ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಸತ್ತಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಲ್ಲನ್ ಪೇಟೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನೂತನ ಬ್ರಾಂಚ್ ರಚಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಮುಸ್ತಫಾ ಆಲ್ದೂರು ರವರು ಸದಸ್ಯರಿಗೆ ಪಕ್ಷದ ತತ್ವ, ಸಿದ್ದಾಂತಗಳ ಬಗ್ಗೆ ಸವಿಸ್ತಾರವಾಗಿ ತಿಳಿಸುವ ಮೂಲಕ ಮುಂದಿನ ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಸಿದ್ದವಾಗಿದೆ ಎಂದು ತಿಳಿಸುತ್ತ ಗುಲ್ಲನ್ ಪೇಟೆ ಬ್ರಾಂಚಿನ ಆಂತರಿಕ ಚುನಾವಣೆಯನ್ನು ನಡೆಸಿದರು
ಗುಲ್ಲನ್ ಪೇಟ್ ಘಟಕದ ಅಧ್ಯಕ್ಷರಾಗಿ ಮೆಹರಾಜ್, ಉಪಾಧ್ಯಕ್ಷರಾಗಿ ಸಲ್ಮಾನ್, ಕಾರ್ಯದರ್ಶಿಯಾಗಿ ಮುಹಮ್ಮದ್ ಸೈಫಿ, ಸಹ ಕಾರ್ಯದರ್ಶಿಯಾಗಿ ಶಂಶೀರ್ ಆಯ್ಕೆಯಾದರು.
ಈ ಸಂಧರ್ಭದಲ್ಲಿ SDPI ಹಾಂದಿ ಘಟಕದ ಅಧ್ಯಕ್ಷರಾದ ಮುಜಾಯಿದ್, ಕಾರ್ಯದರ್ಶಿ ಸೈಫ್, ಜಿಲ್ಲಾ ಸಮಿತಿ ಸದಸ್ಯರಾದ ಅಲಿ ಮೂಡಿಗೆರೆ, ಮೂಡಿಗೆರೆ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಮನ್ಸೂರ್, ಹಾಂದಿ ಘಟಕದ ಉಪಾಧ್ಯಕ್ಷ ಮೆಹಬೂಬ್, ಸಹ ಕಾರ್ಯದರ್ಶಿ ಯಾಸೀನ್, ಸದಸ್ಯರಾದ ಅಫ್ಸರ್, ತಂಝೀಂ, ಅರ್ಬಾಝ್, ತಾಸೀನ್, ಸಾಬಾಝ್ ಉಪಸ್ಥಿತರಿದ್ದರು,



