ಆಪರೇಷನ್ ಸಿಂಧೂರ್ ಕಾರ್ಯಚರಣೆಯಲ್ಲಿ ಹೋರಾಡಿದ ಸೈನಿಕರಿಗೆ ಆತ್ಮಸ್ತೈರ್ಯ ತುಂಬಲು ಮೇ 23 ಶುಕ್ರವಾರ ಸಂಜೆ ಮೂಡಿಗೆರೆ ಪಟ್ಟಣದಲ್ಲಿ ಎಲ್ಲಾ ಪಕ್ಷ ಹಾಗೂ ಸಂಘಟನೆಗಳಿಂದ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ವಿನಯ್ ಹಳೆಕೋಟೆ ತಿಳಿಸಿದ್ದಾರೆ.
ಬುಧವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ಭಯೋತ್ಪಾಧನೆಯಿಂದ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ದೇಶದ ಏಕತೆಗೆ ವಿರೋಧವಾಗಿರುವ ಈ ಭಯೋತ್ಪಾಧನೆಯನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ. ಭಾರತೀಯರೆಲ್ಲರೂ ನಮ್ಮ ದೇಶದ ಹೆಮ್ಮೆಯ ವೀರ ಸೈನಿಕರ ಜೊತೆಯಲ್ಲಿರುತ್ತೇವೆಂಬ ಸಂದೇಶ ಸಾರುವ ದೃಷ್ಟಿಯಿಂದ ಈ ತಿರಂಗ ಯಾತ್ರೆ ಹ್ಮಮಿಕೊಳ್ಳಲಾಗಿದೆ. ಹಾಗಾಗಿ ಎಲ್ಲಾ ಪಕ್ಷ ಹಾಗೂ ಸಂಘಟನೆ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಿರಂಗ ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.



