pranesh1

 

 

ಕಳೆದ ಎರೆಡು ವರ್ಷಗಳಿಂದ ಕಾಡಾನೆಗಳು ಮಲೆನಾಡಿನ ಕಾಫಿ. ಕಾಳುಮೇಣಸು. ಅಡಿಕೆ ತೋಟದಲ್ಲೇ ಬೀಡು ಬಿಟ್ಟಿದ್ದರು ನಿಯಂತ್ರಣ ಮಾಡುವಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಫಲಗೊಂಡಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ ಆರೋಪಿಸಿದ್ದಾರೆ

ಅವರು ಹೇಳಿಕೆಯಲ್ಲಿ ತಿಳಿಸಿ ನಮ್ಮದೆ ಮಲೆನಾಡಿನ ನಂದಿಪುರ ಮಾಕೋನಹಳ್ಳಿ, ತುದಿಯಾಲ. ಕಾರ್ಬೈಲ್ ಸೇರಿದಂತೆ ಮೂಡಿಗೆರೆ ನಗರದ ಸಮೀಪವೇ ಭುವನೇಶ್ವರಿ ಹೆಸರಿನ ಮೂವತ್ತಕ್ಕೂ ಹೆಚ್ಚು ಕಾಡಾನೆಗಳು ಬಿಡು ಬಿಟ್ಟಿದ್ದು. ಈಗಾಗಲೇ ಈ ಸಂಬಂಧ ನಾನು ಸೇರಿದಂತೆ ನಮ್ಮ ಪಕ್ಷ ವಿಧಾನಸೌಧ ಅಧಿವೇಶನದಲ್ಲೇ ಚರ್ಚೆ ಮಾಡಿದ್ದು. ಇವುಗಳಿಗೆ ಪರಿಹಾರವಾಗಿ ಆನೆ ಕಾರಿಡಾರ್ ಮಾಡಿ ಹಾಗೂ ಪುಂಡಾನೆಗಳ ಓಡಾಟಕ್ಕೆ ಕಡಿವಾಣ ಹಾಕಿ ಅವುಗಳನ್ನು ಸ್ಥಳಾಂತರ ಮಾಡುವುದು ಇಲ್ಲವೇ ಮೂಲಸ್ಥಾನಕ್ಕೆ ಅಟ್ಟುವ ಕೆಲಸ. ಜೋತೆಗೆ ರೈಲ್ವೆ ಬ್ಯಾರಿಕೇಟ್ ನಿರ್ಮಾಣ ಮಾಡಬೇಕು ಎಂದು ಅನೇಕ ಬಾರಿ ಆಗ್ರಹಿಸಲಾಗಿದೆ.

ಅರಣ್ಯ ಸಚಿವರು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹಾರಿಕೆ ಉತ್ತರ ಹೇಳುತ್ತಾರೆ ಹೊರತು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಅರಣ್ಯ ಇಲಾಖೆಯನ್ನು ನಿಯಂತ್ರಣದಲ್ಲಿ ಇಡುವಲ್ಲಿಯು ವಿಫಲವಾಗಿದೆ. ಈ ಆನೆಗಳ ಮತ್ತಾವರ ಇಂದಾವರ. ಹಲಸುಮನೆ. ಒಳಗೇರಹಳ್ಳಿ. ಹಳುವಳ್ಳಿ ಬಾಣವರ. ಗಂಜಲಗೂಡು. ಮುಳ್ಳೂರು ಈ ಭಾಗಗಳಲ್ಲೂ ದಾಂದಲೆ ಎಬ್ಬಿಸುತ್ತಿವೆ. ಸೆಕ್ಷನ್ 144 ಹಾಕಿ ಜನರನ್ನೇ ಗದರಿಸಲಾಗುತ್ತದೆ ಹೊರತು. ಆನೆಗಳನ್ನು ಓಡಿಸುವ ಕೆಲಸ ಮಾಡುವುದಿಲ್ಲ.

ಹಲವೆಡೆ ಕಾಫಿ ಕಾಳುಮೆಣಸು ಕುಯ್ಯಲು ಕೂಡ ಸಾಧ್ಯವಾಗಿಲ್ಲ. ಕೂಲಿ ಕಾರ್ಮಿಕರು ಪ್ರಾಣಭಯದಿಂದ ಇತ್ತ ತಲೆ ಹಾಕುವುದನ್ನು ಬಿಟ್ಟಿದ್ದಾರೆ. ನೂರಾರು ಎಕರೆ ಕಾಫಿ ತೋಟಗಳನ್ನು ನಾಶಪಡಿಸಿವೆ. ಸರಿಯಾದ ಪರಿಹಾರವನ್ನು ನೀಡುತ್ತಿಲ್ಲ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಆನೆಗಳನ್ನು ಓಡಿಸಲು ಟಾಸ್ಕ್ ಫೋರ್ಸ್ ನಿರ್ಮಾಣ ಮಾಡಿ ಆನೆ ಪರಿಣಿತ ಸ್ಥಳೀಯರಿಗೆ ಉದ್ಯೋಗ ನೀಡಿ ನಿಯಂತ್ರಣಕ್ಕೆ ಒತ್ತು ನೀಡಲಾಗಿತ್ತು. ಅನೇಕ ಕಡೆ ವಿದ್ಯುತ್ ಬೇಲಿಗಳನ್ನು ನಿರ್ಮಾಣ ಮಾಡಲಾಗಿತ್ತು. ಇಂದು ಅಂತ ಹಳ್ಳಿಗಳಲ್ಲಿ ಒಂದಷ್ಟು ಆನೇಕಾಟ ಕಡಿಮೆಯಾಗಿದೆ. ಆದರೆ ಈಗಿನ ಸರ್ಕಾರ ಟಾಸ್ಕ್ ಪೋರ್ಸ್ ನೌಕರರಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಮಾಡಿದ ಕೆಲಸಕ್ಕೆ ಸಂಬಳವನ್ನು ಕೂಡ ನೀಡಿಲ್ಲ. ಟಾಸ್ಕ್ ಫೋರ್ಸ್ ಅನ್ನೋ ಹಲ್ಲು ಕಿತ್ತ ಹಾವಿನಂತೆ ಮಾಡಲಾಗಿದೆ. ಆನೆ ನಿಯಂತ್ರಣದ ಹೊಸ ಯಾವ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿಲ್ಲ.

ಆನೆಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾಗದಿದ್ದಲ್ಲಿ ಸಂತ್ರಸ್ತ ಜನರೊಂದಿಗೆ ಸೇರಿ ಜನರೊಂದಿಗೆ ಸೇರಿ ಉಗ್ರ ಹೋರಾಟವನ್ನು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ