17 Mudigere1A

 

 

ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಮಿತ್ರ ಜಾನಪದ ಕಲಾ ಸಂಘ ಸಂಘದ ಸಂಯುಕ್ತಾಶ್ರಯದಲ್ಲಿ ಮೇ.18ರಂದು ಪಟ್ಟಣದ ಅಡ್ಯಂತಾಯ ರಂಗಮಂದಿರಲ್ಲಿ ಸರಳ ಸಾಮೂಹಿಕ ವಿವಾಹ ಮತ್ತು ಮಲೆನಾಡ ಜಾನಪದ ಸಾಂಸ್ಕøತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಎಲ್ಲಾ ಜಾತಿಯ ಬಡ ಜನರು ಮುಖ್ಯವಾಹಿನಿಗೆ ಬರಬೇಕು. ಅಲ್ಲದೇ ಬಡವರಿಗೆ ಸಾಲದ ಹೊರೆ ಕಡಿಮೆಯಾಗಬೇಕೆಂಬ ದೃಷ್ಟಿಯಿಂದ ಈ ಸರಳ ಸಾಮೂಹಿಕ ವಿವಾಹವನ್ನು 1984ರಿಂದ ನಡೆಸಿಕೊಂಡು ಬರಲಾಗಿದೆ. ಆದರೆ ಕಾರಣಾಂತರದಿಂದ ಕೆಲ ವರ್ಷ ನಡೆಸಲು ಸಾಧ್ಯವಾಗಿರಲಿಲ್ಲ. ಚಿನ್ನದ ಬೆಲೆ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಈ ಬಾರಿ 5 ಜೋಡಿಗೆ ಮಾತ್ರ ಅರ್ಜಿ ಆಹ್ವಾನಿಸಲಾಗಿದ್ದು, ಮೊದಲು ಅರ್ಜಿ ನೀಡಿದವರಿಗೆ ಆಧ್ಯತೆ ನೀಡಲಾಗುವುದು. ಇಲ್ಲಿನ ಪ.ಪಂ.ಯಲ್ಲಿ ಏ.25ರಿಂದ ಅರ್ಜಿ ಪಡೆದು ಮೇ.5ರೊಳಗೆ ಕೇಳಿದ ಮಾಹಿತಿಯನ್ನು ಒದಗಿಸಬೇಕು. ಇಂತಹ ಪುಣ್ಯದ ಕಾರ್ಯಕ್ಕೆ ದಾನಿಗಳು ಹೆಚ್ಚಿನ ರೀತಿಯಲ್ಲಿ ಸಹಕಾರ ಮಾಡಿದರೆ ಹೆಚ್ಚುವರಿ ಜೋಡಿ ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದರು.
ಸರಳ ಸಾಮೂಹಿಕ ವಿವಾಹ ಅಂದು ಬೆಳಗ್ಗೆ 11ಗಂಟೆಗೆ ಮಂತ್ರ ಮಾಂಗಲ್ಯ ಮುಖಾಂತರ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಚಿಂತಕ ಇಂದೂದರ ಹೊನ್ನಾವರ ಆಗಮಿಸಲಿದ್ದಾರೆ. ಅಲ್ಲದೇ ಇಲ್ಲಿನ ಮದುವೆ, ಹಬ್ಬ, ಕೃಷಿ, ದೇವರ ಪೂಜೆ, ಧಾರ್ಮಿಕ ಆಚರಣೆಗಳೆಲ್ಲವೂ ದೈನಂದಿನ ಜಾನಪದ ಭಾಗವಾಗಿ ಜಾನಪದ ಸೊಗಡಿನಲ್ಲಿ ಬೆಸೆದುಕೊಂಡಿದೆ. ಜಾನಪದ ಸಂಸ್ಕøತಿಯನ್ನು ಉಳಿಸಲು ಮಲೆನಾಡಿನ ಪ್ರಸಿದ್ದ ಕಲೆಗಳಾದ ಸುಗ್ಗಿ ಕುಣಿತ, ಕೋಲಾಟ, ಜಾನಪದ ನೃತ್ಯ, ಜಾನಪದ ಗೀತೆ, ಸೋಬಾನೆ ಹಾಡು, ಭತ್ತ ಕುಟ್ಟುವ ಹಾಡು, ನಟ್ಟಿ ಹಾಡು ಸೇರಿದಂತೆ ಇತರೇ ಜಾನಪದ ಸೊಗಡಿನ ಉತ್ಸವ ನಡೆಯಲಿದೆ ಎಂದು ಹೇಳಿದರು.
ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಕಲಾವಿದ ಬಕ್ಕಿ ಮಂಜು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ