ಮೂಡಿಗೆರೆ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ರಾಜ್ಯ ಕ್ರೈಸ್ತರ ಅಭಿವೃದ್ದಿ ನಿಗಮದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಣಕಲ್ ನ ಹರ್ಷ ಮೆಲ್ವಿನ್ ಲಸ್ರಾದೊ ಅವರನ್ನು ಮೂಡಿಗೆರೆ ಗ್ಯಾರಂಟಿ ಸಮಿತಿಯ ಸಭೆಯಲ್ಲಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಚ್.ಜಿ.ಸುರೇಂದ್ರಗೌಡ ಅವರು ಮಾತನಾಡಿ ರಾಜ್ಯ ಕ್ರೈಸ್ತರ ಅಭಿವೃದ್ದಿ ನಿಗಮದ ನೂತನ ನಿರ್ದೇಶಕರಾಗಿ ಹರ್ಷ ಮೆಲ್ವಿನ್ ಅವರು ಆಯ್ಕೆಯಾಗಿರುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ. ಪಕ್ಷವನ್ನು ಇನ್ನಷ್ಟು ಬಲಪಡಿಸುವ ಜೊತೆಗೆ ಸಮುದಾಯದ ಏಳಿಗೆಗಾಗಿ ಅವರು ತಮಗೆ ಸಿಕ್ಕಿರುವ ಜವಾಬ್ದಾರಿಯಿಂದ ಶ್ರಮಿಸಲಿ. ನಮ್ಮ ಪ್ರೋತ್ಸಾಹ ಅವರಿಗೆ ಸದಾ ಇರುತ್ತದೆ ಎಂದರು.
ಸನ್ಮಾನ ಸಮಾರಂಭದಲ್ಲಿ ಮೂಡಿಗೆರೆ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಬಿ.ಎಸ್.ಜಯರಾಮ್ ಹಾಗೂ ಗ್ಯಾರಂಟಿ ಸಮಿತಿಯ ಎಲ್ಲಾ ಸದಸ್ಯರು ಹಾಗೂ ತಾಲ್ಲೂಕು ಪಂಚಾಯಿತಿ ಇಓ ದಯಾವತಿ ಇದ್ದರು.



