ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ
ದಿನಾಂಕ 02.04.2025 ರಂದು ಮೂಡಿಗೆರೆ ತಾಲ್ಲೂಕ್ ಕೈಮರ ಬೆಟ್ಟದಮನೆ ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲಿನ ಬೀಗವನ್ನು ಮುರಿದು ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಪೊಲೀಸ್ ತಂಡ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸಂಜಯ್ ಆಲಿಯಾಸ್ ಹನುಮಂತ ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿಯವನಾಗಿದ್ದು, ಮೂಡಿಗೆರೆ ಸಮೀಪದ ಹಂಡುಗುಳಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಕೈಮರ ಬೆಟ್ಟದಮನೆ ಗ್ರಾಮದಲ್ಲಿ ಮಹಿಳೆಯೊಬ್ಬರ ಮನೆಯಿಂದ ಕಳವು ಮಾಡಿದ್ದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು ಸೇರಿದಂತೆ ವಿಜಯನಗರ ಜಿಲ್ಲೆ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸದರಿ ವ್ಯಕ್ತಿ ಕಳವು ಮಾಡಿದ್ದ ಒಟ್ಟು ರೂ. 5.52 ಲಕ್ಷ ಮೌಲ್ಯದ ಚಿನ್ನಾಭರಣಗಳು ಮತ್ತು ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ತಂಡದಲ್ಲಿ ಸಿಪಿಐ ಮೂಡಿಗೆರೆ ವೃತ್ತ ರಾಜಶೇಖರ್ ಕೆ ವಿ, ಪಿಎಸ್ಐ ಗೋಣಿಬೀಡು ಪೊಲೀಸ್ ಠಾಣೆ ಹರ್ಷವರ್ಧನ್ ಹೆಚ್ ಕೆ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಸುನೀಲ್ ನಾಯ್ಕ, ಸಚಿನ್, ಮನು ಕೆ ಎಸ್, ಕಾಳೀರಯ್ಯ, ಪ್ರದೀಪ್ ಮತ್ತು ಪಾಲಾಕ್ಷ ರವರು ಕಾರ್ಯನಿರ್ವಹಿಸಿರುತ್ತಾರೆ.



