ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 1283 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1036 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.80.74 ರಷ್ಟು ಫಲಿತಾಂಶ ದಾಖಲಿಸಿದೆ.
ಮೂಡಿಗೆರೆ ಬೆಥನಿ ಶಾಲೆಯ ಕೆ.ಎಸ್.ಅಪೇಕ್ಷಾ ಹಾಗೂ ರಚನಾ ಸುಧನ್ ಈ ಇಬ್ಬರು ವಿದ್ಯಾರ್ಥಿಗಳು 621 ಅಂಕ ಗಳಿಸಿ ಶೇ. 99.36 ಪಡೆದಿದ್ದಾರೆ. ಇದೇ ಶಾಲೆಯ ಕೆ.ಸಿ.ಹಿಂದೂಶ್ರೀ 618 ಅಂಕ ಪಡೆದು ಶೇ.98.88 ಪಡೆದಿದ್ದಾರೆ. ಕಳಸದ ಜೆಇಎಂ ಶಾಲೆ ವಿದ್ಯಾರ್ಥಿ ಧನ್ಯ ಜಿ.ಗೌಡ 616 ಅಂಕ, ಇದೇ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಆರ್.ಪೂಜಾರಿ 615 ಅಂಕ, ಕಳಸದ ಕೆಪಿಎಸ್ ಶಾಲೆಯ ವಿದ್ಯಾರ್ಥಿ ಕೆ.ಎಸ್.ಅಶ್ವಿತಾ 615 ಅಂಕ ಗಳಿಸಿದ್ದಾರೆ.

ಮೂಡಿಗೆರೆ ತಾಲ್ಲೂಕು ಕುನ್ನಹಳ್ಳಿ ಗ್ರಾಮದ ಕೃಷಿಕರು ಮತ್ತು ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್. ಶಿವಾನಂದ, ಶ್ರೀಮತಿ ಚಾಂದಿನಿ ಅವರ ಪುತ್ರಿ ಮೂಡಿಗೆರೆ ಬೆಥನಿ ಶಾಲೆ ವಿದ್ಯಾರ್ಥಿನಿ ಕೆ.ಎಸ್. ಅಪೇಕ್ಷಾ 625 ಕ್ಕೆ 621 ಅಂಕಗಳನ್ನು ಗಳಿಸಿದ್ದಾರೆ. ಮಗಳ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.



