bus 1

 

 

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಂಗಳವಾರ ಬಿರುಸಿನ ಮಳೆಯಾಗಿದೆ. ಜಿಲ್ಲೆಯ ಕಳಸ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಬಿರುಗಾಳಿ  ಸಹಿತ ಮಳೆಯಾಗಿದೆ.

ಭಾರೀ ಗಾಳಿ-ಮಳೆಗೆ ಮುರಿದು ಬಿದ್ದ ಮರವೊಂದನ್ನು ತಪ್ಪಿಸಲು ಹೋಗಿ ಪ್ರವಾಸಿ ಬಸ್ ಒಂದು ಚರಂಡಿಗೆ ಇಳಿಸಿ ಪ್ರಯಾಣಿಕರ ಜೀವ ಕಾಪಾಡಿದ ಘಟನೆ ಕಳಸ ಸಮೀಪ ನಡೆದಿದೆ. ಬಸ್ ಚಾಲಕನ ಚಾಕಚಕ್ಯತೆಯಿಂದ ಬಸ್ ಪಲ್ಟಿಯಾಗೋದು ತಪ್ಪಿದೆ.

40 ಪ್ರಯಾಣಿಕರಿದ್ದ ಪ್ರವಾಸಿ ಬಸ್ ಮರಬೀಳುವುದರಿಂದ ಜಸ್ಟ್ ಬಚಾವ್ ಆಗಿದ್ದು, ಪ್ರಯಾಣಿಕರು ಪಾರಾಗಿದ್ದಾರೆ. ವಿದ್ಯುತ್ ತಂತಿಯೂ ತುಂಡಾಗಿ ಬಿದ್ದಿದ್ದು, ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಬಾಳೆಹೊನ್ನೂರು-ಕಳಸ ಮಾರ್ಗ ಮಧ್ಯೆ ಮುನ್ನೂರುಪಾಲ್ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಒಂದೆಡೆ ಮರ, ಮತ್ತೊಂದೆಡೆ ಬಸ್ ರಸ್ತೆ ಅಡ್ಡಲಾಗಿದ್ದರಿಂದ ಈ ರಸ್ತೆಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಸುಮಾರು 2 ಕಿ.ಮೀ. ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರ ಪರದಾಡುವಂತಾಗಿತ್ತು.

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಬಂದಿದ್ದ ಪ್ರವಾಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅವಘಡ ತಪ್ಪಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ