ಮೂಡಿಗೆರೆ ತಾಲ್ಲೂಕು, ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿ.ಡಿ.ಓ ಸಿಂಚನ ಮತ್ತು ಅಧ್ಯಕ್ಷ ಆಶ್ರಿತ್ ವಿರುದ್ಧ ಅದೇ ಪಂಚಾಯಿತಿ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿರುತ್ತಾರೆ. ಐದು ಸದಸ್ಯರಿರುವ ಗ್ರಾಮ ಪಂಚಾಯಿತಿಯಲ್ಲಿ ಮೂರು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸದಸ್ಯರಾದ ಶಿವಪ್ರಸಾದ್ ಬಿ.ಇ, ಸುನೀತ ಬಿ.ಟಿ ಉಪಾಧ್ಯಕ್ಷರಾದ ನಾಟ್ಯ ರಂಜಿತ್ ರವರು ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರವಿಶಂಕರ್, ಬಿ.ಡಿ ರವಿ, ಕೆ.ಪಿ ರಾಜು, ಸುಧಾಕರ್, ಜಯಕುಮಾರ್, ರಮೇಶ್ ಪೂಜಾರಿ, ಧನಂಜಯ್, ಜಿತೇಂದ್ರ, ಪ್ರಜ್ವಲ್, ಕೇಶವ್, ಸಂತೋಷ್ ಹೊಕ್ಕಳ್ಳಿ ಹಾಗೂ ಗ್ರಾಮಸ್ಥರು ಭಾಗವಹಿಸಿ ಅಧ್ಯಕ್ಷರು ಮತ್ತು ಪಿಡಿಓ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರ ಬೇಡಿಕೆಗಳು:
1. ಪಂಚಾಯಿತಿ ಆಡಳಿತದಲ್ಲಿ ರಾಜಕೀಯ ನಡೆಸುತ್ತಿರುವ ಪಂಚಾಯಿತಿ ಅಭಿವೃದಿ ಅಧಿಕಾರಿಯನ್ನು ಅಮಾನತ್ತು ಮಾಡಬೇಕು
2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಿರಿಸಬೇಕಾದ ಶೇ 25ರ ಹಣ ದುರ್ಬಳಕೆಯಾಗಿದ್ದು ತನಿಖೆ ನಡೆಸಬೇಕು.
3. ನರೇಗಾ ಯೋಜನೆಯಡಿ ಜನರ ಬೇಡಿಕೆಯಾದ ಅಬ್ಬಿಗುಂಡಿ ಗ್ರಾಮದ ರಸ್ತೆ ಮತ್ತು ಇಂದಿರಾ ನಗರ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸದೆ ಜನರ ಬೇಡಿಕೆ ಮತ್ತು ಜನವಸತಿ ಇರದ ಸ.ನಂ 38ರ ಆಶ್ರಯ ನಿವೇಶನದಲ್ಲಿ ರಸ್ತೆ ನಿರ್ಮಿಸಿರುವುದರ ಮತ್ತು ಮತ್ತಿಕಟ್ಟೆ ಮುಖ್ಯ ರಸ್ತೆಯಿಂದ ಬಿ.ಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ನೀರಾವರಿ ಕಾಲುವೆ ಯನ್ನು ಅಪರಿಚಿತ ಸಾಮಾಗ್ರಿ ಸರಬುರಾಜುದಾರರ ಬಳಸಿ ಕಾಮಗಾರಿ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು.
4. ವಸತಿ ಮತ್ತು ನಿವೇಶನ ರಹಿತರನ್ನು ಸರ್ವೇ ಮೂಲಕ ಗುರುತಿಸುವಂತೆ ಸರ್ಕಾರ ಆದೇಶ ನೀಡಿದ್ದರು ಇದುವರೆಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಯಾವುದೇ ಕ್ರಮ ವಹಿಸದ ಬಗ್ಗೆ ಮತ್ತು ತಪ್ಪು ಮಾಹಿತಿ ನೀಡುತ್ತಿರುವ ಬಗ್ಗೆ.
5. ಕಳೆದ ಮೂರು ವರ್ಷದಿಂದ ಹಳೇಹಳ್ಳಿ ಕಾಲೋನಿ ಅಂಬೇಡ್ಕರ್ ಭವನದ ಪಕ್ಕ ಸಾರ್ವಜನಿಕ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸದೆ ಇದ್ದು ಮೀಸಲಿಟ್ಟ ಅನುದಾನದ ಬಗ್ಗೆ ತನಿಖೆ ನಡೆಸಬೇಕು.
6. 15ನೇ ಹಣಕಾಸು ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಅಂಗವಿಕಲರಿಗೆ ಮೀಸಲಿರಿಸಬೇಕಾದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ತನಿಖೆ ನಡೆಸಬೇಕು.
7. ಡಿಸೆಂಬರ್-2024ರಿಂದ ಇದುವರೆಗೂ ಬೀದಿ ದೀಪಗಳ ನಿರ್ವಹಣೆ ನಡೆಸದಿರುವ ಬಗ್ಗೆ ತನಿಖೆ ನಡೆಸಬೇಕು.
8. ನಿಯಮ ಮೀರಿ ವರ್ಗ-1ರಿಂದ ಗ್ರಾ.ಪಂ ಅಧ್ಯಕ್ಷರ ಮನೆಗೆ ರಸ್ತೆ ದುರಸ್ಥಿ ನಡೆಸಿರುವ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು
9. 2022ರಿಂದ ಎಷ್ಟೋ ಬಿಲ್ ಗೆ ಸಂಬಂಧಿಸಿದಂತೆ ವರ್ಗಾವಣೆಯಾದ ಶಾಸನಬದ್ದ ಹಣ ದುರ್ಬಳಕೆ ಬಗ್ಗೆ ನಡೆಸಬೇಕು.
10. 17ಪೆಬ್ರವರಿ-2025ರಂದು ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯದಲ್ಲಿ ಖುದ್ದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ಸದಸ್ಯರೊಬ್ಬರಿಗೆ ಅಧ್ಯಕ್ಷರ ಪರವಾಗಿರುವಂತೆ ಆಮಿಷವೊಡ್ಡಿದ್ದು ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು.
11. ನರೇಗಾ ಯೋಜನೆಯಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ಖುದ್ದಾಗಿ ಕಾಮಗಾರಿ ನಡೆಸುತ್ತಿರುವ ಮತ್ತು ಸಾಮಾಗ್ರಿ ಸರಬರಾಜುದಾರರ ಖಾತೆಯಿಂದ ತಮ್ಮ ಸಹೋದರಿ ಖಾತೆಗೆ ಹಣ ವರ್ಗಾಯಿಸಿಕೊಂಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು.
12. ಈ-ಸ್ವತ್ತು ನೀಡುವಲ್ಲಿ ಅಕ್ರಮ ನಡೆಸುತ್ತಿರುವ ಬಗ್ಗೆ ತನಿಖೆ ನಡೆಸಬೇಕು.
13. ಬೆಳಗೂಡು ಗ್ರಾಮಕ್ಕೆ ಕುಡಿಯುವ ನೀರಿನ ಮೋಟಾರ್ ದುರಸ್ಥಿ ಮಾಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಬಗ್ಗೆ ಕ್ರಮ ಜರುಗಿಸಬೇಕು.
14. ಡಿಸೆಂಬರ್ ತಿಂಗಳೊಂದರಲ್ಲಿಯೇ ವರ್ಗ-1ರ ಅನುದಾನದಿಂದ 1ಲಕ್ಷದ 50 ಸಾವಿರ ಖರ್ಚು ಮಾಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು
15. ಹೊಕ್ಕಳ್ಳಿ ಗ್ರಾಮದ ನೂತನ ಅಂಗನವಾಡಿ ಕೇಂದ್ರಕ್ಕೆ ಬಿಡುಗಡೆಯಾದ 12ಲಕ್ಷದ 75ಸಾವಿರ ರೂಗಳನ್ನು ವರ್ಗ 15 ವರ್ಗಾಯಿಸಿಕೊಂಡು ದುರ್ಬಳಕೆ ಮಾಡಿಕೊಂಡಿರುವ ಸೂಕ್ತ ತನಿಖೆ ನಡೆಸಬೇಕು.
16. ವಿನಾಯಕ ಏಜೆನ್ಸಿ ಮತ್ತು ಸ್ಪಾರ್ ಎಲೆಕ್ನಿಕಲ್ಸ್, ಕರ್ನಾಟಕ ಸ್ಟೋರ್ ಆಕೌಂಟ್ ಬಗ್ಗೆ ಆಡಿಟ್ ನಡೆಸಬೇಕು.
ಎಂಬ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ಮತ್ತು ತಾ.ಪಂ. ಇಓ ಅವರು ಸೂಕ್ತ ಕ್ರಮ ಜರುಗಿಸಿಬೇಕು ಎಂದು ಆಗ್ರಹಿಸಿದ್ದಾರೆ.



