ್ರಮವನ್ನು ಸರ್ಕಾರ ಮತ್ತೆ ಪ್ರಾರಂಭಿಸಲಿಲ್ಲ. ಇದರಿಂದ ಜನಪದ ಕಲಾವಿದರು ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶದಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕಲಾವಿದರು ಸಂಘಟನೆ ಮೂಲಕ ಒಗ್ಗೂಡುವ ಅವಶ್ಯಕತೆ ಇದೆ. ಅಲ್ಲದೇ ಕಲಾವಿದರನ್ನು ಬೆಳೆಸುವ ಯುವಜನ ಮೇಳದಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಈ ಮೂಲಕ ರಾಜ್ಯದ ಎಲ್ಲಾ ಕಲಾವಿದರು ಒಂದೆಡೆ ಸೇರಿ ಹಬ್ಬ ಆಚರಿಸುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಕಲಾವಿದ ಸೇವಕರಾದ ರವಿ ಬಂಗಾರ್, ಶಾಮಲ ಕೊಪ್ಪ, ಹೆಸಗಲ್ ಗಿರೀಶ್, ವಿಜಯ್‍ಕುಮಾರ್, ಯಶೋಧ ಹೆಸಗಲ್, ರವಿ ಹುಲಿಹಳ್ಳಿ, ಸುರೇಶ್ ಮಗ್ಗಲಮಕ್ಕಿ, ಅಂಬಾವತಿ, ಅಶೋಕ್‍ರಾಜ್ ಕೂದುವಳ್ಳಿ, ಕೆ.ಎಸ್.ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಕಲಾಸೇವಕರು, ಕಲಾವಿದರನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿತ್ರ ಜಾನಪದ ಕಲಾ ಸಂಘದ ಅಧ್ಯಕ್ಷ ಎಂಎಸ್.ಆನಂದ್ ವಹಿಸಿದ್ದರು. ತಹಸೀಲ್ದಾರ್ ರಾಜಶೇಖರ್ ಮೂರ್ತಿ, ಜಿ.ಪಂ. ಮಾಜಿ ಸದಸ್ಯ ಎಂ.ಎಸ್.ಅನಂತ್, ತಾ.ಪಂ. ಮಾಜಿ ಅಧ್ಯಕ್ಷ ರಂಜನ್ ಅಜಿತ್‍ಕುಮಾರ್, ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ, ಜನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಸಂಘದ ಕಾರ್ಯದರ್ಶಿ ಬಕ್ಕಿ ಮಂಜು, ಮಹೇಂದ್ರಮೌರ್ಯ, ಸುಧೀರ್ ಚಕ್ರಮಣಿ ಮತ್ತಿತರರಿದ್ದರು.

ಸಂಜೆ ನಡೆದ ಬಹುಮಾನ ವಿರತಣಾ ಮತ್ತು ಸಮೋರೋಪ ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಪ.ಪಂ. ಉಪಾಧ್ಯಕ್ಷ ಹೊಸಕೆರೆ ರಮೇಶ್, ಕಸಾಪ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ, ದೀಪಕ್ ದೊಡ್ಡಯ್ಯ, ಬಿ.ಎಸ್. ಜಯರಾಂ, ಕೆ. ಮಂಚೇಗೌಡ, ಜೆ.ಎಸ್.ರಘು, ಗಣೇಶ್ ಮಗ್ಗಲಮಕ್ಕಿ, ಎಂ.ಎಸ್.ಆನಂದ್, ಲೋಕವಳ್ಳಿ ರಮೇಶ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ